ಅಮೆಜಾನ್ VS ಫ್ಲಿಪ್‌ಕಾರ್ಟ್ ಹಬ್ಬದ ಸೀಸನ್: ಬೆಸ್ಟ್ ಐಫೋನ್ ಡೀಲ್‌ಗಳ ಹೋಲಿಕೆ!
ಭಾರತದಲ್ಲಿ ಹಬ್ಬದ ಮಾರಾಟದ ಹವಾ ಜೋರಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ, ಗ್ರಾಹಕರು ಹಲವು ಉತ್ಪನ್ನಗಳ ಮೇಲೆ ಬೃಹತ್ ರಿಯಾಯಿತಿಗಳನ್ನು ಪಡೆಯುತ್ತಿದ್ದಾರೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ, ಐಫೋನ್‌ಗಳ ಮೇಲೆ ಲಭ್ಯವಿರುವ ಡೀಲ್‌ಗಳು ನಿಜಕ್ಕೂ ಆಕರ್ಷಕವಾಗಿವೆ. ನೀವು ಯಾವ ಐಫೋನ್ ಖರೀದಿಸಬೇಕು ಮತ್ತು ಯಾವ ಸೈಟ್‌ನಲ್ಲಿ ಉತ್ತಮ ಡೀಲ್ ಲಭ್ಯವಿದೆ ಎಂಬುದನ್ನು ಇಂದಿನ ಲೇಖನದಲ್ಲಿ ನೊಡೋಣ ಬನ್ನಿ.
1. iPhone 14
ಮೂಲ ಬೆಲೆ: ₹79,900
ಫ್ಲಿಪ್‌ಕಾರ್ಟ್‌ನಲ್ಲಿ ಡೀಲ್: ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ, ಐಫೋನ್ 14 (128GB) ಕೇವಲ ₹39,999 ರ ಪರಿಣಾಮಕಾರಿ ಬೆಲೆಯಲ್ಲಿ ಲಭ್ಯವಿದೆ. ಈ ಬೆಲೆಯು ನೇರ ರಿಯಾಯಿತಿ ಮತ್ತು ಅರ್ಹ ಬ್ಯಾಂಕ್ ಕಾರ್ಡ್‌ಗಳ ಮೇಲೆ ₹2,000 ಬ್ಯಾಂಕ್ ರಿಯಾಯಿತಿಯನ್ನು ಒಳಗೊಂಡಿದೆ. ಇದು ಐಫೋನ್ ಪ್ರಿಯರಿಗೆ ಉತ್ತಮ ಅವಕಾಶವಾಗಿದೆ.
ಅಮೆಜಾನ್‌ನಲ್ಲಿ ಬೆಲೆ: ಅಮೆಜಾನ್ ಕೂಡ ಐಫೋನ್ 14 ಅನ್ನು ಪಟ್ಟಿ ಮಾಡಿದೆ, ಆದರೆ, ಬೆಲೆ ಅಮೆಜಾನ್‌ನಲ್ಲಿ ₹45,000 ಕ್ಕಿಂತ ಹೆಚ್ಚಿನರುವುದನ್ನು ನಾವು ಗಮನಿಸಬಹುದು.
ತೀರ್ಮಾನ: ಐಫೋನ್ 14 ಖರೀದಿಸಲು ಫ್ಲಿಪ್‌ಕಾರ್ಟ್ ಅತ್ಯುತ್ತಮ ಆಯ್ಕೆಯಾಗಿದೆ.
2. iPhone 15
ಮೂಲ ಬೆಲೆ: ₹79,900
ಅಮೆಜಾನ್‌ನಲ್ಲಿ ಡೀಲ್: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ, ಐಫೋನ್ 15 (128GB) ನ ಪರಿಣಾಮಕಾರಿ ಬೆಲೆ ₹45,249 ರಿಂದ ಪ್ರಾರಂಭವಾಗುತ್ತದೆ. ಇದರೊಂದಿಗೆ, ಎಸ್‌ಬಿಐ ಕ್ರೆಡಿಟ್/ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ 10% ಇನ್‌ಸ್ಟೆಂಟ್ ರಿಯಾಯಿತಿ ಲಭ್ಯವಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಬೆಲೆ: ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 ರ ಆರಂಭಿಕ ಬೆಲೆ ₹59,999 ಆಗಿದ್ದು, ಬ್ಯಾಂಕ್ ಆಫರ್‌ಗಳೊಂದಿಗೆ ₹56,999 ರ ಕಡಿಮೆ ಬೆಲೆಗೆ ಇಳಿಯುತ್ತದೆ. ಇದು ಅಮೆಜಾನ್ ನೀಡುವ ಬೆಲೆಗಿಂತ ಹೆಚ್ಚಾಗಿದೆ.
ತೀರ್ಮಾನ: ಐಫೋನ್ 15ಗಾಗಿ ಅಮೆಜಾನ್ ಉತ್ತಮ ಡೀಲ್ ನೀಡುತ್ತಿದೆ.

3. iPhone 16
ಮೂಲ ಬೆಲೆ: ₹69,900
ಫ್ಲಿಪ್‌ಕಾರ್ಟ್‌ನಲ್ಲಿ ಡೀಲ್: ಫ್ಲಿಪ್‌ಕಾರ್ಟ್‌ನಲ್ಲಿ, ಐಫೋನ್ 16 ರ ಮಾರಾಟದ ಬೆಲೆ ₹51,999 ಎಂದು ಘೋಷಿಸಲಾಗಿದೆ. ಈ ಬೆಲೆಯು ನೇರ ರಿಯಾಯಿತಿಯನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ದಾರರಿಗೆ 10% ಇನ್‌ಸ್ಟೆಂಟ್ ರಿಯಾಯಿತಿ ಸಿಗುತ್ತದೆ.
ಅಮೆಜಾನ್‌ನಲ್ಲಿ ಬೆಲೆ: ಅಮೆಜಾನ್‌ನಲ್ಲಿ ಐಫೋನ್ 16 ಸಾಮಾನ್ಯವಾಗಿ ಅದರ ಅಧಿಕೃತ ಬೆಲೆ ₹69,900 ಗೆ ಲಭ್ಯವಿದೆ.
ತೀರ್ಮಾನ: ಐಫೋನ್ 16 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸುವುದು ಹೆಚ್ಚು ಲಾಭದಾಯಕ.
4. iPhone 16 Pro
ಮೂಲ ಬೆಲೆ: ₹1,19,900
ಫ್ಲಿಪ್‌ಕಾರ್ಟ್‌ನಲ್ಲಿ ಡೀಲ್: ಐಫೋನ್ 16 ಪ್ರೊನ ಮೇಲೆ ಫ್ಲಿಪ್‌ಕಾರ್ಟ್ ಭಾರಿ ಡಿಸ್ಕೌಂಟ್ ನೀಡುತ್ತಿದ್ದು, ಇದನ್ನು ₹69,900 ರ ಪರಿಣಾಮಕಾರಿ ಬೆಲೆಗೆ ಕೊಳ್ಳಬಹುದು. ಇದು ನೇರ ರಿಯಾಯಿತಿ ಮತ್ತು ಬ್ಯಾಂಕ್ ಆಫರ್‌ಗಳನ್ನು ಒಳಗೊಂಡಿದೆ.
ಅಮೆಜಾನ್‌ನಲ್ಲಿ ಬೆಲೆ: ಅಮೆಜಾನ್‌ನಲ್ಲಿ ಈ ಮಾಡೆಲ್‌ನ ಮೇಲೆ ಇಂತಹ ದೊಡ್ಡ ಡೀಲ್‌ಗಳು ಲಭ್ಯವಿಲ್ಲ.
ತೀರ್ಮಾನ: ಐಫೋನ್ 16 ಪ್ರೊಗಾಗಿ ಫ್ಲಿಪ್‌ಕಾರ್ಟ್ ಸ್ಪಷ್ಟವಾಗಿ ಉತ್ತಮ ಆಯ್ಕೆಯಾಗಿದೆ.
5. iPhone 16 Pro Max
ಮೂಲ ಬೆಲೆ: ₹1,44,900
ಫ್ಲಿಪ್‌ಕಾರ್ಟ್‌ನಲ್ಲಿ ಡೀಲ್: ಐಫೋನ್ 16 ಪ್ರೊ ಮ್ಯಾಕ್ಸ್ (256GB) ಅನ್ನು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ₹89,999 ರ ಪರಿಣಾಮಕಾರಿ ಬೆಲೆಗೆ ಖರೀದಿಸಬಹುದು. ಈ ಬೆಲೆಯಲ್ಲಿ ನೇರ ಬೆಲೆ ಕಡಿತ ಮತ್ತು ₹5,000 ಬ್ಯಾಂಕ್ ರಿಯಾಯಿತಿ ಸೇರಿವೆ.
ಅಮೆಜಾನ್‌ನಲ್ಲಿ ಬೆಲೆ: ಅಮೆಜಾನ್‌ನಲ್ಲಿ ಈ ಫೋನ್‌ಗೆ ಇಂತಹ ಆಕರ್ಷಕ ರಿಯಾಯಿತಿಗಳು ಇರುವುದಿಲ್ಲ.
ತೀರ್ಮಾನ: ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಲು ಫ್ಲಿಪ್‌ಕಾರ್ಟ್ ಉತ್ತಮ ವೇದಿಕೆಯಾಗಿದೆ.
ಒಟ್ಟಾರೆಯಾಗಿ, ಬಜೆಟ್ ಫೋನ್‌ಗಳಾದ ಐಫೋನ್ 14 ಮತ್ತು ಹೊಸ ಮಾದರಿಗಳಾದ ಐಫೋನ್ 16 ಸರಣಿಗಾಗಿ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಅತ್ಯುತ್ತಮ ಡೀಲ್‌ಗಳನ್ನು ನೀಡುತ್ತದೆ. ಆದರೆ, ನೀವು ಐಫೋನ್ 15 ಅನ್ನು ಖರೀದಿಸಲು ಬಯಸಿದರೆ, ಬ್ಯಾಂಕ್ ಆಫರ್‌ಗಳ ನಂತರ ಅಮೆಜಾನ್‌ನಲ್ಲಿ ಉತ್ತಮ ಬೆಲೆ ಲಭ್ಯವಿದೆ. ಗಮನಿಸಿ: ನಾವು ಈ ಲೇಖನವನ್ನು ಬರೆಯುವಾದ ಪಟ್ಟಿ ಮಾಡುವ ಬೆಲೆಗಳನ್ನು ನಮೂದಿಸಲಾಗಿದೆ. ನಂತರ ಬೆಲೆಗಳು ಬದಲಾಗಬಹುದು. ಹಾಗಾಗಿ, ಖರೀದಿಸುವ ಮೊದಲು ಕೊನೆಯ ಬೆಲೆ ಮತ್ತು ಲಭ್ಯವಿರುವ ಆಫರ್‌ಗಳನ್ನು ಸರಿಯಾಗಿ ಪರಿಶೀಲಿಸುವುದನ್ನು ಮರೆಯಬೇಡಿ.


Click it and Unblock the Notifications








