ಕನ್ನಡದಲ್ಲಿ 440 character ಉಚಿತ sms ಕಳಿಸಿ!

By Varun
|

ಕನ್ನಡದಲ್ಲಿ 440 character ಉಚಿತ sms ಕಳಿಸಿ!
ಕೇಂದ್ರ ಸರ್ಕಾರ ಸೆಪ್ಟೆಂಬರ್ 2 ರ ವರೆಗೂ sms ಮೇಲಿನ ನಿರ್ಬಂಧ ಹೇರಿರುವುದರಿಂದ ಸಾಕಷ್ಟು ಜನ ಉಚಿತ sms ಕಳುಹಿಸುವ ವೆಬ್ಸೈಟ್ ಗಳ ಮೊರೆ ಹೋಗುತ್ತಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ 5 sms ಗಳೂ ಬೇಕಾಗಬಹುದಾದರಿಂದ ಜನ ಬೆಳಗ್ಗೆ ಉಚಿತ ವೆಬ್ಸೈಟ್ ಗಳನ್ನು ಬಳಸುತ್ತಾರೆ ಇಲ್ಲವೆ ಸ್ಮಾರ್ಟ್ ಫೋನ್ ಇದ್ದರೆ ಅದರ ಮೂಲಕ ವಾಟ್ಸ್ ಆಪ್ ಇಲ್ಲವೆ ನಿಮ್ಬಜ್ ನಂಥಾ ಆಪ್ ಉಪಯೋಗಿಸುತ್ತಾರೆ.

ಆದರೆ ಉಚಿತ sms ಕಳಿಸುವ ವೆಬ್ಸೈಟ್ ಗಳಲ್ಲಿ ನೀವು ಕಳುಹಿಸುವ ಅಕ್ಷರಗಳ ಮಿತಿ ಕೇವಲ 140 character ಇದ್ದು ದೊಡ್ಡ ದೊಡ್ಡ ಮೆಸೇಜ್ ಕಳುಹಿಸಲು ಆಗುವುದಿಲ್ಲ. ಅದರಲ್ಲೂ ಪ್ರೀತಿ ಮಾಡುವವರು ಏನಾದರೂ ಗೆಳೆಯ/ಗೆಳತಿಗೆ ಹಾಡಿನ ಮೂಲಕ ತಮ್ಮ ಫೀಲಿಂಗ್ ವ್ಯಕ್ತಪಡಿಸಬೇಕಾದರೆ ಫ್ಲೋ ಕೂಡಾ ಹೋಗುತ್ತದೆ.

ಇದಕ್ಕೆಲ್ಲಾ ಪರಿಹಾರವೆಂದರೆ ವಿಶ್ವದ ಮೊದಲ 440 character ಮೆಸೇಜ್ ಕಳುಹಿಸಬಹುದಾದ sms440.com ಅನ್ನು ಉಪಯೋಗಿಸುವುದು. ಇದು ವಿಶ್ವದ ಮೊದಲ ಹಾಗು ಏಕೈಕ 440 character ಮೆಸೇಜ್ ಕಳುಹಿಸುವ ವೆಬ್ಸೈಟ್ ಆಗಿದ್ದು ಮತ್ತೊಂದು ವಿಶೇಷವೇನೆಂದರೆ ನೀವು ಕನ್ನಡದಲ್ಲಿ ಕೂಡಾ ಮೆಸೇಜ್ ಕಳುಹಿಸಬಹುದು!

ಕನ್ನಡ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಮೆಸೇಜ್ ಕಳುಹಿಸಬಹುದಾಗಿದ್ದು ತ್ವರಿತವಾಗಿ ಮೆಸೇಜ್ ತಲುಪಿಸುವ ಸೌಲಭ್ಯ ಹೊಂದಿದೆ.

ಇನ್ನು ಮೇಲೆ ಪದಗಳ ಮಿತಿಯನ್ನು ಮರೆತು sms440.com ಮೂಲಕ ಮೆಸೇಜ್ ಕಳುಹಿಸಿ ಎಂಜಾಯ್ ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X