ಕನ್ನಡ ಅಪ್ಲಿಕೇಶನ್ ಮೂಲಕ ಕನ್ನಡಿಗರಾಗಿ

Written By:

ಎಲ್ಲರೂ ಇಂಗ್ಲೀಷ್ ಭಾಷೆಗೆ ಪ್ರಾಧಾನ್ಯತೆ ಕೊಡುತ್ತಿರುವ ಬೆನ್ನಲ್ಲೇ ಕನ್ನಡವನ್ನು ಉಳಿಸುವ ಬೆಳೆಸುವ ಕೆಲಸಕ್ಕೆ ತಂತ್ರಜ್ಞಾನ ಕೂಡ ಹೆಗಲು ಕೊಟ್ಟಿದೆ. ಶಾಲಾ ಕಾಲೇಜುಗಳಲ್ಲೂ ಈಗ ಬರಿಯ ಆಂಗ್ಲದ್ದೇ ಕಾರುಬಾರು ನಡೆಯುತ್ತಿದ್ದರೂ ಕನ್ನಡವನ್ನು ಬೆಳಗಿಸುವ ಪರಿಕಲ್ಪನೆ ಮೂಡಿ ಬಂದಿದೆ.

ಇಂದಿನ ಲೇಖನದಲ್ಲಿ ನಾವು ನಿಮಗೆ ಕನ್ನಡದ ಹತ್ತು ಹಲವು ಅಪ್ಲಿಕೇಶನ್‌ಗಳನ್ನು ನೀಡಲಿದ್ದು ಕನ್ನಡದ ಕಂಪನ್ನು ನಿಮ್ಮ ಮೊಬೈಲ್‌ನಲ್ಲಿ ಬೀರಲಿದೆ. ತನು ಕನ್ನಡ ಮನ ಕನ್ನಡ ಎಂಬ ಕವಿವಾಣಿಯಂತೆ ಕನ್ನಡದ ಸ್ತುತಿಯನ್ನು ನಿಮಗಿನ್ನು ಮಾಡಬಹುದು.

ಹಾಗಿದ್ದರೆ ಆ ಉತ್ತಮ ಕನ್ನಡ ಅಪ್ಲಿಕೇಶನ್‌ಗಳು ಯಾವುವು ಕನ್ನಡದ ಬಗೆಗಿನ ಏನೆಲ್ಲಾ ಮಾಹಿತಿಗಳನ್ನು ಅದರಿಂದ ಪಡೆಯಬಹುದು? ಕನ್ನಡದ ಮೇರು ಕವಿಗಳ ಕವಿತೆಗಳು, ಬಸವಣ್ಣನ ವಚನಗಳು, ಕನ್ನಡ ವ್ಯಾಕರಣ ಹೀಗೆ ಹಲವಾರು ಅಪ್ಲಿಕೇಶನ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕನ್ನಡ ಕಲಿ

ಕನ್ನಡ ಕಲಿ

#1

ಇದು ಕನ್ನಡ ಕಲಿಕೆಯ ಮೂಲವಾದ ಸಂಖ್ಯೆಗಳು, ಅಕ್ಷರಗಳು, ಪದಗಳ ಮಾಹಿತಿಯನ್ನು ಕನ್ನಡ ಕಲಿಯುವವರಿಗಾಗಿ ನೀಡುತ್ತದೆ. ಇದನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಲರ್ನ್ ಕನ್ನಡ

ಲರ್ನ್ ಕನ್ನಡ

#2

ಕನ್ನಡ ಭಾಷೆಯನ್ನು ಮಾತನಾಡಲು ಬಳಸಬಹುದಾದ ಉತ್ತಮ ಅಪ್ಲಿಕೇಶನ್ ಇದಾಗಿದೆ. ಸರಳ ಪದಗಳು ಹಾಗೂ ಸರಳ ವಾಕ್ಯಗಳ ಮೂಲಕ ಕನ್ನಡ ಭಾಷೆಯನ್ನು ನಿಮಗೆ ಈ ಅಪ್ಲಿಕೇಶನ್ ಮೂಲಕ ಕಲಿಯಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ವಚನಗಳು

