Subscribe to Gizbot

ಸಖತ್ತಾಗಿದೆ ಈ ಸ್ಟೈಲ್ ಸಿರೀಸ್ ಮೊಬೈಲ್

Posted By: Staff
ಸಖತ್ತಾಗಿದೆ ಈ ಸ್ಟೈಲ್ ಸಿರೀಸ್ ಮೊಬೈಲ್

ಫ್ಯುಜಿತ್ಸು ಕಂಪನಿ F-02D ಎಂಬ ಸ್ಟೈಲ್ ಸಿರೀಸ್ ಮೊಬೈಲ್ ಬಿಡುಗಡೆಗೆ ಸಜ್ಜಾಗಿದ್ದು, ಮುಂದಿನ ವರ್ಷದ ಪ್ರಾರಂಭದಲ್ಲಿ ಇದು ತೆರೆಕಾಣಲಿದೆ. 1.2 GHz ಪ್ರೊಸೆಸರ್ ನೊಂದಿಗೆ ಗ್ರಾಹಕರಿಗೆಂದೇ ಟಚ್ ಸ್ಕ್ರೀನ್ ತಂತ್ರಜ್ಞಾನವನ್ನು ನೀಡಲಾಗಿದೆ.

ನಿಮ್ಮನ್ನು ಚಕಿತಗೊಳಿಸುವ ಇನ್ನೊಂದು ಅಂಶ ಈ ಮೊಬೈಲ್ ನಲ್ಲಿದೆ. ಇದರಲ್ಲಿರುವ 16.3 ಮೆಗಾ ಪಿಕ್ಸಲ್ ಕ್ಯಾಮೆರಾ ವಿಶೇಷ ಅನುಭವವನ್ನು ನೀಡಲಿದೆ.

ಫ್ಯುಜಿತ್ಸು  F-02D ಮೊಬೈಲ್ ವಿಶೇಷತೆ:

* 3.4 ಇಂಚಿನ ಡಿಸ್ಪ್ಲೇ

* ಟಚ್ ಸ್ಕ್ರೀನ್

* 139 ಗ್ರಾಂ ತೂಕ, 111 x 50 x 13.9 ಎಂಎಂ ಸುತ್ತಳತೆ

* 16.3 ಮೆಗಾ ಪಿಕ್ಸಲ್ ಕ್ಯಾಮೆರಾ

* ಕ್ಯಾಮೆರಾದೊಂದಿಗೆ ಫ್ರೀ ಆಂಗಲ್ ಎಲ್ ಸಿಡಿ

* 3ಡಿ ಎಫೆಕ್ಟ್

* ವೈ-ಫೈ ಸಂಪರ್ಕ

* ಫಿಂಗರ್ ಪ್ರಿಂಟ್ ಸೆನ್ಸಾರ್

ಬಿಳಿ, ಗುಲಾಬಿ ಮತ್ತು ಕಪ್ಪು, ಈ ಮೂರು ಆಕರ್ಷಕ ಬಣ್ಣಗಳಲ್ಲಿ F 02D ಮೊಬೈಲ್ ಲಭ್ಯವಾಗಲಿದೆ. ಈ ಮೊಬೈಲ್ ಬ್ಯಾಟರಿ 320 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 300 ನಿಮಿಷ ಟಾಕ್ ಟೈಂ ಕೊಡಲಿದೆ. ಆದರೆ ಈ ಮೊಬೈಲ್ ನಿಖರ ಬೆಲೆ ಇನ್ನೂ ತಿಳಿದುಬರಬೇಕಷ್ಟೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot