ಜಿಯೋನಿ CTRL V5 ನಲ್ಲೂ ಇನ್ನು ಕಿಟ್‌ಕ್ಯಾಟ್

Written By:

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿರುವ ಮತ್ತು ಪಡೆಯುತ್ತಿರುವ ಓಎಸ್ ಆಗಿದ್ದು ಈಗ ಬರುತ್ತಿರುವ ಹೆಚ್ಚಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಈ ಆಪರೇಟಿಂಗ್ ಸಿಸ್ಟಮ್ ಅನ್ನು ಪಡೆದುಕೊಂಡು ಪೋನ್ ಮಾರುಕಟ್ಟೆಯಲ್ಲಿ ಭರ್ಜರಿ ಪೈಪೋಟಿಯನ್ನೇ ನೀಡುತ್ತಿವೆ.

ವರದಿಗಳ ಪ್ರಕಾರ, ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4.2 ಇಲೈಫ್ S5.5 ಫೋನ್‌ನಲ್ಲೂ ಲಭ್ಯವಾಗುತ್ತಿದ್ದು ಕಂಪೆನಿಯು ತನ್ನ ಜಿಯೋನಿ CTRL V5 ಗೂ ಈ ಹೊಸ ಆವೃತ್ತಿಯನ್ನು ನವೀಕರಿಸುತ್ತಿದೆ ಎಂದು ಹೇಳಿದೆ.

CTRL V5 ಚೈನಾ ಕಂಪೆನಿ ಲಾಂಚ್ ಮಾಡಿರುವ ಸ್ನಾರ್ಟ್‌ಫೋನ್ ಮಾತ್ರ ಆಗಿರದೇ ಆಂಡ್ರಾಯ್ಡ್‌ನ ಹೊಸ ಕಿಟ್‌ಕ್ಯಾಟ್ ಆವೃತ್ತಿ 4.4.2 ಅನ್ನು ಸ್ವೀಕರಿಸುತ್ತಿದೆ. ಇನ್ನು ಮುಂಬರುವ ದಿನಗಳಲ್ಲಿ ಪಯೋನಿಯರ್ ಪಿ4 ಕೂಡ ಈ ನವೀಕರಣವನ್ನು ಪಡೆದುಕೊಳ್ಳಲಿದೆ ಎಂದು ಕಂಪೆನಿ ತಿಳಿಸಿದೆ.

ಜಿಯೋನಿಯಲ್ಲೂ ಇನ್ನು ಕಿಟ್‌ಕ್ಯಾಟ್ ಮೋಡಿ

ಜಿಯೋನಿ CTRL V5, ನಿಮಗೆ ಗೊತ್ತಿರುವಂತೆ, 4.7 ಇಂಚಿನ ಟಚ್ ಸ್ಕ್ರೀನ್ ಅನ್ನು ಹೊಂದಿದ್ದು ಇದರ ಡಿಸ್‌ಪ್ಲೇ qHD ರೆಸಲ್ಯೂಶನ್ 960×540 ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 1.3 GHz ಕ್ವಾಡ್ ಕೋರ್ MediaTek MT6582 ಪ್ರೊಸೆಸರ್‌ನೊಂದಿಗೆ ಬಂದಿದ್ದು ಇದರ RAM ಸಾಮರ್ಥ್ಯ 1 ಜಿಬಿಯಾಗಿದೆ.

ಡಿವೈಸ್ 8 ಮೆಗಾಪಿಕ್ಸೆಲ್ ಆಟೋ ಫೋಕಸ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಇದರಲ್ಲಿ LED ಫ್ಲ್ಯಾಶ್ ಇದೆ ಮತ್ತು ಮುಂಭಾಗ ಕ್ಯಾಮೆರಾ ಸಾಮರ್ಥ್ಯ 2 ಮೆಗಾಪಿಕ್ಸೆಲ್ ಆಗಿದೆ. ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ 32ಜಿಬಿಗೆ ವಿಸ್ತರಿಸಬಹುದಾಗಿದೆ.

ಜಿಯೋನಿ CTRL V5 ನೆಯ ದಪ್ಪ 8.07 mm ಆಗಿದ್ದು ತೂಕ 103.5 ಆಗಿದೆ. ಇದರ ಬ್ಯಾಟರಿ ಸಾಮರ್ಥ್ಯ 1800 mAh ಆಗಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot