Home
ಮೊಬೈಲ್

ಭಾರತಕ್ಕೆ Galaxy A17 5G: ನಿರೀಕ್ಷಿತ ಬಿಡುಗಡೆ ದಿನಾಂಕ, ಬೆಲೆ ಮತ್ತು ಫಿಚರ್ಸ್!

ಟೆಕ್ ದೈತ್ಯ Samsung ಭಾರತದಲ್ಲಿ ತನ್ನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಲು ಮುಂದಾಗಿದ್ದು, ದೇಶದ ಮಾರುಕಟ್ಟೆಗೆ ತನ್ನ ಹೊಸ Galaxy A17 5G ಫೋನ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಕೈಗೆಟುಕುವ ಬೆಲೆಯಲ್ಲಿ 5G ಸಂಪರ್ಕ ಮತ್ತು ಅದ್ಭುತ ವೈಶಿಷ್ಟ್ಯಗಳನ್ನು ಹುಡುಕುತ್ತಿರುವ ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಈ ಫೋನ್ ಪರಿಚಯಗೊಳ್ಳುತ್ತಿದೆ. ಬಿಡುಗಡೆಗೂ ಮುನ್ನ ಫೋನ್ ಅನ್ನು ಪ್ರೀ-ರಿಜಿಸ್ಟರ್ ಮಾಡಲು ಅವಕಾಶವಿದೆ. ಹಾಗಾದರೆ, ಹೊಸ Galaxy A17 5G ಫೋನ್ ಬೆಲೆ ಎಷ್ಟು?, ಪೀಚರ್ಸ್ ಹೇಗಿರಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.!

Galaxy A17 5G: ಬಿಡುಗಡೆ ದಿನಾಂಕ, ಬೆಲೆ ಮತ್ತು ಲಭ್ಯತೆ
ವರದಿಗಳ ಪ್ರಕಾರ, ಬಹುನಿರೀಕ್ಷಿತ Samsung Galaxy A17 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಆಗಸ್ಟ್ 29, 2025 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಮತ್ತು ₹18,999 ರ ಆರಂಭಿಕ ಬೆಲೆಯಲ್ಲಿ ದೇಶದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ(ಬ್ಯಾಂಕ್ ಕೊಡುಗೆಗಳೊಂದಿಗೆ ಮತ್ತಷ್ಟು ಕಡಿಮೆ ಬೆಲೆಯಲ್ಲಿ ದೊರೆಯುವ ಸಾಧ್ಯತೆ ಇದೆ).

ಸ್ಯಾಮ್‌ಸಂಗ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ Galaxy A17 5G ಫೋನ್ ಖರೀದಿಗೆ ಈಗಾಗಲೇ ಪೂರ್ವ-ನೋಂದಣಿ ಆರಂಭವಾಗಿದ್ದು, ಆಸಕ್ತರು ಮೊದಲೇ ಮಾಹಿತಿ ಪಡೆಯಲು ನೋಂದಾಯಿಸಿಕೊಳ್ಳಬಹುದು. ಈ ಫೋನ್ ಪ್ರಸ್ತುತ UK ಮತ್ತು ಇತರ ಯುರೋಪಿಯನ್ ಮಾರುಕಟ್ಟೆಗಳಲ್ಲಿ Samsung ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿದ್ದು, 4GB + 128GB RAM ಮಾದರಿಯು GBP 199 (ಸರಿಸುಮಾರು ರೂ. 23,500) ಬೆಲೆಯನ್ನು ಹೊಂದಿದೆ.

