ಫ್ಲೈನಿಂದ ಬರಲಿದೆ ಸಿಂಪಲ್ ಹ್ಯಾಂಡ್ ಸೆಟ್

ಫ್ಲೈDS109 ಎಂಬ ಈ ಮೊಬೈಲ್ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವ ಸೂಚನೆಯಿದೆ. ಜೆಎಸ್ ಎಂ ಹ್ಯಾಂಡ್ ಸೆಟ್ ಆಗಿರುವ ಫ್ಲೈDS109 ಮೊಬೈಲ್ ನಲ್ಲಿ ಡ್ಯೂಯಲ್ ಸಿಮ್ ಇರುವುದು ವಿಶೇಷ. ಬಾರ್ ಫೋನ್ ಮಾದರಿಯಲ್ಲಿರುವ ಈ ಫೋನ್ ನಲ್ಲಿ ತುಂಬಾ ಆಕರ್ಷಿತ ಆಯ್ಕೆಗಳಿಲ್ಲದಿದ್ದರೂ ಸರಳ ಮೊಬೈಲ್ ಬಯಸುವವರಿಗೆ ಇದು ಹೆಚ್ಚು ಸೂಕ್ತ.
ಫ್ಲೈ DS109 ಮೊಬೈಲ್ ವಿಶೇಷತೆ:
* 105 x 46 x 16 ಎಂಎಂ ಸುತ್ತಳತೆ
* 70 ಗ್ರಾಂ ತೂಕ
* 1.8 ಇಂಚಿನ TFT ಡಿಸ್ಪ್ಲೇ, 128 x 160 ಪಿಕ್ಸಲ್ ರೆಸೊಲ್ಯೂಷನ್
* 1.3 ಮೆಗಾ ಪಿಕ್ಸಲ್ ಕ್ಯಾಮೆರಾ, 1280 x 1024 ಪಿಕ್ಸಲ್ ರೆಸೊಲ್ಯೂಷನ್
* ಡಿಜಿಟಲ್ ಝೂಮ್
* ಟೆಲಿಸ್ಕೋಪಿಕ್ ಆಂಟೆನಾ ಜೊತೆ ಎಫ್ ಎಂ ರೇಡಿಯೋ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD/T-ಫ್ಲಾಶ್ ಮೆಮೊರಿ ಕಾರ್ಡ್
* 3.5 ಎಂಎಂ ಆಡಿಯೋ ಜ್ಯಾಕ್
* ಆಡಿಯೋ, ವಿಡಿಯೋ ಫಾರ್ಮೆಟ್ ಬೆಂಬಲಿತ
* GPRS ಸಂಪರ್ಕ, WAP ಬ್ರೌಸರ್
* v2.0 ಬ್ಲೂಟೂಥ್, USB,
1100 mAh Li ion ಬ್ಯಾಟರಿ ಪಡೆದುಕೊಂಡಿರುವ ಈ ಮೊಬೈಲ್ 8 ಗಂಟೆ ಟಾಕ್ ಟೈಂ ಮತ್ತು 168 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.
ಈ ಮೊಬೈಲ್ ಭಾರತದಲ್ಲಿ ಇನ್ನೂ ಬಿಡುಗಡೆಗೊಂಡಿಲ್ಲ. ಆದ್ದರಿಂದ ಈ ಮೊಬೈಲಿನ ಬೆಲೆಯ ಕುರಿತೂ ಮಾಹಿತಿ ತಿಳಿದುಬಂದಿಲ್ಲ. ಆದರೆ ಇನ್ನಿತರ ಫ್ಲೈ ಮೊಬೈಲ್ ಗಳಂತೆ ಈ ಮೊಬೈಲ್ ಕೂಡ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications








