ನಿಮ್ಮ ಐಫೋನ್ ಸಂರಕ್ಷಣೆ ಈ ವಿಧಾನದಲ್ಲಿ ನಡೆಯಲಿ

By Shwetha
|

ಐಫೋನ್ ಅನ್ನು ಕೊಂಡುಕೊಳ್ಳುವುದೇ ಹೆಚ್ಚಿನ ಜನರ ಕನಸಾಗಿದೆ. ಐಫೋನ್ ಅನ್ನು ಕೊಂಡುಕೊಳ್ಳುವುದು ಒಂದು ಕನಸಾದರೆ ಅದನ್ನು ಭದ್ರವಾಗಿ ಜೋಪಾನ ಮಾಡುವುದೂ ಕೂಡ ಹೆಚ್ಚು ಮುಖ್ಯವಾದುದು.

ಐಫೋನ್ ಮಾಲೀಕರ ಹೆಮ್ಮೆಯಾಗಿರುವ ಮತ್ತು ನಿಮ್ಮ ಪಕ್ಕದವರ ಕಣ್ಣು ಕುಕ್ಕುವಂತಿರುವ ಐಫೋನ್ ಅನ್ನು ಖರೀದಿಸುವುದು ಗತ್ತಿನ ವಿಷಯವಾದರೆ ಅದನ್ನು ಕಾಪಾಡಿಕೊಳ್ಳುವುದೂ ಕೂಡ ಅತ್ಯಂತ ಮಹತ್ವದ ವಿಚಾರವಾಗಿದೆ. ಪ್ರಸ್ತುತ ತಂತ್ರಜ್ಞಾನಕ್ಕೆ ನಾವು ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಕಡಿಮೆಯೇ ಏಕೆಂದರೆ ನಿಮ್ಮ ಕಳೆದು ಹೋಗಿರುವ ಫೋನ್‌ ಅನ್ನು ಹುಡುಕುವ ವಿಧಾನದಿಂದ ಹಿಡಿದು ಕಳೆದು ಹೋಗದಂತೆ ಅದನ್ನು ಕಾಪಾಡಿಕೊಳ್ಳುವ ಕೆಲವೊಂದು ತಂತ್ರಗಳನ್ನು ಕೂಡ ಈಗಿನ ತಂತ್ರಜ್ಞಾನ ನಿಮಗೆ ತಿಳಿಸಿಕೊಟ್ಟಿದೆ.

ಇಂದಿನ ಲೇಖನದಲ್ಲಿ ನಿಮ್ಮ ದುಬಾರಿ ಐಫೋನ್ ಅನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಕುರಿತು ಕೆಲವೊಂದು ಮಾಹಿತಿಗಳನ್ನು ನಾವು ಇಲ್ಲಿ ನೀಡುತ್ತಿದ್ದು ಇದು ನಿಮಗೆ ಖಂಡಿತ ಪ್ರಯೋಜನಕಾರಿಯಾಗಲಿದೆ.

#1

#1

ನಿಮ್ಮ ಮೈಕ್ರೋಫೋನ್ ಅನ್ನು ಪ್ರವೇಶಿಸುವ ಹೆಚ್ಚಿನ ಅಪ್ಲಿಕೇಶನ್‌ಗಳಿವೆ. ನಿಮ್ಮ ಧ್ವನಿ ಆದೇಶಗಳನ್ನು ಆಲಿಸಲು ಕೆಲವೊಂದು ಪ್ರವೇಶವನ್ನು ಬಯಸಿದರೆ ಇನ್ನು ಕೆಲವು ನೀವು ಮಾತನಾಡುತ್ತಿರುವುದನ್ನು ಆಲಿಸಲು ಪ್ರವೇಶವನ್ನು ಬಯಸುತ್ತವೆ. ಅಪ್ಲಿಕೇಶನ್‌ಗಳಿಗಾಗಿ ನೀವು ಈ ವೈಶಿಷ್ಟ್ಯವನ್ನು ಆಫ್ ಮಾಡುವ ಅನುಕೂಲವನ್ನು ಐಫೋನ್ ನಿಮಗೆ ಒದಗಿಸುತ್ತದೆ.
ಹೀಗೆ ಮಾಡಿ: Open Settings > Privacy > Microphone to view a list of apps that have access to your device's microphone.