Galaxy A17 5G: ಪ್ರಮುಖ ವೈಶಿಷ್ಟ್ಯಗಳು (ನಿರೀಕ್ಷಿತ)
Galaxy A17 5G ಫೋನ್ ವೈಶಿಷ್ಟ್ಯಗಳ ಕುರಿತು ಹಲವಾರು ವರದಿಗಳು ಮಾಹಿತಿ ಒದಗಿಸಿವೆ. ಈ ವರದಿಗಳನ್ನು ನಂಬುವುದಾದರೆ, Galaxy A17 5G ಫೋನ್ 6.7 ಇಂಚಿನ ದೊಡ್ಡ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಉತ್ತಮ ಬಣ್ಣದ ಪ್ರದರ್ಶನ ಮತ್ತು ಹೊಳಪನ್ನು ನೀಡುತ್ತದೆ. ಇದು ಈ ಬೆಲೆಯ ಇತರ ಅನೇಕ ಫೋನ್‌ಗಳಲ್ಲಿ ಇರುವ LCD ಡಿಸ್‌ಪ್ಲೇಗಿಂತ ಉತ್ತಮ ಅನುಭವವನ್ನು ಖಾತ್ರಿಪಡಿಸಬಹುದು. ಇದರ ಪಂಚ್-ಹೋಲ್ ವಿನ್ಯಾಸ ಮತ್ತು ತೆಳುವಾದ ಅಂಚುಗಳು ಆಧುನಿಕ ನೋಟವನ್ನು ನೀಡಿ ಯುವ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಕಾರ್ಯಕ್ಷಮತೆಗಾಗಿ, ಈ Galaxy A17 5G ಫೋನ್ Exynos 1330 ಚಿಪ್‌ಸೆಟ್‌ ಹೊಂದಿದೆ ಇದು 6GB ಅಥವಾ 8GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಲಭ್ಯವಾಗುವ ಸಾಧ್ಯತೆಯಿದೆ. ಸಾಫ್ಟ್‌ವೇರ್ ವಿಚಾರಕ್ಕೆ ಬಂದರೆ, ಇದು ಆಂಡ್ರಾಯ್ಡ್ 15 ಆಧಾರಿತ One UI 7.0 ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಮದಿಗೆ ಸ್ಯಾಮ್‌ಸಂಗ್‌ನ ಇತ್ತೀಚಿನ ಕಸ್ಟಮ್ ವೈಶಿಷ್ಟ್ಯಗಳು ಮತ್ತು ಭದ್ರತಾ ನವೀಕರಣಗಳು ಲಭ್ಯವಾಗುತ್ತವೆ.

ಭಾರತಕ್ಕೆ Galaxy A17 5G: ನಿರೀಕ್ಷಿತ ಬಿಡುಗಡೆ ದಿನಾಂಕ, ಬೆಲೆ ಮತ್ತು ಫಿಚರ್ಸ್!

Galaxy A17 5G ಫೋನಿನ ಕ್ಯಾಮೆರಾ ಸೆಟಪ್ ಕುರಿತ ಪೂರ್ಣ ಮಾಹಿತಿ ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೆ ತೈವಾನ್‌ನಲ್ಲಿನ ಬಿಡುಗಡೆಯ ವರದಿಗಳ ಪ್ರಕಾರ, ಇದು OIS ತಂತ್ರಜ್ಞಾನದ 50MP ಸಾಮರ್ಥ್ಯದ ಕ್ಯಾಮೆರಾ ಹೊಂದಿರುವ ನಿರೀಕ್ಷೆ ಇದೆ. ಹಾಗೂ AI-ವರ್ಧಿತ ಛಾಯಾಗ್ರಹಣವನ್ನು ಬೆಂಬಲಿಸುವ ಬಹು-ಲೆನ್ಸ್ ಹಿಂಭಾಗದ ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.

ಇನ್ನು ಈ ಫೋನ್‌ಗೆ ಶಕ್ತಿ ತುಂಬಲು 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ನೀಡಲಾಗಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದರ ವಿಶೇಷತೆ ಏನೆಂದರೆ, ಸಾಮಾನ್ಯವಾಗಿ ಸ್ಯಾಮ್‌ಸಂಗ್‌ನ ಪ್ರೀಮಿಯಂ ಫೋನ್‌ಗಳಲ್ಲಿ ಚಾರ್ಜಿಂಗ್ ಅಡಾಪ್ಟರ್ ಇರುವುದಿಲ್ಲ, ಆದರೆ Galaxy A17 5G ಫೋನ್ ಬಾಕ್ಸ್‌ನಲ್ಲಿ 25W ಅಡಾಪ್ಟರ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಗ್ರಾಹಕರಿಗೆ ಒಂದು ಹೆಚ್ಚುವರಿ ಪ್ರಯೋಜನವಾಗಿದೆ.

ಬಿಡುಗಡೆಯ ದಿನಾಂಕ ಹತ್ತಿರವಾದಂತೆ ಫೋನ್‌ನ ಇತರ ವೈಶಿಷ್ಟ್ಯಗಳು ಮತ್ತು ನಿಖರವಾದ ಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಸ್ಯಾಮ್‌ಸಂಗ್ ಈ ಹೊಸ ಫೋನ್ ಮೂಲಕ ಬಜೆಟ್ ಸ್ನೇಹಿ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಫೋನ್ ಬಯಸುವವರಿಗೆ Galaxy A17 5G ಒಂದು ಉತ್ತಮ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಈ ಹೊಸ ಫೋನ್ ಕುರಿತು ನಿಮ್ಮ ಅಭಿಪ್ರಾಯಗಳೇನು? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Samsung Galaxy A17 5G is arriving soon in India with budget pricing, 50MP OIS camera, AMOLED display, and 5000mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+