ಕನ್ನಡ ವಚನಗಳು

#3

ನಿಮ್ಮ ಕೈಯಲ್ಲೇ 400 ವಚನಗಳನ್ನು ನಿಮಗೆ ನೋಡಬಹುದು. ವಚನಗಳ ಸಾರವನ್ನು ನಿಮಗೆ ಬಿತ್ತರಿಸುವ ಈ ಆಂಡ್ರಾಯ್ಡ್ ಅಪ್ಲಿಕೇಶನ್ ನಿಮಗೆ ಕನ್ನಡದ ಮೇಲಿನ ಒಲವನ್ನು ಹೆಚ್ಚಿಸುವುದಂತೂ ಖಂಡಿತ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ವ್ಯಾಕರಣ ಪದ

ಕನ್ನಡ ವ್ಯಾಕರಣ ಪದ

#4

ಕನ್ನಡ ವ್ಯಾಕರಣವನ್ನು ನಿಮಗೆ ಮೊಬೈಲ್‌ನಲ್ಲೇ ಕಲಿಯಬಹುದು. ಈ ಅಪ್ಲಿಕೇಶನ್‌ ಕನ್ನಡ ವ್ಯಾಕರಣವನ್ನು ನಿಮಗೆ ಸುಲಭ ರೀತಿಯಲ್ಲಿ ನೀಡಿ ಅದನ್ನು ಮನನ ಮಾಡುವಲ್ಲಿ ಸಹಕಾರಿಯಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಬರುತ್ತೆ

ಕನ್ನಡ ಬರುತ್ತೆ

#5

ಈ ಅಪ್ಲಿಕೇಶನ್ ನಿಮಗೆ ಕನ್ನಡವನ್ನು ಕಲಿಸಿಕೊಡುತ್ತದೆ. ಇದರಲ್ಲಿ ಧ್ವನಿ ಸಂಯೋಜನೆಯನ್ನು ವಿಶೇಷವಾಗಿ ಅಳವಡಿಸಲಾಗಿದ್ದು ನಿಮಗೆ ಪದಗಳ ಹಾಗೂ ವಾಕ್ಯಗಳ ಸಂಯೋಜನೆಯನ್ನು ಸರಿಯಾದ ರೂಪದಲ್ಲಿ ಒದಗಿಸುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಗಾದೆಗಳು

ಕನ್ನಡ ಗಾದೆಗಳು

#6

ಈ ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ನಲ್ಲಿ ಹಾಕಿಸಿಕೊಳ್ಳುವದರಿಂದ ಬದುಕಿಗೆ ಆಧಾರವಾಗಿರುವ ನೀತಿ ಪಾಠವಾಗಿರುವ ಗಾದೆಗಳನ್ನು ನಿಮಗೆ ಕೇಳಿಸಿಕೊಳ್ಳಬಹುದು.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಚಿತ್ರ ಸಂಗ್ರಹ

ಕನ್ನಡ ಚಿತ್ರ ಸಂಗ್ರಹ

#7

ಇಂಗ್ಲೀಷಿನ ಚಿತ್ರಕ್ಕಿರುವ ಕನ್ನಡ ಅರ್ಥಗಳನ್ನು ನಿಮಗೆ ನೀಡಲು ಈ ಅಪ್ಲಿಕೇಶನ್ ಸಹಾಯಕ. ಇದರಿಂದ ನಿಮಗೆ ಮಕ್ಕಳಿಗೆ ಕನ್ನಡ ಕಲಿಸಲು ಹಾಗೂ ಇಂಗ್ಲಿಷ್ ಬಳಸುವಂತೆ ಮಾಡಲು ಸುಲಭವಾಗಲಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಶಿಶುಗೀತೆ

ಕನ್ನಡ ಜನಪ್ರಿಯ ಶಿಶುಗೀತೆ

#8

ಇದು ನಿಮಗೆ ಕನ್ನಡದ ಹೆಸರಾಂತ ಗಾಯಕ, ಗಾಯಕಿಯರು ಹಾಡಿರುವ ಶಿಶು ಗೀತೆಗಳನ್ನು ಆಲಿಸುವಂತೆ ಮಾಡುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot