Samsung Galaxy F70e 5G ಸೇಲ್ ಆರಂಭ: ಕೊಡುಗೆಯ ಬೆಲೆ 11,999 ರೂ. ಮಾತ್ರ!
ಭಾರತದಲ್ಲಿ Samsung ಕಂಪೆನಿಯು ಇತ್ತೀಚಿಗಷ್ಟೇ ಬಿಡುಗಡೆಗೊಳಿಸಿದ್ದ ಬಜೆಟ್ ಬೆಲೆಯ Galaxy F70e 5G ಸ್ಮಾರ್ಟ್‌ಫೋನ್ ಇದೀಗ ಖರೀದಿಗೆ ಲಭ್ಯವಾಗಿದೆ. ಕಳೆದ ಫೆಬ್ರವರಿ.9 ರಂದು Galaxy F70 ಸರಣಿಯ ಮೊದಲ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಗಿರುವ ಈ ಫೋನ್ 4GB RAM ಮತ್ತು 6GB RAM ಹಾಗೂ 128GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಮಾರಾಟಕ್ಕೆ ಬಂದಿದ್ದು, ಗ್ರಾಹಕರು ಬ್ಯಾಂಕಿ್ ಕೊಡುಗೆಯ ಜೊತೆಗೆ 11,999 ರೂ. ಆರಂಭಿಕ ಬೆಲೆಗೆ ಖರೀದಿಸಬಹುದು. ದೇಶದ ಬಜೆಟ್ 5G ವಿಭಾಗವನ್ನು ಗುರಿಯಾಗಿಸಿಕೊಂಡಿರುವ ಈ ಫೋನ್, ದೊಡ್ಡ ಬ್ಯಾಟರಿ, ಸ್ಮೂತ್ ಡಿಸ್ಪ್ಲೇ ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲದೊಂದಿಗೆ ಗ್ರಾಹಕರ ಗಮನ ಸೆಳೆಯುವಂತಿದ್ದು, ಜೊತೆಗೆ ಆಕರ್ಷಕ ವಿನ್ಯಾಸ ಮತ್ತು ನಂಬಿಕಸ್ಥ ಕಾರ್ಯಕ್ಷಮತೆಯ ಸಮತೋಲನವನ್ನು ನೀಡುವ ಪ್ರಯತ್ನವಾಗಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Samsung Galaxy F70e 5G : ಭಾರತದಲ್ಲಿ ಬೆಲೆ, ಕೊಡುಗೆಗಳು
ಭಾರತದಲ್ಲಿ Samsung Galaxy F70e 5G ಬೆಲೆ 4GB RAM ಮತ್ತು 128GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಮೂಲ ರೂಪಾಂತರಕ್ಕೆ ರೂ. 13,999 ರಿಂದ ಪ್ರಾರಂಭವಾಗುತ್ತದೆ. ಇದು 6GB RAM ನೊಂದಿಗೆ ಸಹ ಲಭ್ಯವಿದ್ದು, ಇದರ ಬೆಲೆ ರೂ. 15,499. ಆದರೆ, ಬಿಡುಗಡೆ ಕೊಡುಗೆಯ ಭಾಗವಾಗಿ ಗ್ರಾಹಕರು ಆಯ್ದ ಬ್ಯಾಕ್ ಕಾರ್ಡ್‌ಗಳ ಮೇಲೆ 2,000 ರೂ. ರಿಯಾಯಿತಿಯನ್ನು ಪಡೆಯಬಹುದು ಎಂದು Samsung ತಿಳಿಸಿದೆ. ಇದರಿಂದ ಈ ಎರಡೂ ಮಾದರಿ ಫೋನ್‌ಗಳ ಬೆಲೆಗಳು ಕ್ರಮವಾಗಿ 11,999 ರೂ. ಮತ್ತು 13,499 ರೂ.ಗಳಿಗೆ ಲಭ್ಯವಾಗುತ್ತವೆ. ಇನ್ನು ಈ ಫೋನ್ ಲೈಮ್‌ಲೈಟ್ ಗ್ರೀನ್ ಮತ್ತು ಸ್ಪಾಟ್‌ಲೈಟ್ ಬ್ಲೂ ಬಣ್ಣ ಆಯ್ಕೆಗಳಲ್ಲಿ Samsung.com, ಫ್ಲಿಪ್‌ಕಾರ್ಟ್ ಮತ್ತು ದೇಶಾದ್ಯಂತ ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಾಗಿದೆ.
