ಗಿಕ್ಸ್‌ಫೋನ್ ವಿಶ್ವದ ಮೊದಲ ಡ್ಯುಯಲ್ ಓಎಸ್ ಸ್ಮಾರ್ಟ್‌ಫೋನ್
ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಾಯಿತು. ನಂತರ ಡ್ಯುಯಲ್ ಓಎಸ್ ಟ್ಯಾಬ್ಲೆಟ್ ಬಂದಾಯಿತು.ಈಗ ಡ್ಯುಯಲ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್ ಸರದಿ.ಸ್ಪೇನ್ ಮೂಲದ ಗಿಕ್ಸ್‌ಫೋನ್ ಕಂಪೆನಿ ಹೊಸ ಡ್ಯುಯಲ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್‌ನ್ನು ಅಭಿವೃದ್ಧಿ ಪಡಿಸಿದೆ.
ಆಂಡ್ರಾಯ್ಡ್ ಮತ್ತು ಮೊಜಿಲ್ಲಾ ಫೈರ್‌ಫಾಕ್ಸ್ ಓಎಸ್ ಈ ಸ್ಮಾರ್ಟ್‌ಫೋನಲ್ಲಿರಲಿದೆ ಗಿಕ್ಸ್‌ಫೋನ್ ಹೇಳಿದೆ. ಆದರೆ ಆಂಡ್ರಾಯ್ಡ್‌ನ ಜೆಲ್ಲಿ ಬೀನ್,ಕಿಟ್‌ಕ್ಯಾಟ್‌ನಲ್ಲಿ ಯಾವುದು ಎನ್ನುವುದನ್ನು ನಿಖರವಾಗಿ ಹೇಳಿಲ್ಲ.ಅಷ್ಟೇ ಅಲ್ಲದೇ ಈ ಸ್ಮಾರ್ಟ್‌ಫೋನ್ 4.7 ಇಂಚಿನ ಐಪಿಎಸ್ ಎಲ್‌ಸಿಡಿ ಮಲ್ಟಿ ಟಚ್‌ಸ್ಕ್ರೀನ್,1.6GHz ಡ್ಯುಯಲ್ ಕೋರ್ ಇಂಟೆಲ್ Atom ಪ್ರೊಸೆಸರ್,4GB ಆಂತರಿಕ ಮೆಮೊರಿಯನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ. ಈ ಸ್ಮಾರ್ಟ್‌ಫೋನಿನ ಬಿಡುಗಡೆಯ ದಿನಾಂಕ ಮತ್ತು ಬೆಲೆಯನ್ನು ಪ್ರಕಟಿಸಿಲ್ಲ.
ಗಿಕ್ಸ್‌ಫೋನ್(Geeksphone)
ವಿಶೇಷತೆ:
4.7 ಇಂಚಿನ ಐಪಿಎಸ್ ಎಲ್‌ಸಿಡಿ ಮಲ್ಟಿ ಟಚ್‌ಸ್ಕ್ರೀನ್
1.6GHz ಡ್ಯುಯಲ್ ಕೋರ್ ಇಂಟೆಲ್ Atom ಪ್ರೊಸೆಸರ್
4GB ಆಂತರಿಕ ಮೆಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
ಜಿ ಸೆನ್ಸರ್,ಕಂಪಾಸ್, ಲೈಟ್ ಪ್ರಾಕ್ಸಿಮಿಟಿ ಸೆನ್ಸರ್
2000 mAh ಬ್ಯಾಟರಿ
ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

2
ಗಿಕ್ಸ್‌ಫೋನ್

1
ಗಿಕ್ಸ್‌ಫೋನ್

3
ಗಿಕ್ಸ್‌ಫೋನ್

4
ಗಿಕ್ಸ್‌ಫೋನ್


Click it and Unblock the Notifications