Home
ಮೊಬೈಲ್

Samsung Galaxy S26 ಸರಣಿ: ಲಾಂಚ್ ಡೇಟ್, ಫೀಚರ್ಸ್ ಮತ್ತು ಬೆಲೆಗಳು ಲೀಕ್!

ಇತ್ತೀಚಿನ ದಿನಗಳಲ್ಲಿ ಆಪಲ್, ಒನ್‌ಪ್ಲಸ್ ಹಾಗೂ ವೀವೋ ಸೇರಿದಂತೆ ಹಲವು ಕಂಪನಿಗಳು ತಮ್ಮ ಹೊಸ ಹೈಎಂಡ್ ಫೋನ್‌ಗಳನ್ನು ಮಾರುಕಟ್ಟೆಗೆ ತಂದಿವೆ. ಆದರೆ ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಸರಣಿಯನ್ನು ಇನ್ನೂ ಅಧಿಕೃತವಾಗಿ ಅನಾವರಣಗೊಳಿಸದ ಪ್ರಮುಖ ಬ್ರ್ಯಾಂಡ್ ಎಂದರೆ Samsung ಮಾತ್ರ. ಆದರೆ, ಈಗ Samsung‌ನ ಸರದಿ ಬರಲು ಸಿದ್ಧವಾಗಿದೆ. ಲೀಕ್‌ಗಳು ಮತ್ತು ವರದಿಗಳ ಪ್ರಕಾರ, ಬಹುನಿರೀಕ್ಷಿತ Samsung Galaxy S26 series ಶೀಘ್ರದಲ್ಲೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಕಳೆದ ಕೆಲವು ವಾರಗಳಿಂದ Galaxy S26 ಸರಣಿಯ ವಿನ್ಯಾಸ, ಡಿಸ್‌ಪ್ಲೇ, ಕಾರ್ಯಕ್ಷಮತೆ, ಬ್ಯಾಟರಿ ಮತ್ತು ಕ್ಯಾಮೆರಾ ಕುರಿತು ಹಲವು ಮಾಹಿತಿಗಳು ಹೊರಬಿದ್ದಿವೆ. ಹಾಗಾಗಿ, ಈ ಲೇಖನದಲ್ಲಿ Galaxy S26 ಸರಣಿಯ ಬಿಡುಗಡೆ ವಿವರಗಳಿಂದ ಹಿಡಿದು ಪ್ರಮುಖ ಫೀಚರ್‌ಗಳು ಮತ್ತು ನಿರೀಕ್ಷಿತ ಬೆಲೆವರೆಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಫೆಬ್ರವರಿ 25ರಂದು ಬಿಡುಗಡೆ ಸಾಧ್ಯತೆ!
ಎಕ್ಸ್‌ನಲ್ಲಿ ಟಿಪ್‌ಸ್ಟರ್ ಐಸ್ ಯೂನಿವರ್ಸ್ ಒದಗಿಸಿರುವ ಮಾಹಿತಿಯಂತೆ, Samsung Galaxy S26 ಸರಣಿಯನ್ನು 2026ರ ಫೆಬ್ರವರಿ 25ರಂದು ಅಮೆರಿಕದ ಸಾನ್ ಫ್ರಾನ್ಸಿಸ್ಕೋದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ನಗರವನ್ನು ಆಯ್ಕೆ ಮಾಡಿರುವುದು Samsung ತನ್ನ ಹೊಸ ಫೋನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (AI) ಫೀಚರ್‌ಗಳಿಗೆ ನೀಡುತ್ತಿರುವ ಮಹತ್ವವನ್ನು ಹೈಲೈಟ್ ಮಾಡಲು ಎನ್ನಲಾಗುತ್ತಿದೆ. ಅಧಿಕೃತ ಲಾಂಚ್ ನಂತರ, Samsung Galaxy S26 ಫೋನ್‌ಗಳು ಮಾರ್ಚ್ ಆರಂಭದಲ್ಲಿ ಮಾರುಕಟ್ಟೆಗೆ ಲಭ್ಯವಾಗಬಹುದು ಎಂದು ಮತ್ತೊಬ್ಬ ಟಿಪ್‌ಸ್ಟರ್ @Evleaks ಅವರು ಸಹ ಹೇಳಿದ್ದಾರೆ.

Samsung Galaxy S26 ಸರಣಿ: ನಿರೀಕ್ಷಿತ ವೈಶಿಷ್ಟ್ಯಗಳು
ವಿನ್ಯಾಸದ ವಿಷಯದಲ್ಲಿ, Galaxy S26 ಸರಣಿಯಲ್ಲಿ ದೊಡ್ಡ ಬದಲಾವಣೆಗಳಿಲ್ಲದಿದ್ದರೂ, ಕೆಲವು ಗಮನಾರ್ಹ ಅಪ್‌ಡೇಟ್‌ಗಳು ಇರಲಿವೆ. ಎಲ್ಲ ಮಾದರಿಗಳಲ್ಲೂ ಒಂದೇ ರೀತಿಯ ಕ್ಯಾಮೆರಾ ಮಾಡ್ಯೂಲ್ ವಿನ್ಯಾಸವನ್ನು ಬಳಸುವ ಸಾಧ್ಯತೆ ಇದೆ. ವಿಶೇಷವಾಗಿ Galaxy S26 Ultra ಮಾದರಿಯಲ್ಲಿ ಹೆಚ್ಚು ವೃತ್ತಾಕಾರದ ಮೂಲೆಗಳು, ಹೊಸ ಬಣ್ಣಗಳ ಆಯ್ಕೆ ಮತ್ತು ಮರು ವಿನ್ಯಾಸಗೊಳಿಸಿದ ಎಸ್ ಪೆನ್ ಕಾಣಿಸಿಕೊಳ್ಳಬಹುದು. ಇದರಿಂದ ಫೋನ್ ಕೈಯಲ್ಲಿ ಹಿಡಿಯಲು ಇನ್ನಷ್ಟು ಆರಾಮದಾಯಕವಾಗಲಿರುವ ಭರವಸೆ ಇದೆ.

ಡಿಸ್‌ಪ್ಲೇ ವಿಭಾಗದಲ್ಲಿ Samsung ತನ್ನ ತಂತ್ರಜ್ಞಾನ ಶಕ್ತಿಯನ್ನು ಮತ್ತೊಮ್ಮೆ ತೋರಿಸಲಿದೆ ಎನ್ನಲಾಗುತ್ತಿದೆ. Galaxy S26 ಅಲ್ಟ್ರಾ ಮಾದರಿಯಲ್ಲಿ 6.9 ಇಂಚಿನ ಕ್ಯೂಎಚ್‌ಡಿ OLED ಡಿಸ್‌ಪ್ಲೇ ಇರಬಹುದು. ಸಾಮಾನ್ಯ Galaxy S26 ಮಾದರಿಯಲ್ಲಿ 6.2 ಇಂಚಿನ ಡಿಸ್‌ಪ್ಲೇ ಮತ್ತು S26 ಪ್ಲಸ್ ಮಾದರಿಯಲ್ಲಿ ದೊಡ್ಡ 6.9 ಇಂಚಿನ ಸ್ಕ್ರೀನ್ ನೀಡಲಾಗುತ್ತದೆ ಎಂಬ ಮಾಹಿತಿ ಇದೆ. ಈ ಡಿಸ್‌ಪ್ಲೇಗಳು ಉತ್ತಮ ಬ್ರೈಟ್‌ನೆಸ್ ಮತ್ತು ಪ್ರೈವಸಿ ಫೀಚರ್‌ಗಳನ್ನು ಹೊಂದಿರಬಹುದು.

Samsung Galaxy S26 ಸರಣಿ: ಲಾಂಚ್ ಡೇಟ್, ಫೀಚರ್ಸ್ ಮತ್ತು ಬೆಲೆಗಳು ಲೀಕ್!

ಕಾರ್ಯಕ್ಷಮತೆಯ ದೃಷ್ಟಿಯಿಂದ, Galaxy S26 ಸರಣಿಯಲ್ಲಿ ಎರಡು ವಿಭಿನ್ನ ಪ್ರೊಸೆಸರ್‌ಗಳನ್ನು ಬಳಸುವ ಸಾಧ್ಯತೆ ಇದೆ. ಕೆಲವು ದೇಶಗಳಲ್ಲಿ Samsung‌ನ ಹೊಸ Exynos 2600 ಚಿಪ್‌ಸೆಟ್ ಲಭ್ಯವಾಗಬಹುದು. ಇದು 2nm ತಂತ್ರಜ್ಞಾನದಲ್ಲಿ ತಯಾರಾಗಿರುವ ಮೊದಲ ಸ್ಮಾರ್ಟ್‌ಫೋನ್ ಚಿಪ್‌ಸೆಟ್ ಆಗಿರಲಿದೆ. ಇತರ ಮಾರುಕಟ್ಟೆಗಳಲ್ಲಿ Snapdragon 8 Elite Gen 5 ಪ್ರೊಸೆಸರ್ ನೀಡುವ ಸಾಧ್ಯತೆ ಇದೆ. ಜೊತೆಗೆ, ಹೆಚ್ಚಿನ AI ಆಧಾರಿತ ಫೀಚರ್‌ಗಳು ಈ ಸರಣಿಯ ಪ್ರಮುಖ ಆಕರ್ಷಣೆಯಾಗಲಿವೆ.

ಬ್ಯಾಟರಿ ಮತ್ತು ಚಾರ್ಜಿಂಗ್ ವಿಭಾಗದಲ್ಲೂ ಸುಧಾರಣೆ ಕಂಡುಬರುವ ನಿರೀಕ್ಷೆ ಇದೆ. Galaxy S26 ಅಲ್ಟ್ರಾ ಮಾದರಿಯಲ್ಲಿ 5,000mAh ಬ್ಯಾಟರಿ ಹಾಗೂ 60W ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಬಹುದು. S26 ಮಾದರಿಯಲ್ಲಿ ಸುಮಾರು 4,300mAh ಮತ್ತು S26 ಪ್ಲಸ್‌ನಲ್ಲಿ 4,900mAh ಬ್ಯಾಟರಿ ನೀಡಲಾಗುತ್ತದೆ ಎನ್ನಲಾಗಿದೆ. ಈ ಫೋನ್‌ಗಳು Qi2 ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಹೊಂದಿದ್ದು, ಮ್ಯಾಗ್‌ಸೇಫ್ ರೀತಿಯ ಆಕ್ಸೆಸರಿಗಳಿಗೆ ಸಹಕಾರಿ ಆಗಲಿದೆ.

ಕ್ಯಾಮೆರಾ ವಿಭಾಗದಲ್ಲಿ ದೊಡ್ಡ ಹಾರ್ಡ್‌ವೇರ್ ಬದಲಾವಣೆಗಳಿಲ್ಲದಿದ್ದರೂ, ಫೋಟೋ ಗುಣಮಟ್ಟದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. Galaxy S26 ಅಲ್ಟ್ರಾ ಮಾದರಿಯಲ್ಲಿ 200MP ಮುಖ್ಯ ಕ್ಯಾಮೆರಾ ಸೇರಿದಂತೆ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಇರಬಹುದು. ಕಡಿಮೆ ಲೆನ್ಸ್ ಫ್ಲೇರ್ ಮತ್ತು ಉತ್ತಮ ಇಮೇಜ್ ಪ್ರೊಸೆಸಿಂಗ್ ಇದರ ಪ್ರಮುಖ ಹೈಲೈಟ್ ಆಗಿರಲಿದೆ. S26 ಮತ್ತು S26 ಪ್ಲಸ್ ಮಾದರಿಗಳಲ್ಲಿ ಹೊಸ 3x ಟೆಲಿಫೋಟೋ ಕ್ಯಾಮೆರಾ ಸೇರಿಸುವ ಸಾಧ್ಯತೆ ಇದೆ.

ಬೆಲೆ ವಿಷಯಕ್ಕೆ ಬಂದರೆ, Samsung Galaxy S26 ಸರಣಿಯ ದರವನ್ನು ಹಿಂದಿನ Galaxy S25 ಸರಣಿಯಷ್ಟೇ ಇಡಬಹುದು ಎಂಬ ನಿರೀಕ್ಷೆ ಇದೆ. ಭಾರತದಲ್ಲಿ Galaxy S26 ಸರಣಿಯ ಪ್ರಾರಂಭಿಕ ಬೆಲೆ ಸುಮಾರು ₹80,000ರಿಂದ ಆರಂಭವಾಗುವ ಸಾಧ್ಯತೆ ಇದೆ. ಇದರಿಂದ ಫ್ಲ್ಯಾಗ್‌ಶಿಪ್ ಸೆಗ್ಮೆಂಟ್‌ನಲ್ಲಿ Samsung ತನ್ನ ಸ್ಪರ್ಧಾತ್ಮಕ ಸ್ಥಾನವನ್ನು ಉಳಿಸಿಕೊಳ್ಳಲು ಸಹಾಯವಾಗಲಿದೆ ಎನ್ನಬಹುದು. ಆದರೆ, ಇವು ಇನ್ನೂ ಅಧಿಕೃತ ಮಾಹಿತಿ ಅಲ್ಲವಾದುದರಿಂದ ನಾವು ಕಾದುನೋಡುವುದು ಒಳಿತು.

ಒಟ್ಟಾರೆಯಾಗಿ, Samsung Galaxy S26 ಸರಣಿ ಹೊಸ ತಂತ್ರಜ್ಞಾನ, AI ಆಧಾರಿತ ಫೀಚರ್‌ಗಳೊಂದಿಗೆ ಆಕರ್ಷಕ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತಿದೆ. ಅಧಿಕೃತ ಘೋಷಣೆಯೊಂದಿಗೆ ಈ ಫೋನ್‌ಗಳು ಮಾರುಕಟ್ಟೆಯಲ್ಲಿ ಯಾವ ಮಟ್ಟದ ಸ್ಪರ್ಧೆ ನೀಡುತ್ತವೆ ಎಂಬುದನ್ನು ಕಾದು ನೋಡಬೇಕು. ಇನ್ನೂ Galaxy S26 ಸರಣಿ ಬಿಡುಗಡೆ ಆಗುವ ಮೊದಲೇ Galaxy S27 ಕುರಿತಾದ ವದಂತಿಗಳು ಶುರುವಾಗಿವೆ. ಲೀಕ್‌ಗಳ ಪ್ರಕಾರ, 2027ರಲ್ಲಿ ಬರಲಿರುವ Galaxy S27 ಅಲ್ಟ್ರಾ ಮಾದರಿಯಲ್ಲಿ ಸಂಪೂರ್ಣ ಹೊಸ ಕ್ಯಾಮೆರಾ ವ್ಯವಸ್ಥೆ ಇರಬಹುದು. ಆದರೆ ಇದು ಆರಂಭಿಕ ಹಂತದ ಮಾಹಿತಿ ಆಗಿರುವುದರಿಂದ, ಮುಂದಿನ ದಿನಗಳಲ್ಲಿ ಯೋಜನೆಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

ಆಧಾರ: indiatoday

Best Mobiles in India

English summary
Samsung is expected to launch its highly anticipated Galaxy S26 series on February 25, 2026, in San Francisco. Leaks suggest major upgrades in design, display, performance, camera, battery, and AI-powered features, with the phones likely going on sale by early March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+