ವಿವೋ V11 Pro ಸ್ಮಾರ್ಟ್‌ಫೋನ್ ಖರೀದಿಗೆ ಈ 4 ಕಾರಣಗಳು ಸಾಕು..!
ಸದ್ಯ ವಿವೋ ಸಂಸ್ಥೆಯಿಂದ ಬಿಡುಗಡೆಗೊಂಡಿರುವ ನೂತನ ಫೋನ್ ವಿವೋ ವಿ11 ಪ್ರೋ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಅತ್ಯುತ್ತಮ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ವಿವೋ ವಿ11 ಹಲವು ಇತರ ಫೋನ್ ಗಳಿಗೆ ಸ್ಪರ್ಧೆಯೊಡ್ಡುತ್ತಿರುವುದೇನೊ ನಿಜ. ಅದರ ಜೊತೆಗೆ ಇತರ ವಿಶೇಷ ವೈಶಿಷ್ಟ್ಯತೆಗಳು ಗ್ರಾಹಕರನ್ನು ಸೆಳೆಯುತ್ತಿದೆ.

ನೀವ್ಯಾಕೆ ವಿವೋ ವಿ11 ಪ್ರೋ ಫೋನ್ ಖರೀದಿಸಬಹುದು ಎಂಬ ಬಗ್ಗೆ ಪ್ರಮುಖ ನಾಲ್ಕು ಕಾರಣಗಳನ್ನು ನಾವಿಲ್ಲಿ ಪಟ್ಟಿ ಮಾಡುತ್ತಿದ್ದೇವೆ.

2ಪಿಡಿ ಡ್ಯುಯಲ್ ಪಿಕ್ಸಲ್ ಕ್ಯಾಮರಾ:
ನೀವು ನೋಡಿದ ಚಿತ್ರವನ್ನು ಅದೇ ರೀತಿಯಲ್ಲೇ ಕ್ಲಿಕ್ಕಿಸಿ ನಿಮಗೆ ಅಧ್ಬುತ ಫೋಟೋ ಕ್ಲಿಕ್ಕಿಸಿದ ಅನುಭವ ನೀಡುವುದಕ್ಕಾಗಿ ವಿವೋ ವಿ11 ಪ್ರೋ ನ 2ಪಿಡಿ ಡುಯಲ್ ಪಿಕ್ಸಲ್ ಕ್ಯಾಮರಾ ಸಹಾಯ ಮಾಡುತ್ತದೆ. ಉತ್ತಮ ಸ್ಪೀಡ್ ಜೊತೆಗೆ ನಿಖರವಾದ ಫೋಟೋ ಸೆರೆಹಿಡಿಯಲು ಈ ಕ್ಯಾಮರಾ ಅಧ್ಬುತವಾಗಿದೆ. ಇದರ ಕ್ಯಾಮರಾ ಸೆನ್ಸರ್ ನಲ್ಲಿ 24 ಮಿಲಿಯನ್ ಫೋಟೋ ಸೆನ್ಸಿಟೀವ್ ಯುನಿಟ್ ಗಳಿದೆ. ಈ ಯುನಿಟ್ ಗಳು 12 ಮಿಲಿಯನ್ ಡುಯಲ್ ಪಿಕ್ಸಲ್ ಯುನಿಟ್ ನ್ನು ಸಂಯೋಜಿಸಲು ಒಂದು ಪಿಕ್ಸಲ್ ಆಗಿ ಕಂಬೈನ್ ಆಗುತ್ತದೆ.
ಇದರ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಫೇಸ್ ಡಿಟೆಕ್ಷನ್ ಮತ್ತು ಬೆಳಕಿನಲ್ಲಿ ಅತೀ ವೇಗವಾಗಿ ಫೋಕಸ್ ಮಾಡುವ ತಾಕತ್ತು. ಕೆಲವು ಭವಿಷ್ಯದ ವೈಶಿಷ್ಟ್ಯತೆಗಳು ಅನ್ನಿಸಿರುವ ಫೋಟೋ ಕ್ಲಿಕ್ಕಿಸಿದ ನಂತರ ಫೋಕಸ್ ಬದಲಾವಣೆ ಮಾಡುವಂತ ವಿಶೇಷತೆಗಳಿಗೆ ಇದು ಬೆಂಬಲ ನೀಡುತ್ತದೆ. ಎಐ ಇಂಜಿನ್ ಜೊತೆಗೆ ಕಂಬೈನ್ ಆಗಿರುವ ಇದು ಪ್ರತಿಬಾರಿಯೂ ಅತ್ಯುದ್ಭುತ ಕ್ಯಾಪ್ಚರ್ ಗೆ ಸಾಕ್ಷಿಯಾಗುತ್ತದೆ.

