ಜಿಯೋನೀಯಿಂದ ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ

By Ashwath
|

ಚೀನಾದ ಜಿಯೋನೀ ಕಂಪೆನಿ ಭಾರತದ ಮಾರುಕಟ್ಟೆಗೆ ಎರಡು ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.ಜಿಪ್ಯಾಡ್-ಜಿ4 ಸ್ಮಾರ್ಟ್‌‌ಫೋನಿಗೆ 18,999 ರೂಪಾಯಿ,ಎಂ2 ಸ್ಮಾರ್ಟ್‌ಫೋನಿಗೆ 10,999 ರೂಪಾಯಿ ಬೆಲೆಯನ್ನು ಜಿಯೋನೀ ನಿಗದಿ ಪಡಿಸಿದೆ.

ಜಿಯೋನೀ ಜಿಪ್ಯಾಡ್-ಜಿ4

5.7 ಇಂಚಿನ ಸ್ಕ್ರೀನ್‌ ಹೊಂದಿರುವ,ಅತ್ಯಂತ ಪರಿಣಾಮಕಾರಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಅಡಕಮಾಡಿರುವ, ಸುಂದರ ಹಾಗೂ ಅತ್ಯಂತ ಸಪೂರದ ಜಿಪ್ಯಾಡ್ ಜಿ4ನ ಒಟ್ಟು ದಪ್ಪ ಕೇವಲ 7.95 ಮಿ.ಮೀ. ಮಾತ್ರ. 1.5 ಗಿಗಾಹರ್ಟ್ಸ್ ಕ್ವಾಡ್ ಕೋರ್ ಪ್ರೊಸೆಸರ್‌,14.48ಸೆಂ.ಮೀ.ನಷ್ಟು ಹೆಚ್‌ಡಿ ಎಲ್‌ಸಿಡಿ ವಿಶಾಲ ಪರದೆಯು ಸ್ಪಷ್ಟ ಹಾಗೂ ಉತ್ಕೃಷ್ಟ ಗುಣಮಟ್ಟದ ಚಿತ್ರ ಹಾಗೂ ದೃಶ್ಯಗಳನ್ನು ಬಿತ್ತರಿಸಲಿದೆ.ಸುಂದರ ಹಾಗೂ ಸಪೂರ ಜಿ4ನಲ್ಲಿ ವೈಡರ್ ಆಂಗಲ್ ನೋಟ ಹಾಗೂ ಮೃದುವಾದ ಬಹು ಸ್ಪರ್ಶ ಪರದೆಯಲ್ಲಿ ಶ್ರೇಷ್ಠ ಗುಣಮಟ್ಟದ ಮಲ್ಟಿಮೀಡಿಯಾ ಅನುಭವವನ್ನು ಪಡೆಯಬಹುದು. ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ 4.2 ಆವೃತ್ತಿಯಾಗಿರುವ ಜೆಲ್ಲಿ ಬೀನ್ ಅನ್ನು ಹೊಂದಿದೆ. ಜಿಪ್ಯಾಡ್-ಜಿ4ನ ಮತ್ತೊಂದು ವಿಶೇಷವೆಂದರೆ ಅತ್ಯಾಧುನಿಕ ಸ್ಮಾರ್ಟ್ ಗೆಶ್ಚರ್ ಕಂಟ್ರೋಲ್ ಸೌಲಭ್ಯವಿದೆ.

ಯೂನಿಬ್ಯಾಡಿ ಹೊಂದಿರುವ ಜಿಪ್ಯಾಡ್ ಜಿ4 ಅಲುಮಿನಿಯಂ ವಿನ್ಯಾಸ ಹೊಂದಿದ್ದು 13 ಮೆಗಾ ಪಿಕ್ಸೆಲ್ ಆಟೊ ಫೋಕಸ್ ಹಿಂಬದಿಯ ಕ್ಯಾಮೆರಾ. ಅದರ ಜತೆಗೆ ಎಲ್‌ಇಡಿ ಫ್ಲಾಶ್ ಕೂಡಾ ನೀಡಲಾಗಿದೆ. ಮುಂಭಾಗದಲ್ಲಿ ವೈಡ್ ಆಂಗಲ್‌ನ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. 16ಜಿಬಿ ಆಂತರಿಕ ಮೆಮೊರಿ,1ಜಿಬಿ ರ್‍ಯಾಮ್ 3200 mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

