ಪೇಟಿಎಂ ಮಾಲ್‌ನಲ್ಲಿ ಪ್ಯೂರ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮೇಲೆ ಇತಿಹಾಸದ ಆಫರ್..!
ಆಂಡ್ರಾಯ್ಡ್ ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಪೇಟಿಎಂ ಮಾಲ್, ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮೇಲೆ ರೂ.2000 ಕ್ಯಾಷ್ ಬ್ಯಾಕ್ ಘೋಷಣೆ ಮಾಡಿದ್ದು, ಪ್ರತಿ ಸ್ಮಾರ್ಟ್‌ಫೋನ್ ಖರೀದಿಯ ಮೇಲೆಯೂ ಖಚಿತ ಕ್ಯಾಷ್ ಬ್ಯಾಕ್ ಅನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ನೋಕಿಯಾ ಫೋನ್ ಕೊಳ್ಳಲು ಪ್ಲಾನ್ ಮಾಡುತ್ತಿರುವವರಿಗೆ ಇದು ಬೆಸ್ಟ್ ಸಮಯ ಎನ್ನಬಹುದು.

ಸದ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ನೋಕಿಯಾ ಸಿರಾಕೋ, ನೋಕಿಯಾ 6.1, ನೋಕಿಯಾ 5.1, ನೋಕಿಯಾ 3.1, ನೋಕಿಯಾ 2.1 ಮತ್ತು ನೋಕಿಯಾ 1 ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿತವನ್ನು ಕಾಣಬಹುದಾಗಿದೆ. ಬೇರೆ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಬದಲಿಗೆ ನೋಕಿಯಾ ಕಡೆಗೆ ಮುಖ ಮಾಡಬಹುದಾಗಿದೆ.

ನೋಕಿಯಾ 6.1 ಸ್ಮಾರ್ಟ್‌ಫೋನ್:
ನೋಕಿಯಾ 6.1 (4GB) ಸ್ಮಾರ್ಟ್‌ಫೋನ್ ಮೇಲೆ ಪೇಟಿಎಂ ಮಾಲ್ ರೂ.2009ರಷ್ಟು ಕ್ಯಾಷ್ ಬ್ಯಾಕ್ ನೀಡುತ್ತಿದ್ದು, ಇದರೊಂದಿಗೆ 19% ಆಡಿಷನಲ್ ಡಿಸ್ಕೌಂಟ್ ಸೇರಿ ರೂ.14,730ಕ್ಕೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಓರಿಜಿನಲ್ ಬೆಲೆ ರೂ.19.999 ಆಗಿದೆ.
ಇದೇ ಮಾದರಿಯಲ್ಲಿ 3GB RAM ಆವೃತ್ತಿಯೂ ರೂ.13,244ಕ್ಕೆ ಮಾರಾಟವಾಗುತ್ತಿದ್ದು, ಇದರ ಮೇಲೆ ರೂ.1806 ಕಾಷ್ ಬ್ಯಾಕ್ ಅನ್ನು ಪಡೆಯಬಹುದಾಗಿದೆ.

ನೋಕಿಯಾ 5.1 ಸ್ಮಾರ್ಟ್‌ಫೋನ್:
ನೋಕಿಯಾ 5.1 ಸ್ಮಾರ್ಟ್‌ಫೋನ್ ಪೇಟಿಎಂ ಮಾಲ್‌ನಲ್ಲಿ ರೂ.12,759ಕ್ಕೆ ಮಾರಾಟವಾಗುತ್ತಿದ್ದು, ಇದರ ಮೇಲೆ ರೂ.1740 ಕಾಷ್ ಬ್ಯಾಕ್ ಅನ್ನು ಪಡೆಯಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಓರಿಜಿನಲ್ ಬೆಲೆ ರೂ.15999 ಆಗಿದೆ.

ನೋಕಿಯಾ 3.1 ಸ್ಮಾರ್ಟ್‌ಫೋನ್:
ನೋಕಿಯಾ 3.1 ಸ್ಮಾರ್ಟ್‌ಫೋನ್ 32 GB ಆವೃತ್ತಿ ರೂ. 11,999ಕ್ಕೆ ಮಾರಾಟವಾಗುತ್ತಿದ್ದು, ರೂ.1440 ಕ್ಯಾಷ್ ಬ್ಯಾಕ್ ಪಡೆದುಕೊಂಡ ನಂತರದಲ್ಲಿ ರೂ.10,559ಕ್ಕೆ ದೊರೆಯಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಓರ್ಜಿನಲ್ ಬೆಲೆ ರೂ.13900 ಆಗಿದೆ.
ಇದೇ ಮಾದರಿಯಲ್ಲಿ 16 GB ಆವೃತ್ತಿಯೂ ಪೇಟಿಎಂ ಮಾಲ್‌ನಲ್ಲಿ ರೂ.9239ಕ್ಕೆ ಮಾರಾಟವಾಗುತ್ತಿದ್ದು, ರೂ.1260 ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ.

ನೋಕಿಯಾ 2.1 ಸ್ಮಾರ್ಟ್‌ಫೋನ್:
ನೋಕಿಯಾ 2.1 ಸ್ಮಾರ್ಟ್‌ಫೋನ್ ರೂ.6159ಕ್ಕೆ ಮಾರಾಟವಾಗುತಿದ್ದು, ಈ ಸ್ಮಾರ್ಟ್‌ಫೋನ್ ಮೇಲೆಯೂ ಖರೀದಿದಾರರಿಗೆ ರೂ,840 ಕ್ಯಾಷ್ ಬ್ಯಾಕ್ ಅನ್ನು ಪೇಟಿಎಂ ಮಾಲ್‌ನಲ್ಲಿ ಕಾಣಬಹುದಾಗಿದೆ.

ನೋಕಿಯಾ 1 ಸ್ಮಾರ್ಟ್‌ಫೋನ್
ಆಂಡ್ರಾಯ್ಡ್ ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವ ನೋಕಿಯಾ 1 ಸ್ಮಾರ್ಟ್‌ಫೋನ್ ರೂ.4.022ಕ್ಕೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಓರಿಜಿನಲ್ ಬೆಲೆ ರೂ.5800 ಆಗಿದೆ.


Click it and Unblock the Notifications