4th ಜನರೇಷನ್ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್:
ವಿವೋ ಫಿಂಗರ್ ಪ್ರಿಂಟ್ ಟೆಕ್ನಾಲಜಿಯಲ್ಲಿ ಬಹಳ ಮುಂದುವರೆದ ಕಂಪೆನಿ ಆಗಿದೆ. ಡಿಸ್ಪ್ಲೇ ಒಳಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ವಿಸಿಬಲ್ ಮಾಡಿರುವ ವಿವೋ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನಲ್ಲಿ ಒಂದು ಕ್ರಾಂತಿಯನ್ನೇ ಹುಟ್ಟುಹಾಕಿದೆ ಮತ್ತು ಇದು ಬೆಜೆಲ್ ಲೆಸ್ ಫೋನ್ ಗಳ ತಯಾರಿಕೆಗೆ ಇದು ನೆರವಾಗಿದೆ. ಅಂದರೆ ವಿವೋ ವಿ11 ಪ್ರೋ ಮೂಲಕ ಹಿಂಭಾಗದಲ್ಲಿ ಮೌಂಟ್ ಆಗಿರುವ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳಿಗೆ ಬಾಯ್ ಬಾಯ್ ಹೇಳಲಾಗಿದೆ. ಈ ಇನ್ -ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ತನ್ನ 4ನೇ ಪೀಳಿಗೆಯ ಅವತಾರವಾಗಿದೆ ಮತ್ತು ಹೆಚ್ಚು ವೇಗವಾಗಿದೆ ಜೊತೆಗೆ ಈ ಹಿಂದಿಗಿಂತಲೂ ಹೆಚ್ಚು ನಿಖರವಾಗಿದೆ.

ಅಂದವಾಗಿರುವ ಸ್ಕ್ರೀನ್ ಮತ್ತು ಅದ್ಭುತ ಡಿಸೈನ್ :
ವಿವೋ ವಿ11 ಪ್ರೋ 6.4 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು ಇದು ಬಹಳ ಅಂದವಾಗಿದೆ. ಡಿಸ್ಪ್ಲೇಯು ಹೈ ಗ್ರೇಡಿನ AMOLED panel ನ್ನು ಹೊಂದಿದೆ ಮತ್ತು ಇದರ ಬಣ್ಣಗಳು ಶ್ರೀಮಂತಿಕೆಯ ಲುಕ್ ನೀಡಿದೆ. ಬಿಳಿ ಮತ್ತು ಕಪ್ಪು ವರ್ಣಗಳಲ್ಲೂ ಕೂಡ ಇದು ಲಭ್ಯವಿದೆ. 19.5:9 ಅನುಪಾತವನ್ನು ಸ್ಕ್ರೀನ್ ಹೊಂದಿದೆ ಮತ್ತು ಚಲನಚಿತ್ರ ಮತ್ತು ವೀಡಿಯೋ ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ. ಇದೇ ಕಾರಣಕ್ಕೆ ಫೋನ್ ಬಹಳ ತೆಳುವಾಗಿದ್ದು ಕೈಯಲ್ಲಿ ಹಿಡಿದುಕೊಳ್ಳಲು ಬಹಳ ಸುಲಭವಾಗಿದೆ . ವೇಗವಾದ ಮತ್ತು ನಿಖರವಾದ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ ಪರಿಣಾಮದಿಂದಾಗಿ ಉತ್ತಮ ಡಿಸ್ಪ್ಲೇ ಅನುಭವವನ್ನು ಈ ಫೋನ್ ನೀಡಲಿದೆ.
ಟಿಯರ್ ಡ್ರಾಪ್ ನಾಚ್ ನ ಮಿನಿಮೆಟಲಿಸ್ಟಿಕ್ ಡಿಸ್ಪ್ಲೇಯನ್ನು ಹೊಂದಿರುವುದು ಕೇವಲ ಫೋನ್ ಸುಂದರವಾಗಿ ಕಾಣುವಂತೆ ಮಾಡಿರುವುದು ಮಾತ್ರವಲ್ಲ ಅದರ ಕಾರ್ಯಚಟುವಟಿಕೆಯಲ್ಲೂ ಅಧ್ಬುತವಾಗಿರುವಂತೆ ನೋಡಿಕೊಂಡಿದೆ.

