Galaxy F70e 5G vs Galaxy A07 5G: 2026ರ ಹೊಸ ಬಜೆಟ್ 5G ಫೋನ್‌ಗಳ ಹೋಲಿಕೆ!
ಭಾರತದಲ್ಲಿ ಬಜೆಟ್ 5G ಸ್ಮಾರ್ಟ್‌ಫೋನ್ ವಿಭಾಗದಲ್ಲಿ Samsung ತನ್ನ ಹೊಸ Galaxy F70e 5G ಮತ್ತು Galaxy A07 5G ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ 2026 ರಲ್ಲಿ ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಕಡಿಮೆ ಬೆಲೆಯಲ್ಲಿ ದೊಡ್ಡ ಡಿಸ್ಪ್ಲೇ, 6,000mAh ಬ್ಯಾಟರಿ, MediaTek Dimensity 6300 ಪ್ರೊಸೆಸರ್ ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲದೊಂದಿಗೆ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಆದರೆ, ವಿನ್ಯಾಸ, ಬೆಲೆ ಮತ್ತು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳ ವಿಷಯದಲ್ಲಿ ಪ್ರಮುಖ ವ್ಯತ್ಯಾಸಗಳಿವೆ. ಹಾಗಾಗಿ, ಇಂದಿನ ಲೇಖನದಲ್ಲಿ Galaxy F70e 5G ಮತ್ತು Galaxy A07 5G ಎರಡು ಹೊಸ ಬಜೆಟ್ 5G ಫೋನ್‌ಗಳ ಸಂಪೂರ್ಣ ಹೋಲಿಕೆಯನ್ನು ನೋಡೋಣ ಬನ್ನಿ. ಮತ್ತು ನಿಮ್ಮ ಖರೀದಿಯನ್ನು ಸುಲಭಗೊಳಿಸಿ.!
ಬೆಲೆ ಮತ್ತು ಲಭ್ಯತೆ: Galaxy F70e ಹೆಚ್ಚು ಕೈಗೆಟುಕುವುದು ಯಾವುದು?
Galaxy F70e 5G ಅನ್ನು ಭಾರತದಲ್ಲಿ ₹12,999 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಮಾದರಿಯ ಬೆಲೆ ₹14,999 ಆಗಿದೆ. ಇನ್ನೊಂದೆಡೆ, Galaxy A07 5G ₹15,999 ಆರಂಭಿಕ ಬೆಲೆಯಲ್ಲಿ ಲಭ್ಯವಿದ್ದು, 6GB RAM ಮಾದರಿಯ ಬೆಲೆ ₹17,999 ಆಗಿದೆ. ಬ್ಯಾಂಕ್ ಆಫರ್‌ಗಳೊಂದಿಗೆ Galaxy A07 5G ಮೇಲೆ ₹1,000 ಕ್ಯಾಶ್‌ಬ್ಯಾಕ್ ಲಭ್ಯವಿದ್ದರೂ, ಒಟ್ಟಾರೆ ಬೆಲೆ ದೃಷ್ಟಿಯಿಂದ Galaxy F70e 5G ಹೆಚ್ಚು ಕೈಗೆಟುಕುವ ಆಯ್ಕೆಯಾಗಿದೆ.
ವಿನ್ಯಾಸ ಮತ್ತು ಬಿಲ್ಡ್: F70e ನಲ್ಲಿ ಪ್ರೀಮಿಯಂ ಲೆದರ್ ಫಿನಿಷ್
Galaxy F70e 5G ಲೆದರ್-ಫಿನಿಷ್ ಹಿಂಭಾಗದೊಂದಿಗೆ ಹೆಚ್ಚು ಪ್ರೀಮಿಯಂ ಲುಕ್ ನೀಡುತ್ತದೆ.Galaxy A07 5G ಸರಳ ಮತ್ತು ಗ್ಲಾಸಿ ಕ್ಲಾಸಿಕ್ ವಿನ್ಯಾಸ ಹೊಂದಿದೆ. ಈ ಎರಡೂ ಫೋನ್‌ಗಳು IP54 dust ಮತ್ತು splash resistance ಹೊಂದಿದ್ದು, ಧೂಳು ಮತ್ತು ನೀರಿನ ಸಣ್ಣ ಸಿಂಚನದಿಂದ ರಕ್ಷಣೆ ನೀಡುತ್ತವೆ.
