ಫ್ಲೈ ನಿಂದ ಮತ್ತೊಂದು ಡ್ಯೂಯಲ್ ಸಿಮ್ ಹ್ಯಾಂಡ್ ಸೆಟ್

Posted By: Staff
ಫ್ಲೈ ನಿಂದ ಮತ್ತೊಂದು ಡ್ಯೂಯಲ್ ಸಿಮ್ ಹ್ಯಾಂಡ್ ಸೆಟ್

ಇತ್ತೀಚಿನ ದಿನಗಳಲ್ಲಿ ಅನೇಕ ವಿನ್ಯಾಸದ ಮೊಬೈಲ್ ಗಳು ಮಾರುಕಟ್ಟೆಗೆ ಬರುತ್ತಿವೆ. ವಿನ್ಯಾಸದ ವಿಷಯಕ್ಕೆ ಬಂದರೆ ಅತ್ಯುನ್ನತ ವಿನ್ಯಾಸವನ್ನು ಗ್ರಾಹಕರಿಗೆಂದೇ ನೀಡುವ ಕಂಪನಿಯೊಂದು ಇಲ್ಲಿದೆ. ಅದೇ ಫ್ಲೈ ಮೊಬೈಲ್ ಕಂಪನಿ. ಭಾರತೀಯ ಮಾರುಕಟ್ಟೆಗೆ ಇನ್ನು ಕೆಲವೇ ದಿನಗಳಲ್ಲಿ ಫ್ಲೈ E200 ಎಂಬ ಮೊಬೈಲನ್ನು ಕಂಒನಿ ಬಿಡುಗಡೆ ಮಾಡಲಿದೆ.

ಡ್ಯೂಯಲ್ ಸಿಮ್ ಆಯ್ಕೆ ಹೊಂದಿರುವ ಈ ಮೊಬೈಲ್ ನಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸುವ ಅನೇಕ ಆಯ್ಕೆಗಳಿವೆ. ಜಿಎಸ್ ಎಂ ಬೆಂಬಲಿತ ಹ್ಯಾಂಡ್ ಸೆಟ್ ನಲ್ಲಿ ಏನೇನು ಆಯ್ಕೆಗಳಿವೆ ಎಂದು ಇಲ್ಲಿ ತಿಳಿಯಿರಿ.

ಫ್ಲೈ E200 ಮೊಬಲ್ ವಿಶೇಷತೆ:

* ಡ್ಯೂಯಲ್ ಸಿಮ್

*  103.65 x 7.2 × 13.5 ಎಂಎಂ ಸುತ್ತಳತೆ

* 92 ಗ್ರಾಂ ತೂಕ

* 2.8 ಇಂಚಿನ ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್

* TFT ಟಚ್ ಸ್ಕ್ರೀನ್

* VGA ಕ್ಯಾಮೆರಾ, 640 x 480 ಪಿಕ್ಸಲ್ ರೆಸೊಲ್ಯೂಷನ್

* 8 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್

* ಆಡಿಯೋ ವಿಡಿಯೋ ಪ್ಲೇಯರ್, ಎಫ್ ಎಂ

* 3.5ಎಂಎಂ ಆಡಿಯೋ ಜ್ಯಾಕ್

* ಸಾಮಾಜಿಕ ತಾಣಗಳ ಆಯ್ಕೆ

* WAP ಬ್ರೌಸರ್, GPRS

* v2.0 ಬ್ಲೂಟೂಥ್, ಮೈಕ್ರೊ USB ಪೋರ್ಟ್

* 1000 mAh ಬ್ಯಾಟರಿ, 3 ಗಂಟೆ ಟಾಕ್ ಟೈಂ, 200 ಗಂಟೆ ಸ್ಟ್ಯಾಂಡ್ ಬೈ ಟೈಂ

ಹಳದಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಾಗಲಿರುವ ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot