ವಿಶ್ವದ ಸ್ಲಿಮ್ ಸ್ಮಾರ್ಟ್‌ಫೋನ್ ದೇಶೀಯ ಮಾರುಕಟ್ಟೆಗೆ ಬಿಡುಗಡೆ
ಚೀನಾದ ಜಿಯೋನಿ ಕಂಪೆನಿಯ ವಿಶ್ವದ ಸ್ಲಿಮ್ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇಲೈಫ್ ಎಸ್ 5.5 ಹೆಸರಿನ ಸ್ಮಾರ್ಟ್‌ಫೋನ್ 5.6ಮಿ.ಮೀ ದಪ್ಪವಿದ್ದು ಅಕ್ಟಾ ಕೋರ್ ಪ್ರೊಸೆಸರ್‌ನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ಗೆ 22,999 ರೂಪಾಯಿ ಬೆಲೆಯನ್ನು ಜಿಯೋನೀ ನಿಗದಿಪಡಿಸಿದೆ.
5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್,16 ಜಿಬಿ ಆಂತರಿಕ ಮೆಮೊರಿ,2 GB ರ್‍ಯಾಮ್,13 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್ ಹೊಂದಿದೆ. ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್ ವಿಶೇಷತೆ ಮತ್ತು ವಿಡಿಯೋವನ್ನು ನೀಡಲಾಗಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಇದನ್ನೂ ಓದಿ: ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಸ್ಲಿಮ್ ಸ್ಮಾರ್ಟ್‌ಫೋನ್‌ಗಳು

ವಿಶ್ವದ ಸ್ಲಿಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ
145.1x70.2x5.6 ಮಿ. ಮೀ ಗಾತ್ರ,130 ಗ್ರಾಂ ತೂಕದ ಮೆಟಲ್ ಬಾಡಿ ಹೊಂದಿರುವ ಸ್ಮಾರ್ಟ್‌ಫೋನ್,5 ಇಂಚಿನ ಸುಪರ್ ಅಮೊಲೆಡ್ ಕೆಪಾಸಿಟಿವ್ ಫುಲ್‌ಎಚ್‌ಡಿಸ್ಕ್ರೀನ್(1080 x 1920 ಪಿಕ್ಸೆಲ್,441 ಪಿಪಿಐ) ಒಳಗೊಂಡಿದೆ.

ವಿಶ್ವದ ಸ್ಲಿಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್ ಎಕ್ಸಲರೋಮೀಟರ್, ಗೈರೋ,ಕಂಪಾಸ್,ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಹೊಂದಿದೆ.

ವಿಶ್ವದ ಸ್ಲಿಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ
1.7 GHz ಮೀಡಿಯಾ ಟೆಕ್ ಅಕ್ಟಾ ಕೋರ್ ಪ್ರೊಸೆಸರ್,2 ಜಿಬಿ ರ್‍ಯಾಮ್‌ನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.

ವಿಶ್ವದ ಸ್ಲಿಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ
ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 13 ಎಂಪಿ ಹಿಂದುಗಡೆ ಕ್ಯಾಮೆರಾ (4160 x 3120 ಪಿಕ್ಸೆಲ್),5 ಎಂಪಿ ಮುಂದುಗಡೆ ಕ್ಯಾಮೆರಾ ,16 ಜಿಬಿ ಆಂತರಿಕ ಮೆಮೊರಿಯನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್ ಇಲ್ಲ.
ವಿಶ್ವದ ಸ್ಲಿಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್ ಕನೆಕ್ಟವಿಟಿ ವಿಶೇಷತೆಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್ 2300 mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.
6
ವಿಡಿಯೋ ವೀಕ್ಷಿಸಿ


Click it and Unblock the Notifications