ಉತ್ತಮ ಕಾರ್ಯನಿರ್ವಹಣೆ
ಕೇವಲ ನೋಡಲು ಚೆಂದವಾಗಿದ್ದರೆ ಸಾಲದು. ನಾವು ಕೊಂಡುಕೊಳ್ಳುವ ಫೋನ್ ಉತ್ತಮ ಪ್ರದರ್ಶನ ನೀಡಬೇಕು ಎಂದು ಬಯಸುವುದು ಸರ್ವೇ ಸಾಮಾನ್ಯ. ವಿವೋ ವಿ11 ಪ್ರೋ ಕ್ವಾಲ್ಕಂ ನ್ಯೂ ಸ್ನ್ಯಾಪ್ ಡ್ರ್ಯಾಗನ್ 660 ಸಾಕೆಟ್ ನಿಂದ ಪವರ್ಡ್ ಆಗಿದ್ದು ಹೊಸ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇಂಜಿನ್ ನ್ನು ಒಳಗೊಂಡಿದೆ. ಹಾಗಾಗಿ ರಿಯಲ್ ವರ್ಡ್ ನ ಬಳಕೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡುವಲ್ಲಿ ವಿವೋ ವಿ11 ಪ್ರಯೋಜನಕಾರಿಯಾಗಿದೆ. ಫೋಟೋಗ್ರಫಿ ತಿಳಿಯದ ವ್ಯಕ್ತಿಯೂ ಕೂಡ ಅತ್ಯುತ್ತಮ ಫೋಟೋವನ್ನು ಕ್ಲಿಕ್ಕಿಸುವುದಕ್ಕೆ ನೆರವು ನೀಡುವ ತಾಕತ್ತನ್ನು ಈ ಫೋನ್ ಹೊಂದಿದೆ. ಎಐ ಇಂಜಿನ್ ಗಳು ನಿಮ್ಮ ದೈನಂದಿನ ಬದುಕಿನಲ್ಲಿ ಫೋಟೋಗ್ರಫಿಯನ್ನು ಇನ್ನಷ್ಟು ಪ್ರಬಲಗೊಳಿಸುವುದಕ್ಕೆ ನೆರವು ನೀಡುತ್ತದೆ. ಇದರ ಬ್ಯಾಟರಿ ಕೆಪಾಸಿಟಿಯೂ ಕೂಡ ಅಧ್ಬುತವಾಗಿದೆ.
ಇನ್ನು ವಿವೋ ವಿ11 ಪ್ರೋ ದ ಹೃದಯ ಅಥವಾ ಪ್ರೊಸೆಸರ್ ಬಗ್ಗೆ ಹೇಳುವುದಾದರೆ ಇದರಲ್ಲಿ ಹೊಸ Kryo 260 ಪ್ರೊಸೆಸರ್ ನ್ನು ಬಳಕೆ ಮಾಡಲಾಗಿದ್ದು ಇದು ಈ ಹಿಂದಿನ ಎಲ್ಲಾ ಜನರೇಷನ್ನಿನ ಫೋನ್ ಗಳಿಂದ ಅತ್ಯಂತ ಹೆಚ್ಚು ವೇಗವಾಗಿ ಕಾರ್ಯ ನಿರ್ವಹಣೆ ಮಾಡಲು ಸಹಕಾರಿಯಾಗಿದೆ. ಇನ್ನು ಇನ್ ಬಿಲ್ಟ್ Adreno 512 GPU ಸುಮಾರು ಶೇಕಡಾ 30 ದಷ್ಟು ಅಧಿಕ ಸಾಮರ್ಥ್ಯವನ್ನು ಈ ಹಿಂದಿನ ಫೋನ್ ಗಳಿಗಿಂತ ಹೊಂದಿದೆ. ಅಂದರೆ ಉತ್ತಮ ವೀಡಿಯೋ ಗೇಮ್ ಪ್ರದರ್ಶನಕ್ಕೆ ನೆರವು ನೀಡುತ್ತದೆ. ಗ್ರಾಫಿಕ್ ಸಂಬಂಧಿತ ಆಪ್ ಗಳಲ್ಲೂ ಕೂಡ ಉತ್ತಮ ಪ್ರದರ್ಶನವನ್ನು ಇದು ನೀಡುತ್ತದೆ.
ಮೇಲೆ ತಿಳಿಸಿರುವ ಕ್ಯಾಮರಾ ತಂತ್ರಜ್ಞಾನ, ಅರ್ಥಪೂರ್ಣವಾಗಿರುವ ಎಐ ಇಂಟಿಗ್ರೇಷನ್, ಅಲ್ಟ್ರಾ ವೈಡ್ AMOLED ಡಿಸ್ಪ್ಲೇ, ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಹೊರತು ಪಡಿಸಿ ಇನ್ನೂ ಹಲವು ಅಧ್ಬುತ ವೈಶಿಷ್ಟ್ಯತೆಗಳು ವಿವೋ ವಿ11 ಪ್ರೋ ನಲ್ಲಿ ಇದೆ. ಅವುಗಳಲ್ಲಿ ಐಆರ್ ಅಸಿಸ್ಟಿಂಗ್ ಫೇಸ್ ರೆಕಗ್ನಿಷನ್ ತಂತ್ರಜ್ಞಾನವೂ ಸೇರಿದೆ. ಇದರ ಮೂಲಕ ಫೇಸ್ ಅನ್ ಲಾಕ್ ವೈಶಿಷ್ಟ್ಯತೆಯು ಫೋನಿನ ಭದ್ರತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೆರವು ನೀಡುತ್ತದೆ. ಕೇವಲ 25,990 ರುಪಾಯಿಗೆ ಈ ಬೆಲೆಗೂ ಮೀರಿದ ಕೆಲವು ವೈಶಿಷ್ಟ್ಯತೆಗಳು ವಿವೋ ವಿ11 ಪ್ರೊನಲ್ಲಿದೆ.


Click it and Unblock the Notifications








