2017'ರಿಂದ ಪ್ಯಾನಿಕ್‌ ಬಟನ್ ಇಲ್ಲದ ಮೊಬೈಲ್‌ ಭಾರತದಲ್ಲಿ ಮಾರಾಟವಿಲ್ಲ!!

By Suneel
|

2017 ರಿಂದ ಭಾರತ ದೇಶದಲ್ಲಿ ಸ್ಮಾರ್ಟ್‌ಫೋನ್‌ ಸೇರಿದಂತೆ ಪ್ರತಿಯೊಂದು ಹೊಸ ಮೊಬೈಲ್‌ಗಳು ಪ್ಯಾನಿಕ್‌ ಬಟನ್‌ ಹೊಂದಿರಬೇಕು. ಇದು ತುರ್ತು ಪರಿಸ್ಥಿತಿಯಲ್ಲಿ ಬಹುಬೇಗ ಮೊಬೈಲ್‌ ಆಪರೇಟ್‌ ಮಾಡಲು ಸಹಾಯಕವಾಗಿರಬೇಕು. ಅಂತಹ ಮೊಬೈಲ್‌ಗಳು ಮಾತ್ರ 2017ರಿಂದ ಮಾರಾಟವಾಗಲಿವೆ. ಅಲ್ಲದೇ ಜಿಪಿಎಸ್‌ ನಾವಿಗೇಷನ್‌ ವ್ಯವಸ್ಥೆಯನ್ನು ಸಹ ಮೊಬೈಲ್‌ ಹೊಂದಿರಬೇಕು. ಇಲ್ಲವಾದಲ್ಲಿ ಯಾವುದೇ ಹೊಸ ಮೊಬೈಲ್‌ಗಳು ಭಾರತದಲ್ಲಿ ಮಾರಾಟವಾಗುವುದಿಲ್ಲಾ ಎಂದು ಏಪ್ರಿಲ್‌ 22 ರಂದು ಸರ್ಕಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ದಿಡೀರನೆ ಸರ್ಕಾರ ಇಂತಹ ಕ್ರಮ ಕೈಗೊಳ್ಳಲು ಕಾರಣವಾದರೂ ಏನು ಎಂಬ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಪ್ಯಾನಿಕ್‌ ಬಟನ್‌

ಪ್ಯಾನಿಕ್‌ ಬಟನ್‌

2017 ರಿಂದ ಭಾರತ ದೇಶದಲ್ಲಿ ಪ್ರತಿಯೊಂದು ಹೊಸ ಮೊಬೈಲ್‌ಗಳು ಪ್ಯಾನಿಕ್‌ ಬಟನ್‌ ಹೊಂದಿರಬೇಕು. ಇದು ತುರ್ತು ಪರಿಸ್ಥಿತಿಯಲ್ಲಿ ಬಹುಬೇಗ ಮೊಬೈಲ್‌ ಆಪರೇಟ್‌ ಮಾಡಲು ಸಹಾಯಕವಾಗಿರಬೇಕು. ಅಂತಹ ಮೊಬೈಲ್‌ಗಳು ಮಾತ್ರ 2017ರಿಂದ ಮಾರಾಟವಾಗಲಿವೆ.

 ಮಹಿಳಾ ಸುರಕ್ಷೆ

ಮಹಿಳಾ ಸುರಕ್ಷೆ

ಮಹಿಳಾ ಸುರಕ್ಷತೆ ಹಿತದೃಷ್ಟಿಯ ಗುರಿಯಿಂದ ಈ ನಿರ್ಧಾರ ಕೈಗೊಂಡಿದ್ದು, ಜನವರಿ 1, 2018 ರಿಂದ ಜಿಪಿಎಸ್‌ ನಾವಿಗೇಷನ್‌ ವ್ಯವಸ್ಥೆಯು ಸಹ ಹೊಸ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್ ಆಗಿರಬೇಕು ಎಂದು ಹೇಳಲಾಗಿದೆ.

ರವಿ ಶಂಕರ್‌ ಪ್ರಸಾದ್‌'ರ ಹೇಳಿಕೆ

ರವಿ ಶಂಕರ್‌ ಪ್ರಸಾದ್‌'ರ ಹೇಳಿಕೆ

"ಟೆಕ್ನಾಲಜಿಯಿಂದ ಮಾತ್ರ ಮಾನವನ ಬದುಕನ್ನು ಉತ್ತಮ ಪಡಿಸಲು ಸಾಧ್ಯ. ಆದ್ದರಿಂದ ಮಹಿಳೆಯರ ಸುರಕ್ಷತೆ ಹಿತದೃಷ್ಟಿಯಿಂದ ಜನವರಿ 1,2017 ರಿಂದ ಹೊಸ ಮೊಬೈಲ್‌ಗಳಲ್ಲಿ ಪ್ಯಾನಿಕ್‌ ಬಟನ್‌ ಇರಬೇಕು. ಹಾಗೂ ಜನವರಿ 1,2018 ರಿಂದ ಕಡ್ಡಾಯವಾಗಿ ಮೊಬೈಲ್‌ಗಳಲ್ಲಿ ಜಿಪಿಎಸ್‌ ಇನ್‌ಬಿಲ್ಟ್ ಆಗಿರಬೇಕು, ಇಲ್ಲವಾದಲ್ಲಿ ಯಾವ ಸೆಲ್‌ ಪೋನ್‌ಗಳು ಸಹ ಮಾರಾಟವಾಗುವುದಿಲ್ಲ" ಎಂದು ಟೆಲಿಕಾಂ ಮಿನಿಸ್ಟರ್ ರವಿ ಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಸರ್ಕಾರದ ಅಧಿಕೃತ ಪ್ರಕಟಣೆ