#2

#2

ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ನಿರ್ಬಂಧಿಸುವ ಹೆಚ್ಚಿನ ಕುಕೀಗಳಿದ್ದು ಖಾಸಗಿ ಬ್ರೌಸಿಂಗ್ ಮೋಡ್ ಅನ್ನು ಒಳಗೊಂಡಿರುವಂತಹ ಐಓಸ್‌ನಲ್ಲಿರುವ ಸಫಾರಿಯನ್ನು ಈ ಸಮಯದಲ್ಲಿ ನೀವು ಬಳಸಬಹುದು. ಕೆಳಗಿನ ಬಲಭಾಗದಲ್ಲಿರುವ 'ಶೋ ಐಕಾನ್' ಅನ್ನು ತಟ್ಟುವ ಮೂಲಕ ನಂತರ ನೀವು ಬ್ರೌಸ್ ಮಾಡುವಾಗ, ಎಡ ಮೂಲೆಯಲ್ಲಿ ಗೋಚರಿಸುವ 'ಖಾಸಗಿ' (ಪ್ರೈವೇಟ್) ಅನ್ನು ಕ್ಲಿಕ್ ಮಾಡಬೇಕು.

#3

#3

ನಿಮ್ಮ ಆವರ್ತನೆ ಸ್ಥಳಗಳನ್ನು ಟ್ರ್ಯಾಕ್ ಮಾಡುವುದು ಉಪಯೋಗಕರವಾಗಿರಬಹುದು, ಆದರೆ ಇದು ಒಮ್ಮೊಮ್ಮೆ ನಿಮಗೆ ತಲೆನೋವಾಗಿ ಪರಿಣಮಿಸುತ್ತದೆ ಕೂಡ. ನಿಮ್ಮನ್ನು ಸಿಕ್ಕಿಸಲು ಮತ್ತೊಬ್ಬರಿಗೆ ಈ ಆವರ್ತನೆಗಳು ಸಹಾಯ ಮಾಡಬಹುದು. ಆದ್ದರಿಂದ ಇದನ್ನು ನಿಷ್ಕ್ರಿಯಗೊಳಿಸುವುದು ಉತ್ತಮವಾಗಿದೆ.

#4

#4

ಫೋನ್ ಅನ್ನು ಮರೆತುಬಿಡುವ ಮತ್ತು ಕಳೆದುಕೊಳ್ಳುವ ಭೀತಿ ಉಳ್ಳವರಿಗೆ ಇದೊಂದು ಉತ್ತಮ ಸಲಹೆಯಾಗಿದೆ. ಕಳೆದುಹೋಗಿರುವ ಫೋನ್ ಅನ್ನು ಕಂಡುಹುಡುಕಲು, ಲಾಕ್ ಮಾಡಲು ಡೇಟಾವನ್ನು ಒರೆಸಬಹುದಾಗಿದೆ. ಫೋನ್ ಕಳೆದುಹೋಗಿದೆ ಇಲ್ಲವೇ ಕಳುವಾಗಿದೆ ಎಂಬ ಸೂಚನೆಯನ್ನು ನೀಡಲು ಕೂಡ ಇದನ್ನು ಬಳಸಬಹುದಾಗಿದೆ.

#5

#5

ನಿಮ್ಮ ಸಂಪರ್ಕ ಮಾಹಿತಿಯೊಂದಿಗೆ, ವೆಬ್‌ ಫಾರ್ಮ್‌ಗಳನ್ನು ಸ್ವಯಂಭರ್ತಿಗೊಳಿಸುವ ಅಂದರೆ ಸಂಗ್ರಹಿತ ಪಾಸ್‌ವರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಆಟೊಫಿಲ್ ಮಾಡುವ ಆಯ್ಕೆಯನ್ನು iOS ಗಾಗಿ ಸಫಾರಿ ಹೊಂದಿದೆ. ನಿಮ್ಮ ಐಫೋನ್ ಅಥವಾ ಐಪ್ಯಾಡ್ ಇದನ್ನು ಬಳಸುವುದು ನಿಮಗೆ ಇಷ್ಟವಿಲ್ಲದಿದ್ದಲ್ಲಿ, ಈ ವೈಶಿಷ್ಟ್ಯವನ್ನು ಹೀಗೆ ನಿಷ್ಕ್ರಿಯಗೊಳಿಸಿ Settings > Safari > Passwords & Autofill and turning off all the options in this section.

Best Mobiles in India

Read more about:
English summary
This article tells about Follow these steps and secure your iphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X