ಜಿಯೋನಿ ಇಲೈಫ್ E7 ಮಿನಿ ಗೆ ಕಿಟ್‌ಕ್ಯಾಟ್ ಸುಗಂಧ

By Shwetha
|

ಕಳೆದ ಜೂನ್‌ನಲ್ಲಷ್ಟೇ, ಭಾರತದಲ್ಲಿ ಜಿಯೋನಿಯ ಆಯ್ಕೆಯ ಸ್ಮಾರ್ಟ್‌ಫೋನ್‌ಗಳು ಕೂಡ ಕಿಟ್‌ಕ್ಯಾಟ್ ನವೀಕರಣವನ್ನು ಹೊಂದುವುದಾಗಿ ಆನ್‌ಲೈನ್ ವರದಿಗಳು ತಿಳಿಸಿದ್ದವು. ಜಿಯೋನಿಯ ಈ ಪಟ್ಟಿಯಲ್ಲಿ ಜಿಯೋನಿ Ctrl V5, ಇಲೈಫ್ S5.5, ಇಲೈಫ್ E7 ಮಿನಿ, ಜಿಯೋನಿ P3, P4 ಮತ್ತು ಜಿಯೋನಿ M2 ಕೂಡ ಸೇರಿದೆ.

ಇಲೈಫ್ S5.5 ಈ ತಿಂಗಳ ಮುಂಚಿತವಾಗಿ ಕಿಟ್‌ಕ್ಯಾಟ್ ನವೀಕರಣವನ್ನು ಹೊಂದಲಿದ್ದು ಇದೀಗ ಜಿಯೋನಿ ಆಂಡ್ರಾಯ್ಡ್ 4.4.2 ಅನ್ನು ಜಿಯೋನಿ ಇಲೈಫ್ E7 ಗೆ ಬಿಡುಗಡೆ ಮಾಡುವುದನ್ನು ಅಧಿಕೃತವಾಗಿ ಘೋಷಿಸಿದೆ.

ಜಿಯೋನಿ ಇಲೈಫ್ E7 ಮಿನಿಯಲ್ಲಿ ಇನ್ನು ಕಿಟ್‌ಕ್ಯಾಟ್

ಕಿಟ್‌ಕ್ಯಾಟ್ ನವೀಕರಣದೊಂದಿಗೆ, ಇಲೈಫ್ E7 ಮಿನಿ ಬಳಕೆದಾರರು ಫೋನ್‌ನಲ್ಲಿ ಹೊಸ ಡೆಸ್ಕ್‌ಟಾಪ್ ಮಾದರಿಯನ್ನು ಕಾಣಲಿದ್ದಾರೆ. ವೇಗವಾದ ಕಾರ್ಯಾಚರಣೆಗಳಿಗಾಗಿ ಡಿಯು ಸ್ಪೀಡ್ ಬೂಸ್ಟರ್ ಅನ್ನು ಕೂಡ ಈ ಫೋನ್ ಹೊಂದಿದೆ. ಹೊಸ ಯುಐ ಇಂಟರ್ಫೇಸ್ ವಿನ್ಯಾಸ ಮತ್ತು ನವೀಕೃತ ಜಿಯೋನಿಎಕ್ಸೆಂಡರ್ ಜತೆಗೆ ಗೇಮ್ ಝೋನ್‌ನಲ್ಲಿ ಕೂಡ ಬಳಕೆದಾರರು ಬದಲಾವಣೆಗಳನ್ನು ಕಂಡುಕೊಳ್ಳಬಹುದು.

ಪೂರ್ವ ಲೋಡ್ ಆಗಿರುವ ಯುಸಿ ಬ್ರೌಸರ್ ಅಪ್ಲಿಕೇಶನ್ ಅನ್ನು ಅಪ್ಟಿಮೈಸ್ ಮಾಡಲಾದ ಯುಐ ಇಂಟರ್ಫೇಸ್‌ನೊಂದಿಗೆ ನವೀಕರಿಸಲಾಗಿದ್ದು ನಿಮ್ಮ ಫೋನ್‌ನ ಹೆಚ್ಚುವರಿ ಭದ್ರತೆಗಾಗಿ ಎನ್‌ಕ್ಯು ಮೊಬೈಲ್ ಭದ್ರತೆಯನ್ನು ನವೀಕರಿಸಲಾಗಿದೆ. ಮುಖ್ಯ ಮೆನುವಿಗೆ ಕೇವಲ ಒಂದೇ ಒಂದು ಪ್ರವೇಶವನ್ನು ಹೊಂದಿರುವ ಅಪ್‌ಡೇಟ್ ಮಾಡಲಾದ ನಕ್ಷೆಯನ್ನು ನೀವು ಪಡೆದುಕೊಳ್ಳಲಿದ್ದು ಕಿಟ್‌ಕ್ಯಾಟ್‌ನ ಎಂದಿನ ವೈಶಿಷ್ಟ್ಯಗಳಾದ ಕ್ಲೌಡ್ - ಮುದ್ರಣ ಮತ್ತು ಇತರ ಫೀಚರ್‌ಗಳನ್ನು ನವೀಕರಿಸಲಾಗಿದೆ.

ನಿಮ್ಮ ಫೋನ್‌ಗೆ ಈ ನವೀಕರಣಗಳು ಈ ಕೂಡಲೇ ಬರದೇ ಇದ್ದಲ್ಲಿ, phone's Settings > About phone > Software update ಗೆ ಇಲ್ಲಿ ಪರಿಶೀಲಿಸಬಹುದಾಗಿದೆ.

Best Mobiles in India

English summary
This article tells about that Gionee Elife E7 mini starts receiving Android kitkat update in India. This version brings so many updates to the phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X