2026, 27 ಮತ್ತು 28 ರಲ್ಲಿ ಬರುತ್ತಿರುವ iPhone ಗಳು ಹೇಗಿರಲಿವೆ ನೋಡಿ!
ಆಪಲ್ ಕಂಪೆನಿಯ ಮುಂದಿನ ಪೀಳಿಗೆ ಐಫೋನ್‌ಗಳ ಕುರಿತು ಯಾವಾಗಲೂ ಕುತೂಹಲ ಇದ್ದೇ ಇರುತ್ತದೆ. ಮುಂಬರುವ ವರ್ಷ ಆಪಲ್ ಯಾವ ರೀತಿಯಲ್ಲಿ ಹೊಸ ಸಾಧನಗಳನ್ನು ಪರಿಚಯಿಸಲಿದೆ ಎಂಬ ಬಗ್ಗೆ ಎಲ್ಲರೂ ಎದುರುನೋಡುತ್ತಿರುವತ್ತಾರೆ. ಇದೀಗ ಬಂದಿರುವ ಹೊಸ ವರದಿಯ ಪ್ರಕಾರ, ಆಪಲ್ ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ವರ್ಷವೂ ಹೊಸ ವಿನ್ಯಾಸದ iPhone ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.! 2027ರಲ್ಲಿ iPhone ತನ್ನ 20ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ, ಆಪಲ್ iPhone 19 ಅನ್ನು ಬಿಟ್ಟು ನೇರವಾಗಿ iPhone 20 ಸರಣಿಯನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂದು ವರದಿಗಳು ಸೂಚಿಸುತ್ತವೆ. ಹಾಗಾದರೆ, ಏನಿದು ವಿಶೇಷ ಸುದ್ದಿ ಎಂಬುದನ್ನು ನೋಡೋಣ ಬನ್ನಿ.
2026 ರಲ್ಲಿ ಆಪಲ್‌ನ ಮೊದಲ ಫೋಲ್ಡಬಲ್ iPhone
ಪ್ರಸಿದ್ಧ ಟೆಕ್ ಲೀಕರ್ ಲ್ಯಾಂಜಕ್ (@yeux1122 ನೇವರ್ ಬ್ಲಾಗ್ ಪೋಸ್ಟ್‌ನಲ್ಲಿ) ಅವರ ವರದಿಯ ಪ್ರಕಾರ, ಆಪಲ್ 2026ರಲ್ಲಿ ತನ್ನ ಮೊದಲ ಫೋಲ್ಡಬಲ್ iPhone ಅನ್ನು ಬಿಡುಗಡೆ ಮಾಡಬಹುದು. ಈ ಮಾದರಿಯನ್ನು iPhone Fold ಎಂದು ಕರೆಯುವ ಸಾಧ್ಯತೆ ಇದೆ. ಇದು ಮಡಚಬಹುದಾದ ಡಿಸ್ಪ್ಲೇ ಹೊಂದಿದ್ದು, ಮಡಚಿದ ನಂತರ ಟ್ಯಾಬ್ಲೆಟ್ ಗಾತ್ರದ ಸ್ಕ್ರೀನ್ ಆಗಿ ವಿಸ್ತರಿಸಬಹುದು. ಈ ಡಿಸ್ಪ್ಲೇಗೆ LTPO+ ಫ್ಲೆಕ್ಸಿಬಲ್ OLED ತಂತ್ರಜ್ಞಾನವನ್ನು ಬಳಸಲಾಗಬಹುದು. ಅದೇ ವರ್ಷದಲ್ಲಿ ಆಪಲ್ iPhone 18 ಸರಣಿಯನ್ನೂ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
2027 ರಲ್ಲಿ ಸಂಪೂರ್ಣ ಬೆಸೆಲ್‌ಲೆಸ್ iPhone 20
ಇನ್ನು 2027ರಲ್ಲಿ ಆಪಲ್ ತನ್ನ ಅತ್ಯಂತ ಆಕರ್ಷಕ iPhone 20 ಸರಣಿಯನ್ನು ಪರಿಚಯಿಸಲಿದೆ. ಇದು ಸಂಪೂರ್ಣ ಬೆಸೆಲ್‌ಲೆಸ್ OLED ಸ್ಕ್ರೀನ್( (Bezel less ಎಂದರೆ ಕನ್ನಡದಲ್ಲಿ "ಅಂಚುಗಳಿಲ್ಲದ" ಅಥವಾ "ಫ್ರೇಮ್ ಇಲ್ಲದ" ಎಂದು ಅರ್ಥ) ಹೊಂದಿರುವ ಮೊದಲ iPhone ಆಗಿರಬಹುದು. ವರದಿಗಳ ಪ್ರಕಾರ, ಆಪಲ್ ಡೈನಾಮಿಕ್ ಐಲ್ಯಾಂಡ್‌ನ ಗಾತ್ರವನ್ನು ಇನ್ನಷ್ಟು ಕಡಿಮೆ ಮಾಡುವ ಅಥವಾ ಅದನ್ನು ಅಂಡರ್-ಡಿಸ್ಪ್ಲೇ ಕ್ಯಾಮೆರಾ ಅಥವಾ ಹೋಲ್-ಪಂಚ್ ವಿನ್ಯಾಸದೊಂದಿಗೆ ಬದಲಾಯಿಸುವ ಸಾಧ್ಯತೆ ಇದೆ. ಇದರ ಜೊತೆಗೆ, ಹೊಸ ಪ್ಯಾನೆಲ್ ತಂತ್ರಜ್ಞಾನದಿಂದ ಸ್ಕ್ರೀನ್‌ನ ಬೆಳಕಿನ ಅಸಮತೋಲನ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಲಾಗಿದೆ.

2028 ರಲ್ಲಿ ಕ್ಲ್ಯಾಮ್‌ಶೆಲ್ ವಿನ್ಯಾಸದ iPhone Flip
2028ರಲ್ಲಿ ಆಪಲ್ ತನ್ನ ಎರಡನೇ ಫೋಲ್ಡಬಲ್ ಮಾದರಿಯನ್ನು iPhone Flip ಎಂಬ ಹೆಸರಿನಲ್ಲಿ ಪರಿಚಯಿಸಬಹುದು. ಈ ಫೋನ್ ಕ್ಲ್ಯಾಮ್‌ಶೆಲ್ ವಿನ್ಯಾಸದಲ್ಲಿ ಲಭ್ಯವಾಗಲಿದ್ದು, ಹೊರಭಾಗದಲ್ಲಿ ಸಣ್ಣ ಸ್ಕ್ರೀನ್ ಇರಬಹುದು. ಈ ಸ್ಕ್ರೀನ್‌ನಲ್ಲಿ ಸಮಯ, ನೋಟಿಫಿಕೇಶನ್‌ಗಳು ಮತ್ತು Apple Intelligence ಶಾರ್ಟ್‌ಕಟ್‌ಗಳನ್ನು ತೋರಿಸಲಾಗುತ್ತದೆ ಎಂದು ವರದಿಯು ಹೇಳಿದೆ.
ಇದು ಆಪಲ್‌ನ ಹೆಸರಿನ ಬದಲಾವಣೆಗೆ ಮೊದಲ ಉದಾಹರನೆ ಅಲ್ಲ. ಏಕೆಂದರೆ, 2017ರಲ್ಲಿ ಆಪಲ್ ಕಂಪನಿಯು iPhone 9 ಬಿಟ್ಟು ನೇರವಾಗಿ iPhone X ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸಿತ್ತು. ಇದೇ ರೀತಿಯಾಗಿ, 2027ರಲ್ಲಿ iPhone 20 ಬಿಡುಗಡೆ ಮಾಡುವ ಮೂಲಕ ಆಪಲ್ ತನ್ನ 20 ವರ್ಷಗಳ ಯಶಸ್ವಿ ಪ್ರಯಾಣವನ್ನು ಗುರುತಿಸಲು ನಿರ್ಧರಿಸಬಹುದು. 2026ರಿಂದ 2028ರವರೆಗೆ ಪ್ರತಿ ವರ್ಷ ಹೊಸ ಮಾದರಿಯೊಂದಿಗೆ iPhone ಬಳಕೆದಾರರಿಗೆ ಹೊಸತನದ ಅನುಭವ ದೊರೆಯುವ ನಿರೀಕ್ಷೆಯೇ ನನಗೆ ಒಂದು ಹೊಸ ಅನುಭವವಾಗಿ ಕಾಣುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.
ಮೂಲ ಮಾಹಿತಿ: gadgets360, https://m.blog.naver.com/


Click it and Unblock the Notifications








