'ಗ್ಯಾಲಕ್ಸಿ ಎಂ' ಸರಣಿ ಫೋನ್‌ಗಳ ಮೇಲೆ ತಲಾ 1000 ರೂ. ಬೆಲೆ ಇಳಿಕೆ!
ಅಮೆಜಾನ್ ತನ್ನ ಫ್ರೀಡಂ ಸೇಲ್ ಅನ್ನು ಮುಕ್ತಾಯಗೊಳಿಸಿದ ಕೆಲವೇ ದಿನಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 30 ಮತ್ತು ಗ್ಯಾಲಕ್ಸಿ ಎಂ 20 ಸ್ಮಾರ್ಟ್‌ಫೋನ್‌ಗಳ ಮೇಲೆ ಮತ್ತೆ ರಿಯಾಯಿತಿ ಘೋಷಿಸಲಾಗಿದೆ. ಭಾರತದ ಬಜೆಟ್ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಕಂಪೆನಿಗೆ ಮರುಜೀವ ನೀಡಿರುವ ಎಂ ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆಗಳಲ್ಲಿ ತಲಾ 1000 ರೂ. ಇಳಿಕೆ ಮಾಡಲಾಗಿದ್ದು, ಅಮೆಜಾನ್.ಇನ್ ಮತ್ತು ಸ್ಯಾಮ್‌ಸಂಗ್‌ನ ಎರಡೂ ಆನ್‌ಲೈನ್ ತಾಣಗಳಲ್ಲಿ ಇದೀಗ ಕಡಿಮೆ ಬೆಲೆಗೆ ಲಭ್ಯವಿವೆ.

ಅಮೆಜಾನ್.ಇನ್ ಮತ್ತು ಸ್ಯಾಮ್‌ಸಂಗ್‌ನ ಆನ್‌ಲೈನ್ ತಾಣಗಳಲ್ಲಿ ಪಟ್ಟಿ ಮಾಡಿರುವ ಪ್ರಕಾರ, 4 ಜಿಬಿ RAM + 64 ಜಿಬಿ ಸ್ಟೋರೇಜ್ ರೂಪಾಂತದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 30 ಸ್ಮಾರ್ಟ್‌ಫೋನ್ 13,990 ರೂ. ಗಳಿಗೆ ಲಭ್ಯವಿದೆ. ಮತ್ತೊಂದೆಡೆ ಗ್ಯಾಲಕ್ಸಿ ಎಂ 30 6 ಜಿಬಿ RAM + 128 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 17,990 ರಿಂದ ಕೇವಲ 16,990 ರೂ.ಗಳಿಗೆ ಇಳಿಕೆಯಾಗಿದೆ. ಇದರ ಜೊತೆಗೆ ನೋ ಕಾಸ್ಟ್ ಇಎಂಐ ಹಾಗೂ 7,800ರೂ. ಗಳವರೆಗೆ ಎಕ್ಸ್‌ಚೇಂಜ್ ಡಿಸ್ಕೌಂಟ್ ಆಫರ್ ನೀಡಲಾಗಿದೆ.
ಸ್ಯಾಮ್‌ಸಂಗ್‌ನ ಜನಪ್ರಿಯ ಸರಣಿ ಎಂದು ಗುರುತಿಸಿಕೊಂಡಿರುವ ಗ್ಯಾಲಕ್ಸಿ ಎಂ 20 ಸರಣಿ ಫೋನ್‌ಗಳ ಬೆಲೆ ಕೂಡ ಇಳಿಕೆಯಾಗಿದೆ. 3 ಜಿಬಿ RAM + 32 ಜಿಬಿ ರೂಪಾಂತರದ ಗ್ಯಾಲಕ್ಸಿ ಎಂ 20 ಫೋನ್ ಇದೀಗ ಕೇವಲ ₹ 9,990 ರೂ. ಗಳಿಗೆ ಲಭ್ಯವಿದ್ದು, ಹಾಗೆಯೇ 4 ಜಿಬಿ ರ್ಯಾಮ್ + 64 ಜಿಬಿ ಸ್ಟೋರೇಜ್ ರೂಪಾಂತರವು ಪ್ರಸ್ತುತ 11,990 ರೂಪಾಯಿಗಳಿಗೆ ಖರೀದಿಗೆ ಲಭ್ಯವಿದೆ. ಈ ಮೊದಲು ಈ ಸ್ಮಾರ್ಟ್‌ಪೋನ್‌ಗಳು ಕ್ರಮವಾಗಿ 10,990 ರೂ. ಹಾಗೂ 12,990 ರೂಪಾಯಿಗಳ ಬೆಲೆಗಳನ್ನು ಹೊಂದಿದ್ದವು.