Samsung Galaxy F70e 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Samsung Galaxy F70e 5G ಫೋನ್ ಪ್ರೀಮಿಯಂ ಲುಕ್ ನೀಡುವ ಲೆದರ್ ಫಿನಿಷ್ ಹಿಂಭಾಗವನ್ನು ಹೊಂದಿದ್ದು, ಪಿಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಮೂಲಕ ವಿಭಿನ್ನ ಶೈಲಿಯನ್ನು ತೋರಿಸುತ್ತದೆ. ಮುಂಭಾಗದಲ್ಲಿ ವಾಟರ್‌ಡ್ರಾಪ್ ನಾಚ್ ಹೊಂದಿರುವ ದೊಡ್ಡ ಪರದೆ ನೀಡಲಾಗಿದೆ. ಈ ಫೋನ್‌ನಲ್ಲಿ 6.7 ಇಂಚಿನ HD+ LCD ಡಿಸ್ಪ್ಲೇ(720x1,600 ಪಿಕ್ಸೆಲ್‌ಗಳು) ಇದ್ದು, 120Hz ರಿಫ್ರೆಶ್ ರೇಟ್, 800 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು ಉತ್ತಮ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ. ದಿನನಿತ್ಯದ ಬಳಕೆ, ವೀಡಿಯೊ ಸ್ಟ್ರೀಮಿಂಗ್ ಮತ್ತು ಸಾಮಾಜಿಕ ಮಾಧ್ಯಮಕ್ಕೆ ಇದು ಸೂಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ.

ಕಾರ್ಯಕ್ಷಮತೆಗಾಗಿ Samsung Galaxy F70e 5G ನಲ್ಲಿ MediaTek Dimensity 6300 ಆಕ್ಟಾ-ಕೋರ್ ಪ್ರೊಸೆಸರ್ ಬಳಕೆ ಮಾಡಲಾಗಿದೆ. ಗರಿಷ್ಠ 2.4GHz ಕ್ಲಾಕ್ ಸ್ಪೀಡ್ ಹೊಂದಿರುವ ಈ ಚಿಪ್‌ಸೆಟ್, ARM Mali G57 GPU ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಗರಿಷ್ಠ 6GB LPDDR4x RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಇದೆ. ಸಾಫ್ಟ್‌ವೇರ್ ವಿಬಾಗದಲ್ಲಿ, Android 16 ಆಧಾರಿತ One UI 8 ಮೇಲೆ ಕಾರ್ಯನಿರ್ವಹಿಸುವ ಫೋನ್, ಆರು ವರ್ಷಗಳ OS ಅಪ್‌ಡೇಟ್‌ಗಳು ಮತ್ತು ಭದ್ರತಾ ಅಪ್‌ಡೇಟ್‌ಗಳ ಭರವಸೆಯನ್ನು ನೀಡಿರುವುದು ವಿಶೇಷವಾಗಿದೆ.
ಕ್ಯಾಮೆರಾ ವಿಭಾಗದಲ್ಲಿ Samsung Galaxy F70e 5G ಹಿಂಭಾಗದಲ್ಲಿ 50MP ಪ್ರೈಮರಿ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್ ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ನೀಡುತ್ತದೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ 6,000mAh ದೊಡ್ಡ ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ದೀರ್ಘಕಾಲ ಬಳಕೆಯ ಶಕ್ತಿ ಹೊಂದಿದೆ. ಇತ್ತೀಚಿನ ಸಂಪರ್ಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್ 167.4x77.4x8.2mm ಅಳತೆಯನ್ನು ಹೊಂದಿದ್ದು, ಸುಮಾರು 199g ತೂಗುತ್ತದೆ.
ಇನ್ನು ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, AnTuTu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೋನ್ ಸುಮಾರು 6,23,000 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಒಟ್ಟಾರೆಯಾಗಿ, ಹೊಸ Samsung Galaxy F70e 5G ಫೋನ್ ದೊಡ್ಡ ಬ್ಯಾಟರಿ, ಸ್ಮೂತ್ 120Hz ಡಿಸ್ಪ್ಲೇ, ನಂಬಿಕಸ್ಥ ಪ್ರೊಸೆಸರ್ ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲದೊಂದಿಗೆ ಬಜೆಟ್ 5G ಸ್ಮಾರ್ಟ್‌ಫೋನ್ ಹುಡುಕುತ್ತಿರುವ ಭಾರತೀಯ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿ ಕಾಣಿಸುತ್ತದೆ. ವಿಶೇಷವಾಗಿ, ಕಡಿಮೆ ಬೆಲೆಯಲ್ಲಿ Samsung ಬ್ರ್ಯಾಂಡ್‌ನ ವಿಶ್ವಾಸಾರ್ಹತೆ ಮತ್ತು ಮುಂದಿನ ವರ್ಷಗಳ ಅಪ್‌ಡೇಟ್ ಭರವಸೆ ಬೇಕಾದವರಿಗೆ ಈ ಫೋನ್ ಗಮನ ಸೆಳೆಯುವ ಸಾಧ್ಯತೆ ಹೆಚ್ಚು.


Click it and Unblock the Notifications