ಡಿಸ್ಪ್ಲೇ: ಎರಡೂ ಫೋನ್‌ಗಳಲ್ಲಿ 120Hz ಸ್ಮೂತ್ ಅನುಭವ
Galaxy F70e 5G ಮತ್ತು Galaxy A07 5G ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 6.7 ಇಂಚಿನ HD+ PLS LCD ಡಿಸ್ಪ್ಲೇ ನೀಡಲಾಗಿದೆ. 120Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೋಲಿಂಗ್, ಗೇಮಿಂಗ್ ಮತ್ತು ವೀಡಿಯೊ ವೀಕ್ಷಣೆ ಹೆಚ್ಚು ಸ್ಮೂತ್ ಆಗಿರುತ್ತದೆ.800 ನಿಟ್ಸ್ ಪೀಕ್ ಬ್ರೈಟ್‌ನೆಸ್ ಬೆಂಬಲದಿಂದ ಹೊರಾಂಗಣದಲ್ಲಿ ಸಹ ಪರದೆ ಸ್ಪಷ್ಟವಾಗಿ ಕಾಣುತ್ತದೆ. ಈ ಬೆಲೆ ವಿಭಾಗದಲ್ಲಿ 120Hz ಡಿಸ್ಪ್ಲೇ ಒಂದು ಪ್ರಮುಖ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು.
ಕಾರ್ಯಕ್ಷಮತೆ: MediaTek Dimensity 6300 ಮೂಲಕ ಸಮತೋಲನದ ಪ್ರದರ್ಶನ
Galaxy F70e 5G ಮತ್ತು Galaxy A07 5G ಎರಡೂ ಎರಡೂ ಫೋನ್‌ಗಳಲ್ಲಿ MediaTek Dimensity 6300 ಆಕ್ಟಾ-ಕೋರ್ ಪ್ರೊಸೆಸರ್ ಬಳಕೆಯಾಗಿದೆ. ಇದು 2.4GHz ಕ್ಲಾಕ್ ಸ್ಪೀಡ್ ಹೊಂದಿದ್ದು, ದಿನನಿತ್ಯದ ಬಳಕೆ, ಸಾಮಾಜಿಕ ಮಾಧ್ಯಮ, ವೀಡಿಯೊ ಸ್ಟ್ರೀಮಿಂಗ್ ಮತ್ತು ಲಘು ಗೇಮಿಂಗ್‌ಗೆ ಸಮರ್ಪಕ ಕಾರ್ಯಕ್ಷಮತೆ ನೀಡುತ್ತದೆ.

ಎರಡೂ ಫೋನ್‌ಗಳು 4GB ಮತ್ತು 6GB RAM ಆಯ್ಕೆಗಳಲ್ಲಿ ಲಭ್ಯ. ಜೊತೆಗೆ Galaxy A07 5G ನಲ್ಲಿ microSD ಕಾರ್ಡ್ ಮೂಲಕ ಸ್ಟೋರೇಜ್ ಅನ್ನು 2TB ವರೆಗೆ ವಿಸ್ತರಿಸಬಹುದಾಗಿದೆ, ಇದು ಹೆಚ್ಚಿನ ಡೇಟಾ ಸಂಗ್ರಹಿಸಲು ಅನುಕೂಲಕರ. AnTuTu ಬೆಂಚ್‌ಮಾರ್ಕ್‌ನಲ್ಲಿ Galaxy F70e ಸುಮಾರು 6,23,000 ಅಂಕಗಳನ್ನು ಗಳಿಸಿದೆ ಎಂದು ವರದಿಯಾಗಿದೆ, ಇದು ಈ ಬೆಲೆ ವಿಭಾಗದಲ್ಲಿ ಉತ್ತಮ ಪ್ರದರ್ಶನವಾಗಿದೆ.
ಸಾಫ್ಟ್‌ವೇರ್ ಮತ್ತು ಅಪ್‌ಡೇಟ್‌ಗಳು: ದೀರ್ಘಕಾಲದ ಬೆಂಬಲ ಪ್ರಮುಖ ಹೈಲೈಟ್
Galaxy F70e 5G ಮತ್ತು Galaxy A07 5G ಎರಡೂ Android 16 ಆಧಾರಿತ One UI 8 ನಲ್ಲಿ ಕಾರ್ಯನಿರ್ವಹಿಸುತ್ತವೆ. Samsung ಈ ಫೋನ್‌ಗಳಿಗೆ ಆರು ವರ್ಷಗಳ OS ಮತ್ತು ಭದ್ರತಾ ಅಪ್‌ಡೇಟ್‌ಗಳನ್ನು ಒದಗಿಸುವ ಭರವಸೆ ನೀಡಿದೆ.ಈ ಮಟ್ಟದ ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲವು ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಅಪರೂಪವಾಗಿದ್ದು, ಭವಿಷ್ಯದಲ್ಲಿಯೂ ಫೋನ್ ಬಳಸಲು ಇದು ಪ್ರಮುಖ ಲಾಭವಾಗಿದೆ.
ಕ್ಯಾಮೆರಾ: ಸಾಮಾನ್ಯ ಬಳಕೆ ಮತ್ತು ಸಾಮಾಜಿಕ ಮಾಧ್ಯಮಕ್ಕೆ ಸೂಕ್ತ
Galaxy F70e 5G ಮತ್ತು Galaxy A07 5G ಎರಡೂ ಎರಡೂ ಫೋನ್‌ಗಳಲ್ಲಿ 50MP ಪ್ರೈಮರಿ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್ ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಸೆಲ್ಫಿಗಳಿಗಾಗಿ 8MP ಫ್ರಂಟ್ ಕ್ಯಾಮೆರಾ ಇದೆ. Full HD ವಿಡಿಯೋ ರೆಕಾರ್ಡಿಂಗ್ ಬೆಂಬಲ ಮತ್ತು AI ಆಧಾರಿತ ಫೋಟೋಗ್ರಫಿ ಫೀಚರ್‌ಗಳು ಉತ್ತಮ ಚಿತ್ರ ಗುಣಮಟ್ಟವನ್ನು ನೀಡಲು ಸಹಾಯ ಮಾಡುತ್ತವೆ. ದಿನದ ಬೆಳಕಿನಲ್ಲಿ ಎರಡೂ ಫೋನ್‌ಗಳು ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಸಮರ್ಥವಾಗಿವೆ.
ಬ್ಯಾಟರಿ ಮತ್ತು ಚಾರ್ಜಿಂಗ್: 6000mAh ಬ್ಯಾಟರಿ ಮೂಲಕ ದೀರ್ಘಕಾಲ ಬಳಕೆ
Galaxy F70e 5G ಮತ್ತು Galaxy A07 5G ಎರಡೂ ಎರಡೂ ಫೋನ್‌ಗಳ ಪ್ರಮುಖ ಆಕರ್ಷಣೆ 6,000mAh ದೊಡ್ಡ ಬ್ಯಾಟರಿ. ಸಾಮಾನ್ಯ ಬಳಕೆಯಲ್ಲಿ ಒಂದು ದಿನಕ್ಕಿಂತ ಹೆಚ್ಚು ಬ್ಯಾಟರಿ ಬ್ಯಾಕಪ್ ನಿರೀಕ್ಷಿಸಬಹುದು.ಇದಲ್ಲದೆ, ಎರಡೂ ಫೋನ್‌ಗಳು 25W ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡುತ್ತವೆ, ಇದು ಕಡಿಮೆ ಸಮಯದಲ್ಲಿ ಬ್ಯಾಟರಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ.
ಹೆಚ್ಚುವರಿ ವೈಶಿಷ್ಟ್ಯಗಳು: ಸಂಪರ್ಕ
Galaxy F70e 5G ಮತ್ತು Galaxy A07 5G ಎರಡೂ ಎರಡೂ ಫೋನ್‌ಗಳು 5G, 4G LTE, Wi-Fi, Bluetooth 5.3, USB Type-C ಮತ್ತು GPS ಬೆಂಬಲ ಹೊಂದಿವೆ.
ಒಟ್ಟಾರೆ ತೀರ್ಮಾನ: ಯಾವುದು ಉತ್ತಮ ಆಯ್ಕೆ?
Galaxy F70e 5G ಕಡಿಮೆ ಬೆಲೆ, ಪ್ರೀಮಿಯಂ ಲೆದರ್ ವಿನ್ಯಾಸದಿಂದ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಆಯ್ಕೆಯಾಗಿ ಕಾಣಿಸುತ್ತದೆ. ಇನ್ನೊಂದೆಡೆ, Galaxy A07 5G ಫೋನ್ ಸರಳ ಮತ್ತು ಗ್ಲಾಸಿ ಕ್ಲಾಸಿಕ್ ವಿನ್ಯಾಸದಿಂದ ಗಮನಸೆಳೆಯುತ್ತದೆ. ನಿಮ್ಮ ಆದ್ಯತೆ ವೈಯಕ್ತಿಕ ವಿನ್ಯಾಸದ ಶೈಲಿ ಮೇಲೆ ಇದೆ. ಏಕೆಂದರೆ ಇವುಗಳ ಆಂತರಿಕ ವಿಶೇಷಣಗಳು ಬಹುತೇಕ ಒಂದೇ ಆಗಿವೆ. Samsung ಬ್ರ್ಯಾಂಡ್ ವಿಶ್ವಾಸಾರ್ಹತೆಯೊಂದಿಗೆ ಎರಡೂ ಫೋನ್‌ಗಳು ಉತ್ತಮ ಆಯ್ಕೆಯಾದರೂ ಸಹ, ಬೆಲೆ ವಿಷಯದಲ್ಲಿ Galaxy F70e 5G ನಮ್ಮ ಗಮನಸೆಳೆದಿದೆ.


Click it and Unblock the Notifications