Subscribe to Gizbot

ಆನ್‌‌ಲೈನ್‌ಲ್ಲಿ‌ ಜಿಯೋನೀ 16 ಎಂಪಿ ಕ್ಯಾಮೆರಾ ಫ್ಯಾಬ್ಲೆಟ್‌ ಖರೀದಿಸಿ

Written By:

ವಿಶ್ವದ ಪ್ರಥಮ 16 ಎಂಪಿ ಹಿಂದುಗಡೆ ಕ್ಯಾಮೆರಾ,8 ಎಂಪಿ ಮುಂದುಗಡೆ ಕ್ಯಾಮೆರಾ,3GB RAM ಹೊಂದಿರುವ ಜಿಯೋನೀ ಇಲೈಫ್‌ ಇ7 ಸಿಂಗಲ್‌ ಸಿಮ್‌ ಫ್ಯಾಬ್ಲೆಟ್‌ ಈಗ ದೇಶದ ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಿ ಲಭ್ಯವಿದೆ.

ಫ್ಯಾಬ್ಲೆಟ್‌ ಜನವರಿಯಲ್ಲಿ ಬಿಡುಗಡೆಯಾಗಿದ್ದರೂ ಕೆಲವೊಂದು ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಮಾತ್ರ ಲಭ್ಯವಾಗಿತ್ತು. ಈಗ ಬಹುತೇಕ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಲಭ್ಯವಿದೆ.

ಈ ಫ್ಯಾಬ್ಲೆಟ್‌ ಎರಡು ಆಂತರಿಕ ಮೆಮೊರಿ ಮತ್ತು ಏಳು ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 2GB RAM ಹೊಂದಿರುವ 16 GB ಆಂತರಿಕ ಮೆಮೊರಿ ಫ್ಯಾಬ್ಲೆಟ್‌ಗೆ 26,999 ಬೆಲೆ ನಿಗದಿಯಾಗಿದ್ದರೆ,3GB RAM ಹೊಂದಿರುವ 32GB ಆಂತರಿಕ ಮೆಮೊರಿಯ ಫ್ಯಾಬ್ಲೆಟ್‌‌ 29,999 ಬೆಲೆಯನ್ನು ಜಿಯೋನೀ ನಿಗದಿ ಪಡಿಸಿದೆ. ಗೊರಿಲ್ಲ ಕಾರ್ನಿಂಗ್‌ ಗ್ಲಾಸ್‌ ಹೊಂದಿರುವ 5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ ಫ್ಯಾಬ್ಲೆಟ್‌ 150.6 x 75.0 x 9.5 ಮಿ.ಮೀಟರ್‌ ಗಾತ್ರ,150 ಗ್ರಾಂ ತೂಕವನ್ನು ಹೊಂದಿದೆ.

ಜಿಯೋನಿ ಇಲೈಫ್‌ ಇ7

ಸಿಂಗಲ್‌ ಸಿಮ್‌
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2.2GHz Qualcomm Snapdragon ಕ್ವಾಡ್‌ ಕೋರ್‌ ಪ್ರೊಸೆಸರ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೊರಿ,2GB RAM
32GB ಆಂತರಿಕ ಮೆಮೊರಿ,3GB RAM
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌ ಸ್ಲಾಟ್‌ ಇಲ್ಲ
3ಜಿ, 4ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2500mAh ಬ್ಯಾಟರಿ

ಆನ್‌ಲೈನ್‌ನಲ್ಲಿ 16 GB ಆಂತರಿಕ ಮೆಮೊರಿಯ ಫ್ಯಾಬ್ಲೆಟ್‌ ಖರೀದಿಸಲು ಯೋಚಿಸುತ್ತಿದ್ದವರಿಗೆ ಇಲ್ಲಿ ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ನೀಡಲಾಗಿದೆ. ಯಾವ ತಾಣದಲ್ಲಿ ಎಷ್ಟು ರೂಪಾಯಿ ಬೆಲೆಯನ್ನು ಈ ಫ್ಯಾಬ್ಲೆಟ್‌ಗೆ ನಿಗದಿಪಡಿಸಿದೆ ಎಂಬುದನ್ನು ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot