ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ದೇಹವನ್ನು ಚೆಕ್‌ಮಾಡಿ
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4 ಸ್ಮಾರ್ಟ್‌ಫೋನ್ ಈಗಾಗ್ಲೇ ಬಿಡುಗಡೆಯಾಗಿದೆ.ಬಿಡುಗಡೆಯಾಗುವ ಮೊದಲೇ ಸುದ್ದಿಯಲ್ಲಿದ್ದ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾದ ಮೇಲೂ ಇದರ ವಿಶೇಷತೆಯಿಂದ ಸುದ್ದಿಯಾಗುತ್ತಿದೆ. ಗೆಲಾಕ್ಸಿ ಎಸ್ 4ನಲ್ಲಿ ನೀವು ಬಾಡಿ ಚೆಕ್ ಮಾಡಬಹುದು, ದೇಹದ ತೂಕ ನೋಡಬಹುದು,ಗೇಮ್ ಪ್ಯಾಡ್ ಮೂಲಕ ಗೇಮ್ ಸಹ ಆಡಬಹುದು.
8 ಕೋರ್ ಪ್ರೋಸೆಸರ್, 13 ಎಂಪಿ ಹಿಂದುಗಡೆ ಕ್ಯಾಮೆರಾ, 2 ಎಂಪಿ ಮುಂದುಗಡೆ ಕ್ಯಾಮೆರಾದೊಂದಿಗೆ, ಈ ಮೇಲಿನ ವಿಶೇಷತೆಗಳನ್ನು ಕಂಡು ಸ್ಯಾಮ್‌ಸಂಗ್ ಅಭಿಮಾನಿಗಳು ಫುಲ್‌ಖುಷ್ ಆಗಿದ್ದಾರೆ. ಆದರೆ ಇದು ಭಾರತದ ಮಾರುಕಟ್ಟೆಗೆ ಏಪ್ರಿಲ್ ಕೊನೆ ವಾರದಲ್ಲಿ ಬರುತ್ತದೆ. ಹಾಗಾಗಿ ಸ್ಯಾಮ್‌ಸಂಗ್ ಅಭಿಮಾನಿಗಳು ಅಲ್ಲಿಯವರಗೆ ಕಾಯಬೇಕಾಗುತ್ತದೆ. ಹಾಗಾದ್ರೆ ಗೆಲಾಕ್ಸಿ ಎಸ್ 4ನಲ್ಲಿರುವ ವಿಶೇಷತೆ ಏನು ಮತ್ತು ಸ್ಯಾಮ್‌ಸಂಗ್ ಕಂಪೆನಿ ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಬೇರೆ ಯಾವ ಸಾಧನಗಳನ್ನು ಪರಿಚಯಿಸಿದ್ದಾರೆ ಎಂಬುದಕ್ಕೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಿಮಗೆ ತಿಳಿಯುತ್ತದೆ.

ಎಸ್‌ಬ್ಯಾಂಡ್ (S Band)
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4 ಖರೀದಿಸಿದರೆ ದೇಹದ ಫಿಟ್‌ನೆಸ್‌ನ್ನು ಪರೀಕ್ಷಿಸಬಹುದು. ಸ್ಯಾಮ್‌ಸಂಗ್ ಹೆಲ್ತ್ ಅಪ್ಲಿಕೇಶನ್‌ನ್ನು ಬ್ಲೂಟೂತ್ ಮೂಲಕ ಸಿಂಕ್ ಮಾಡಿಕೊಂಡು ಎಸ್ ಬ್ಯಾಂಡ್ ಸಹಾಯದಿಂದ ಆಟ ಆಡುವಾಗ, ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎಷ್ಟು ಕ್ಯಾಲೋರಿ ಬರ್ನ್ ಆಗಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.

ಗೇಮ್ ಪ್ಯಾಡ್(Game Pad)
ಗೇಮ್ ಪ್ಯಾಡ್‌ನ್ನು ಬ್ಲೂಟೂತ್ ಮೂಲಕ ನಿಂಯಂತ್ರಿಸಿ ಸ್ಮಾರ್ಟ್‌ಫೋನಲ್ಲಿ ಗೇಮ್ಸ್ ಆಡಬಹುದು.

ಹಾರ್ಟ್ ರೇಟ್ ಮಾನೀಟರ್ (Heart Rate Monitor )
ಹಾರ್ಟ್ ರೇಟ್ ಮಾನೀಟರ್ ಹೃದಯ ಬಡಿತವನ್ನು ಲೆಕ್ಕ ಹಾಕುತ್ತದೆ. ಸ್ಯಾಮ್‌ಸಂಗ್ ಹೆಲ್ತ್ ಅಪ್ಲಿಕೇಶನ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಈ ಹಾರ್ಟ್ ರೇಟ್ ಮಾನೀಟರ್ ಸಾಧನ ಕೆಲಸ ಮಾಡಲು ಸ್ಮಾರ್ಟ್‌ಫೋನ್ ನಿಮ್ಮ ಜೊತೆಗೆ ಇರಬೇಕೆಂದೇನು ಇಲ್ಲ. ಸ್ಮಾರ್ಟ್‌ಫೋನ್‌ನ್ನು ದೂರದಲ್ಲಿಟ್ಟು ಬ್ಲೂಟೂತ್ ಮೂಲಕವು ಇದನ್ನು ನಿಯಂತ್ರಿಸಬಹುದಾಗಿದೆ.

ಬಾಡಿ ಸ್ಕೇಲ್(Body Scale)
ಗೆಲಾಕ್ಸಿ ಎಸ್4 ನಲ್ಲಿ ನಿಮ್ಮ ದೇಹದ ತೂಕವನ್ನು ಪರೀಕ್ಷಿಸಿಕೊಳ್ಳಬಹುದು.! ಆಂದ್ರೆ ಸ್ಯಾಮ್‌ಸಂಗ್‌ನವರು ದೇಹದ ತೂಕ ಪರೀಕ್ಷೆ ಮಾಡಲೆಂದೇ ಒಂದು ಹೊಸ ಉಪಕರಣವನ್ನು ಪರಿಚಯಿಸಿದ್ದಾರೆ. ಈಗ ಹೇಗೆ ನಾವು ದೇಹದ ತೂಕ ಪರೀಕ್ಷೆ ಮಾಡುವಂತಹ ಯಂತ್ರದ ಮೇಲೆ ನಿಲ್ಲುತ್ತೇವೋ ಅದೇ ರೀತಿಯಲ್ಲಿ ಇಲ್ಲಿ ಈ ಉಪಕರಣದ ಮೇಲೆ ನಿಂತು ಪರೀಕ್ಷೆ ಮಾಡಬಹುದು. ಈ ಯಂತ್ರವು ಬ್ಲೂಟೂತ್ ಮತ್ತು ಸ್ಯಾಮ್‌ಸಂಗ್ ಹೆಲ್ತ್ ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಎಸ್ ವ್ಯೂ ಕವರ್(S View Cover)

ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ (Wireless Charging Pad )

ಬ್ಯಾಟರಿ ಕಿಟ್ (Extra Battery Kit)

ಕವರ್ (Cover )



Click it and Unblock the Notifications








