Subscribe to Gizbot

ಪುಟ್ಟ ಫುಜಿತ್ಸು ಸ್ಮಾರ್ಟ್ ಫೋನ್ ಸೌಂದರ್ಯ ಲಹರಿ

Posted By: Super
ಪುಟ್ಟ ಫುಜಿತ್ಸು ಸ್ಮಾರ್ಟ್ ಫೋನ್ ಸೌಂದರ್ಯ ಲಹರಿ
ಟೆಕ್ ಕಂಪನಿಗಳ ನಡುವೆ ಪೈಪೋಟಿ ಯಾವತ್ತೂ ಭಿನ್ನ. ಗುಣಮಟ್ಟದ ಉತ್ಪನ್ನಗಳೇ ಈ ಕಂಪನಿಗಳ ಪ್ರಮುಖ ಮಾನದಂಡ. ಗ್ರಾಹಕರ ತೃಪ್ತಿ ವಿಷಯವೇ ಪ್ರಮುಖ ಆದ್ಯತೆ. ಇಂತಹ ಉತ್ಪನ್ನಗಳ ಸಾಲಿನಲ್ಲಿ Fujitsu Arrow ES IS12F ಸ್ಮಾರ್ಟ್ ಫೋನನ್ನು ಕೂಡ ನಿಲ್ಲಿಸಬಹುದು.

Fujitsu Arrow ES IS12F ಆಕರ್ಷಕ ಸ್ಮಾರ್ಟ್ ಫೋನ್. ಇದರ ಗಾತ್ರ ಪುಟ್ಟದಾಗಿರುವುದು ಕೂಡ ಇದರ ಜನಪ್ರಿಯತೆಗೆ ಸಾಕ್ಷಿ. ಹಾಗಂತ ಇದರ ಸೌಂದರ್ಯ ಕೇವಲ ವಿನ್ಯಾಸದಲ್ಲಿ ಮಾತ್ರವಿದೆ ಎಂದು ತಿಳಿದುಕೊಂಡರೆ ಅದು ತಪ್ಪು. ಯಾಕೆಂದರೆ ಇದರಲ್ಲಿರುವ ಆಕರ್ಷಕ ಫೀಚರುಗಳು ಇದರ ಸೌಂದರ್ಯ ಹೆಚ್ಚಿಸುವಲ್ಲಿ ಸಹಕರಿಯಾಗಿವೆ.

ಈ ಸ್ಮಾರ್ಟ್ ಫೋನ್ ನಲ್ಲಿ ಯಾವುದಾದರೂ ಕೊರತೆ ಹುಡುಕಬೇಕೆಂದರೆ ಬಾಡಿ ಪ್ಯಾನೆಲ್ ನಲ್ಲಿ ಹುಡುಕಬಹುದು. ಯಾಕೆಂದರೆ ಇತರ ಮಾಮೂಲಿ ಸ್ಮಾರ್ಟ್ ಫೋನ್ ಗಳಲ್ಲಿರುವಂತೆ ಇದರ ಬಾಡಿ ಪ್ಯಾನೆಲ್ ಇದೆ. ಆದರೆ Fujitsu Arrow ES IS12F ಕೇವಲ 6.7 ಮಿ.ಮೀ. ದಪ್ಪವಿದೆ ಎಂದು ಕಂಪನಿ ಹೇಳಿದೆ. ಇದರ ತೂಕ ಕೇವಲ 103 ಗ್ರಾಂ.

ಈ ಸ್ಮಾರ್ಟ್ ಫೋನ್ ನಲ್ಲಿರುವ ಇನ್ನೊಂದು ಫೀಚರೆಂದರೆ ವಾಟರ್ ರೆಸಿಸ್ಟೆಂಟ್. ಹೀಗಾಗಿ ಫುಜಿತ್ಸು ನೂತನ ಸ್ಮಾರ್ಟ್ ಫೋನ್ ನೀರಿಗೆ ಬಿದ್ದರೆ ವರಿ ಮಾಡಿಕೊಳ್ಳಬೇಕಿಲ್ಲ.  Fujitsu Arrow ES IS12F ಸ್ಮಾರ್ಟ್ ಫೋನ್ ಸಿಂಗಲ್ ಕೀರ್ 1.4 ಗಿಗಾಹರ್ಟ್ಸ್ ಸ್ನಾಪ್ ಡ್ರಾಗನ್ ಪ್ರೊಸೆಸರ್ ಹೊಂದಿದೆ.

ಈ ಸ್ಮಾರ್ಟ್ ಫೋನ್ ಇನ್ನೂ ಭಾರತದ ಮಾರುಕಟ್ಟೆಗೆ ತಲುಪಿಲ್ಲ. ಜಪಾನಿನಲ್ಲಿ ಜನವರಿ 10ರಂದು ಬಿಡುಗಡೆಯಾಗಲಿದೆ. ಈ ಸ್ಮಾರ್ಟ್ ಫೋನ್ ದರ ಕೈಗೆಟುಕವ ಮಟ್ಟದಲ್ಲಿರುವ ನಿರೀಕ್ಷೆಯಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot