Home
ಮೊಬೈಲ್

ಜಿಯೋನೀ 16 ಎಂಪಿ ಕ್ಯಾಮೆರಾ ಫ್ಯಾಬ್ಲೆಟ್‌ ಆನ್‌ಲೈನಲ್ಲಿ ಲಭ್ಯ

By Ashwath

ವಿಶ್ವದ ಪ್ರಥಮ 16 ಎಂಪಿ ಹಿಂದುಗಡೆ ಕ್ಯಾಮೆರಾ,8 ಎಂಪಿ ಮುಂದುಗಡೆ ಕ್ಯಾಮೆರಾ,3GB RAM ಹೊಂದಿರುವ ಜಿಯೋನೀ ಇಲೈಫ್‌ ಇ7 ಸಿಂಗಲ್‌ ಸಿಮ್‌ ಫ್ಯಾಬ್ಲೆಟ್‌ ಈಗ ದೇಶದ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಲಭ್ಯವಿದೆ.

ಹಿಂದುಗಡೆ 16 ಎಂಪಿ ಕ್ಯಾಮೆರಾವಿರುವ ಎಸ್‌4 ಝೂಮ್‌ ಸ್ಮಾರ್ಟ್‌‌ಫೋನನ್ನು ಸ್ಯಾಮ್‌ಸಂಗ್‌ ಈ ಮೊದಲು ಪರಿಚಯಿಸಿತ್ತು, ಆದರೆ ಈ ಸ್ಮಾರ್ಟ್‌‌ಫೋನ್‌ ಮುಂದುಗಡೆ 1.9 ಎಂಪಿ ಕ್ಯಾಮೆರಾವನ್ನು ಮಾತ್ರ ಹೊಂದಿತ್ತು.ಇನ್ನು ಮುಂದುಗಡೆ 8 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌ ಚೀನಾದ ಝೆನ್‌ ಮೊಬೈಲ್‌ ಕಂಪೆನಿ ಈ ಹಿಂದೆ ಬಿಡುಗಡೆ ಮಾಡಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ ಹಿಂದುಗಡೆ 13 ಎಂಪಿ ಕ್ಯಾಮೆರಾವನ್ನು ಮಾತ್ರ ಹೊಂದಿತ್ತು.

ಈ ಫ್ಯಾಬ್ಲೆಟ್‌ ಎರಡು ಆಂತರಿಕ ಮೆಮೊರಿ ಮತ್ತು ಏಳು ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 2GB RAM ಹೊಂದಿರುವ 16 GB ಆಂತರಿಕ ಮೆಮೊರಿ ಫ್ಯಾಬ್ಲೆಟ್‌ಗೆ 26,999 ಬೆಲೆ ನಿಗದಿಯಾಗಿದ್ದರೆ,3GB RAM ಹೊಂದಿರುವ 32GB ಆಂತರಿಕ ಮೆಮೊರಿಯ ಫ್ಯಾಬ್ಲೆಟ್‌‌ 29,999 ಬೆಲೆಯನ್ನು ಫ್ಲಿಪ್‌ಕಾರ್ಟ್‌‌ ನಿಗದಿ ಪಡಿಸಿದೆ. ಗೊರಿಲ್ಲ ಕಾರ್ನಿಂಗ್‌ ಗ್ಲಾಸ್‌ ಹೊಂದಿರುವ 5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ ಫ್ಯಾಬ್ಲೆಟ್‌ 150.6 x 75.0 x 9.5 ಮಿ.ಮೀಟರ್‌ ಗಾತ್ರ,150 ಗ್ರಾಂ ತೂಕವನ್ನು ಹೊಂದಿದೆ.

ಜಿಯೋನಿ ಇಲೈಫ್‌ ಇ7 ಫ್ಯಾಬ್ಲೆಟ್‌‌ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ಜಿಯೋನೀ 16 ಎಂಪಿ ಕ್ಯಾಮೆರಾ  ಫ್ಯಾಬ್ಲೆಟ್‌ ಆನ್‌ಲೈನಲ್ಲಿ ಲಭ್ಯ

ಜಿಯೋನಿ ಇಲೈಫ್‌ ಇ7
ಸಿಂಗಲ್‌ ಸಿಮ್‌
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2.2GHz Qualcomm Snapdragon ಕ್ವಾಡ್‌ ಕೋರ್‌ ಪ್ರೊಸೆಸರ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೊರಿ,2GB RAM
32GB ಆಂತರಿಕ ಮೆಮೊರಿ,3GB RAM
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌ ಸ್ಲಾಟ್‌ ಇಲ್ಲ
3ಜಿ, 4ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2500mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+