Subscribe to Gizbot

ಸ್ವೈಪ್ ಅಪ್ಲಿಕೇಶನ್ ಹೊಸ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ನಲ್ಲಿ ಏಕಿಲ್ಲ?

Posted By:
ಸ್ವೈಪ್ ಅಪ್ಲಿಕೇಶನ್ ಹೊಸ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ನಲ್ಲಿ ಏಕಿಲ್ಲ?

ಸ್ವೈಪ್ ಆಕರ್ಷಕ ಮತ್ತು ಬಳಕೆದಾರರಿಗೆ ಸುಲಭವಾಗಿರುವಂತಹ ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದು ಕಡಿಮೆ ಅವಧಿಯಲ್ಲಿ ಅಧಿಕ ಜನಪ್ರಿಯತೆಯನ್ನು ಗಳಿಸಿತ್ತು. ಆದರೆ ಗೆಲಾಕ್ಸಿ ನೆಕ್ಸಾಸ್ ಮೊಬೈಲ್ ನಲ್ಲಿ ಐಸ್ ಕ್ರೀಮ್ ಸ್ಯಾಂಡ್ ವಿಚ್ ಆಂಡ್ರಾಯ್ಡ್ ಹೊಂದಿದೆ. ಆದರೆ ಈ ಹೊಸ ಆಂಡ್ರಾಯ್ಡ್ ಆಯಾಮದಲ್ಲಿ ಸ್ವೈಪ್ ಕೀ ಬೋರ್ಡ್ ಹೊಂದಿಲ್ಲದಿರುವುದು ನೆಕ್ಸಾಸ್ ಮೊಬೈಲ್ ಹೊಂದಿರುವವರಿಗೆ ನಿರಾಸೆಯನ್ನು ಉಂಟುಮಾಡಿದೆ.

ಇದರಲ್ಲಿ ವಿಪರ್ಯಾಸವೆಂದರೆ ಈ ಸ್ವೈಪ್ ಅಪ್ಲಿಕೇಶನ್ ಅನ್ನ ಸ್ಯಾಮ್ ಸಂಗ್ ನಲ್ಲಿ ಬಳಸಲಾಗಿತ್ತು, ಈಗ ಅದರದೆ ಸ್ಮಾರ್ಟ್ ಫೋನ್ ನಲ್ಲಿ ಸ್ವೈಪ್ ಅಪ್ಲಿಕೇಶನ್ ಇಲ್ಲದಾಗಿದೆ.ಈ ಹೊಸ ಐಸ್ ಕ್ರೀಮ್ ಸ್ಯಾಂಡ್ ವಿಚ್ ಆಂಡ್ರಾಯ್ಡ್ ನಲ್ಲಿ ಸ್ಕ್ರೀನ್ ರೆಸ್ಯೂಲೇಶನ್ ವಿಭಿನ್ನವಾಗಿದೆ. ಈ ಹೊಸ ಆಪರೇಟಿಂಗ್ ಸಿಸ್ಟಮ್ ತನ್ನದೆಯಾದ ಕಾರ್ಯ ವೈರಿಯನ್ನು ಹೊಂದಿದೆ. ಆದ್ದರಿಂದ ಅನೇಕ ಅಪ್ಲಿಕೇಶನ್ ಗಳು ಇದರಲ್ಲಿ ಸರಿಯಾಗಿ ಹೊಂದುವುದಿಲ್ಲ. ಆ ಕಾರಣದಿಂದ ನೆಕ್ಸಾಸ್ ಮೊಬೈಲ್ ನಲ್ಲಿ ಸ್ವೈಪ್ ಅಪ್ಲಿಕೇಶನ್ ಬಳಸಲಾಗಲಿಲ್ಲ.

ಸ್ವೈಪ್ ಬಳಸಲು ಸುಲಭವಾಗಿರುವುದರಿಂದ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಸ್ವೈಪ್ ತಯಾರಕರು ಹೊಸ ಆಂಡ್ರಾಯ್ಡ್ ಆಯಾಮದಲ್ಲಿ ಸ್ವೈಪ್ ಅಪ್ಲಿಕೇಶನ್ ಬಳಸಲು ಸಾಧ್ಯವಾಗುವಂತೆ ಸ್ವೈಪ್ ನಲ್ಲಿ ಕೆಲವು ಮಾರ್ಪಾಡು ತರಲಿದೆ ಎಂದು ಹೇಳಿದೆ.ಆದ್ದರಿಂದ ಸಧ್ಯದಲ್ಲಿಯೆ ಸ್ಯಾಮ್ ಸಂಗ್ ಬಳಕೆದಾರರು ಸ್ವೈಪ್ ಅಪ್ಲಿಕೇಶನ್ ಅನ್ನು ತಮ್ಮ ಗೆಲಾಕ್ಸಿ ನೆಕ್ಸಾಸ್ ಮೊಬೈಲ್ ನಲ್ಲಿ ಪಡೆಯಬುದು ಎಂದು ಸ್ವೈಪ್ ತಯಾರಕರು ಭರವಸೆಯನ್ನು ನೀಡಿದ್ದಾರೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot