ಶೇ.50ರಷ್ಟು ಶಾಕಿಂಗ್ ಡಿಸ್ಕೌಂಟ್ಸ್!!..14 ಸಾವಿರದ ಸಚಿನ್(SRT) ಫೋನ್‌ ಇದೀಗ ರೂ.7,795 ರೂ.ಗೆ!!

ತಿಂಗಳ ಹಿಂದಷ್ಟೆ 14 ಸಾವಿರ ರೂಪಾಯಿಗಳಿಗೆ ಬಿಡುಗಡೆಯಾಗಿದ್ದ ಸ್ಮಾರ್ಟಾನ್ ಫೋನ್ ಬೆಲೆ ಇದೀಗ ಶೇ.50ರಷ್ಟು ಇಳಿಕೆಯಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 7.795 ರೂಪಾಯಿಗೆ ಲಭ್ಯವಿದೆ.

|

ಶಿಯೋಮಿ, ಲೆನೊವೊ ಸ್ಮಾರ್ಟ್‌ಫೋನ್‌ಗಳ ಮುಂದೆ ಸಚಿನ್ ಹೆಸರಿನ ಮೊಬೈಲ್ ಆಟ ನಡೆದಿಲ್ಲ ಎಂದು ಆಡಿಕೊಂಡಿದ್ದ ಮೊಬೈಲ್ ಮಾರುಕಟ್ಟೆಯ ತಜ್ಞರಿಗೆ ಶಾಕ್ ನೀಡಲು ಸ್ಮಾರ್ಟಾನ್ (SRT) ಸ್ಮಾರ್ಟ್‌ಫೋನ್ ತಯಾರಾಗಿದೆ.!! SRT ಸ್ಮಾರ್ಟ್‌ಫೋನ್‌ ಇದೀಗ ರೂ.7.795 ರೂಪಾಯಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.!!

ಹೌದು, 4 ತಿಂಗಳ ಹಿಂದಷ್ಟೆ 14 ಸಾವಿರ ರೂಪಾಯಿಗಳಿಗೆ ಬಿಡುಗಡೆಯಾಗಿದ್ದ ಸ್ಮಾರ್ಟಾನ್ ಫೋನ್ ಬೆಲೆ ಇದೀಗ ಶೇ.50ರಷ್ಟು ಇಳಿಕೆಯಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 7.795 ರೂಪಾಯಿಗೆ ಲಭ್ಯವಿದೆ. ಹಾಗಾಗಿ, ಸದ್ಯ ಮಾರುಕಟ್ಟೆಯಲ್ಲಿ ಮೆರೆಯುತ್ತಿರುವ ರೆಡ್‌ಮಿ ನೋಟ್ 4 ಮತ್ತು ಮೋಟೋ G5 ಪ್ಲಸ್ ಫೋನಿಗೆ ಭಾರಿ ಏಟು ನೀಡಲಿದೆ.!!

14 ಸಾವಿರದ ಸಚಿನ್(SRT) ಫೋನ್‌ ಇದೀಗ ರೂ.7,795 ರೂ.ಗೆ!!

ಬಿಡುಗಡೆಯಾದಾಗಷ್ಟೆ ಸದ್ದು ಮಾಡಿದ್ದ ಎಸ್‌ಆರ್‌ಟಿ ಫೋನ್ ಇದೀಗ 4GB RAM/ 32GB ROM ವೆರಿಯಂಟ್‌ನ ಬೆಲೆಯನ್ನು ಇಳಿಸಿದ್ದು, ಹಾಗಾದರೆ, SRT ಸ್ಮಾರ್ಟ್‌ಫೋನ್‌ ಫೀಚರ್ಸ್ ಏನು? ರೆಡ್‌ಮಿ ನೋಟ್‌4 ಗಿಂತಲೂ ಕೊಳ್ಳಲು ಯೋಗ್ಯವೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸ್ನಾಪ್‌ಡ್ರಾಗನ್ 652 ಪ್ರೋಸೆಸರ್!!

ಸ್ನಾಪ್‌ಡ್ರಾಗನ್ 652 ಪ್ರೋಸೆಸರ್!!

SRT ಸ್ಮಾರ್ಟ್‌ಫೋನ್‌ನಲ್ಲಿ 1.8GHz ಸ್ನಾಪ್‌ಡ್ರಾಗನ್ 652 ಪ್ರೋಸೆಸರ್ ಅಳವಡಿಸಲಾಗಿದೆ. ಇದೇ ಮೊದಲ ಭಾರಿ ಅತ್ಯಂತ ಕಡಿಮೆ ಬೆಲೆಗೆ ಸ್ನಾಪ್‌ಡ್ರಾಗನ್ 652 ಪ್ರೋಸೆಸರ್ ಮತ್ತು 4G RAM ಹೊಂದಿರುವ ಸ್ಮಾರ್ಟ್‌ಫೋನ್ ಒಂದು ಇಷ್ಟು ಕಡಿಮೆ ಬೆಲೆಗೆ ಬಿಡುಗಡೆಯಾಗಿ ದಾಖಲೆ ಸೃಷ್ಟಿಸಿದೆ.!!