ಸರ್ಕಾರದ ಅಧಿಕೃತ ಪ್ರಕಟಣೆ

ಹಿಂದಿನ ಸ್ಲೈಡರ್‌ನಲ್ಲಿ ಹೇಳಿದ ಮಾಹಿತಿಯು ಸರ್ಕಾರದಿಂದ ಅಧಿಕೃತವಾಗಿ ಏಪ್ರಿಲ್‌ 22 ರಂದು ಪ್ರಕಟವಾಗಿದೆ. "ತುಜನವರಿ 1,2017 ರಿಂದ ಭಾರತದಲ್ಲಿ ಯಾವುದೇ ಫೀಚರ್‌ ಮೊಬೈಲ್‌ಗಳು ತುರ್ತು ಕರೆ ಮಾಡಲು ಪ್ಯಾನಿಕ್‌ ಬಟನ್ ಗಳಾದ "ನ್ಯೂಮರಿಕ್‌ ಬಟನ್‌ 5" ಮತ್ತು "ನ್ಯೂಮರಿಕ್‌ ಬಟನ್‌ 6" ಹೊಂದಿಲ್ಲದಿದ್ದರೆ ಮಾರಾಟವಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಸ್ಮಾರ್ಟ್‌ಫೋನ್‌ಗಳಲ್ಲಿ ತುರ್ತು ಕರೆ ಬಟನ್‌

ಸ್ಮಾರ್ಟ್‌ಫೋನ್‌ಗಳಲ್ಲಿ ತುರ್ತು ಕರೆ ಬಟನ್‌

'ಭಾರತದಲ್ಲಿ ಯಾವುದೇ ಸ್ಮಾರ್ಟ್‌ಫೋನ್‌ಗಳು ಸಹ ತುರ್ತು ಕರೆ ಬಟನ್‌ ಹೊಂದದೇ ಮಾರಾಟವಾಗುವುದಿಲ್ಲ. ಈ ಬಟನ್‌ ಅನ್ನು ದೀರ್ಘಕಾಲ ಪ್ರೆಸ್ ಮಾಡುವುದರಿಂದ ತುರ್ತುಕರೆ ಹೋಗುತ್ತದೆ. ಅಥವಾ ಕ್ಲೋಸಿಂಗ್ ಪವರ್‌ ಬಟನ್‌, ಶೀಘ್ರ ಅನುಕ್ರಮದಲ್ಲಿ 3 ಭಾರಿ ಪ್ರೆಸ್‌ ಮಾಡಿದರು ಸಹ ತುರ್ತು ಕರೆ ಹೋಗಬೇಕು', ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಈ ಫೋಟೋಗಳನ್ನ ಹೇಗೆ ನೋಡಿದ್ರು, ಹೇಗೆ ಕ್ಲಿಕ್ಕಿಸಿದ್ದಾರೆ ಅರ್ಥವಾಗಲ್ಲ!!<br /></a><a href=ಆಪಲ್‌ನ ಸಿನಿಮಾಗಳು ಮತ್ತು ಐಬುಕ್‌ಗಳ ಡೌನ್‌ಲೋಡ್‌ ಈಗ ಆಫ್‌ಲೈನ್‌" title="ಈ ಫೋಟೋಗಳನ್ನ ಹೇಗೆ ನೋಡಿದ್ರು, ಹೇಗೆ ಕ್ಲಿಕ್ಕಿಸಿದ್ದಾರೆ ಅರ್ಥವಾಗಲ್ಲ!!
ಆಪಲ್‌ನ ಸಿನಿಮಾಗಳು ಮತ್ತು ಐಬುಕ್‌ಗಳ ಡೌನ್‌ಲೋಡ್‌ ಈಗ ಆಫ್‌ಲೈನ್‌" />ಈ ಫೋಟೋಗಳನ್ನ ಹೇಗೆ ನೋಡಿದ್ರು, ಹೇಗೆ ಕ್ಲಿಕ್ಕಿಸಿದ್ದಾರೆ ಅರ್ಥವಾಗಲ್ಲ!!
ಆಪಲ್‌ನ ಸಿನಿಮಾಗಳು ಮತ್ತು ಐಬುಕ್‌ಗಳ ಡೌನ್‌ಲೋಡ್‌ ಈಗ ಆಫ್‌ಲೈನ್‌

ಗೊರಕೆ ಸೌಂಡ್‌ ನಿಲ್ಲಿಸುವ ಸ್ಮಾರ್ಟ್‌ ಗ್ಯಾಜೆಟ್!!ಗೊರಕೆ ಸೌಂಡ್‌ ನಿಲ್ಲಿಸುವ ಸ್ಮಾರ್ಟ್‌ ಗ್ಯಾಜೆಟ್!!

ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
From 2017, panic buttons must on all new mobiles. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X