ಇನ್ನು ಈ ಮೊದಲು 8,990 ರೂ.ಗಳ ಬೆಲೆಯನ್ನು ಹೊಂದಿದ್ದ ಗ್ಯಾಲಕ್ಸಿ ಎಂ 10 ಸ್ಮಾರ್ಟ್‌ಫೋನಿನ 3 ಜಿಬಿ ರ್ಯಾಮ್ + 32 ಜಿಬಿ ಸ್ಟೋರೇಜ್ ರೂಪಾಂತರದ ಪೋನ್ ಬೆಲೆ ಇದೀಗ 7,990 ರೂ. ಗಳಾಗಿವೆ. ಜೊತೆಗೆ ಅಮೆಜಾನ್.ಇನ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಇಎಂಐ ವಹಿವಾಟಿನ ಮೂಲಕ ಮಾಡಿದ ಖರೀದಿಗಳಿಗೆ ಐದು ಪ್ರತಿಶತದಷ್ಟು (1,500 ರೂ.ವೆಗಿನ) ತ್ವರಿತ ರಿಯಾಯಿತಿ ಹಾಗೂ ಅಮೆಜಾನ್.ಇನ್ ಮತ್ತು ಸ್ಯಾಮ್‌ಸಂಗ್‌ನ ಆನ್‌ಲೈನ್ ಸ್ಟೋರ್‌ಗಳಲ್ಲಿ ವಿನಿಮಯ ಆಯ್ಕೆಯನ್ನು ನೀಡಲಾಗಿದೆ.
ವಿಶೇಷವೆಂದರೆ, ಗ್ಯಾಲಕ್ಸಿ ಎಂ ಸರಣಿ ಫೋನ್‌ಗಳ ಮೇಲಿನ ರಿಯಾಯಿತಿಗಳು ಸ್ಯಾಮ್‌ಸಂಗ್‌ನ ಚೀನೀ ಪ್ರತಿಸ್ಪರ್ಧಿಗಳಾದ ರಿಯಲ್‌ಮಿ ಮತ್ತು ಶಿಯೋಮಿಯ ಹೊಸ ಉಡಾವಣೆಗಳಿಗಿಂತ ಸ್ವಲ್ಪ ಮುಂದಿದೆ. ಆಗಸ್ಟ್ 20 ರಂದು ರಿಯಲ್‌ಮಿ ಕಂಪೆನಿ ತನ್ನ ರಿಯಲ್‌ಮಿ 5 ಮತ್ತು ರಿಯಲ್‌ಮಿ 5 ಪ್ರೊ ಅನ್ನು ಬಿಡುಗಡೆ ಮಾಡುತ್ತಿದ್ದರೆ, ಶಿಯೋಮಿ ಆಗಸ್ಟ್ 21 ರಂದು ಮಿ ಎ3 ಅನ್ನು ಬಿಡುಗಡೆ ಮಾಡುತ್ತಿದೆ. ಈ ಎಲ್ಲಾ ಮೂರು ಫೋನ್‌ಗಳು ಗ್ಯಾಲಕ್ಸಿ ಎಂ-ಸೀರೀಸ್ ಫೋನ್‌ಗಳ ವಿರುದ್ಧ ಪ್ರತಿಸ್ಪರ್ಧಿಯಾಗಿ ಲಭ್ಯವಾಗುವ ನಿರೀಕ್ಷೆಯಿದೆ.


Click it and Unblock the Notifications