13 MP ಮತ್ತು 5 MP ಕ್ಯಾಮೆರಾ!!

13 MP ಮತ್ತು 5 MP ಕ್ಯಾಮೆರಾ!!

SRT ಸ್ಮಾರ್ಟ್‌ಫೋನಿನಲ್ಲಿ 13 MP ಹಿಂಬದಿ ಕ್ಯಾಮೆರಾವನ್ನು ನೀಡಲಾಗಿದ್ದು, ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ರೆಡ್‌ಮಿ ಫೋನಿನಷ್ಟೆ ಕ್ಯಾಮೆರಾ ಫೀಚರ್ ಹೊಂದಿರುವ ಈ ಫೋನ್ ರೆಡ್‌ಮಿಗಿಂತಲೂ ಸೆಲ್ಫಿಯನ್ನು ಸೆರೆಹಿಡಿಯಲು ಅತ್ಯುತ್ತಮವಾಗಿದೆ.!

5.5 ಇಂಚಿನ ಪರದೆ!!

5.5 ಇಂಚಿನ ಪರದೆ!!

SRT ಸ್ಮಾರ್ಟ್‌ಫೋನ್‌ನಲ್ಲಿ 5.5 ಇಂಚಿನ FHD ಪರದೆಯನ್ನು ಇದೆ. 2.5D ಗ್ಲಾಸ್ ಸುರಕ್ಷೆಯನ್ನು ಹೊಂದಿರುವ ಈ ಫೋನ್ ಡಿಸ್ಪ್ಲೇಯಲ್ಲಿಯೂ ರೆಡ್‌ಮಿ ನೋಟ್ ಗುಣಮಟ್ಟಕ್ಕೆ ಸರಿಸಮಾನವಾಗಿದೆ ಎನ್ನಬಹುದು. ವಿಡಿಯೋ ಪ್ರಿಯರಿಗೆ ಹೆಚ್ಚು ರೆಸಲ್ಯೂಶನ್ ಹೊಂದಿರುವ ಪರದೆ ಹೇಳಿಮಾಡಿಸಿದಂತಿದೆ.!!

3,000mAh ಬ್ಯಾಟರಿ!!

3,000mAh ಬ್ಯಾಟರಿ!!

3,000mAh ಬ್ಯಾಟರಿಯನ್ನು SRT ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿದೆ. ರೆಡ್‌ಮಿಗಿಂತ ಸ್ವಲ್ಪ ಕಡಿಮೆ ಬ್ಯಾಟರಿ ಶಕ್ತಿ ಹೊಂದಿದೆ ಎನ್ನಬಹುದಾದರೂ, ಕ್ವಿಕ್ ಚಾರ್ಜರ್ .2.0 ತಂತ್ರಜ್ಞಾನ SRT USB Type-C ಚಾರ್ಜಿಂಗ್ ಪೋರ್ಟ್ ಹೊಂದಿರುವ ಈ ಫೋನ್ ಬ್ಯಾಟರಿ ಬಾಳಿಕೆಯಲ್ಲೂ ಎತ್ತಿದ ಕೈ.!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಇತೆರೆ ಏನೆಲ್ಲಾ ಫೀಚರ್ಸ್?

ಇತೆರೆ ಏನೆಲ್ಲಾ ಫೀಚರ್ಸ್?

4G ವೋಲ್ಟ್, ೦.೦9 ಸೆಕೆಂಡ್‌ ಸ್ಪೀಡ್‌ ಫಿಂಗರ್‌ಪ್ರಿಂಟ್, ಡ್ಯುಯಲ್ ಸಿಮ್ ಸೇರಿ ಬಜೆಟ್ ಫೋನ್ ಹೊಂದಿರಬೇಕಾದ ಬಹುತೇಕ ಎಲ್ಲಾ ಫೀಚರ್‌ಗಳನ್ನು SRT ಸ್ಮಾರ್ಟ್‌ಫೋನ್‌ ಹೊಂದಿದೆ.!! ಹಾಗಾದರೆ, ಇನ್ನೇಕೆ ತಡ ಆಂಡ್ರಾಯ್ಡ್ ನೌಗಾಟ್‌ನಲ್ಲಿ ಅದ್ಬುತ ಕಾರ್ಯನಿರ್ವಹಣೆ ನೀಡುವ SRT ಸ್ಮಾರ್ಟ್‌ಫೋನ್‌ ಅನ್ನು ದಾರಾಳವಾಗಿ ಖರೀದಿಸಬಹುದು ?

Best Mobiles in India

English summary
SRT phone at Rs 7,500 is an Excellent Value for Money Proportion. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X