ಜಿಯೋನೀ ಎಂ2

ಜಿಯೋನೀ ಸಂಸ್ಥೆಯ ಮತ್ತೊಂದು ನೂತನ ಸಂಗ್ರಹ ಮ್ಯಾರಥಾನ್ ಸರಣಿಯ ಎಂ2 ಸ್ಮಾರ್ಟ್‌‌ಫೋನ್‌. ಆಕರ್ಷಕ ವಿನ್ಯಾಸದೊಂದಿಗೆ, ಬಗೆಬಗೆಯ ಸೌಲಭ್ಯಗಳನ್ನು ಹೊಂದಿದೆ. ಎರಡು ಸಿಮ್ ಕಾರ್ಡ್‌ಗಳನ್ನು ಹಾಕಿ ಬಳಸಬಹುದಾದ ಎಂ೨ ಸಾಧನದೊಳಗೆ 4200 mAh ಬ್ಯಾಟರಿ ಅಳವಡಿಸಲಾಗಿದೆ. 10.5ಮಿ.ಮೀ. ದಪ್ಪವಿರುವ ಈ ಮೊಬೈಲ್, ಈ ವಿಭಾಗದಲ್ಲೇ ಅತ್ಯಂತ ಆಕರ್ಷಣೀಯ, ಸಪೂರ ಹಾಗೂ ದೀರ್ಘಕಾಲದವರೆಗೆ ಬ್ಯಾಟರಿ ಇರುವುದರಿಂದ ದೀರ್ಘಕಾಲದ ಮನರಂಜನೆ ಪಡೆಯಬಹುದಾಗಿದೆ.

ಆಕರ್ಷಕ ವಿನ್ಯಾಸದ ಎಂ2 10.5 ಎಂಎಂ ದಪ್ಪದ ಸ್ಮಾರ್ಟ್‌‌‌ಫೋನ್‌ ಒಳಗಡೆ1.3ಗಿಗಾ ಹರ್ಟ್ಸ್ ಕ್ವಾಡ್ ಕೋರ್ ಪ್ರೊಸೆಸರ್‌ ಅಳವಡಿಸಲಾಗಿದೆ. 13.7 ಸೆಂ.ಮೀ.ನಷ್ಟು ವಿಶಾಲವಾದ ಪರದೆಯಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಆಂಡ್ರಾಯ್ಡ್ ಅನುಭವವನ್ನು ಈ ಮೊಬೈಲ್ ನೀಡಲಿದೆ. ಬಹು ಸ್ಪರ್ಶ ಸಂವಹನವಿದೆ. ಇದಕ್ಕೆ ಬೇಕಾದ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಎಂ2 ಹ್ಯಾಂಡ್‌ಸೆಟ್ 8ಮೆಗಾ ಪಿಕ್ಸೆಲ್ ಜತೆಗೆ ಎಲ್‌ಇಡಿ ಫ್ಯಾಶ್ ಕ್ಯಾಮೆರಾ ಅದರಲ್ಲೂ ಆಟೋ ಫೋಕಸ್ ಇರುವ ಕ್ಯಾಮೆರಾ ಅಳವಡಿಸಲಾಗಿದೆ.

ಜಿಯೋನೀ ಜಿ4 ಹಾಗೂ ಎಂ2 ಮೊಬೈಲ್ ಸಾಧನದಲ್ಲಿ ಫೇಸ್ ಬ್ಯೂಟಿ ಎಫೆಕ್ಟ್ಸ್, ಹ್ಯಾಂಡ್ಸ್ ಫ್ರೀ ಫೋಟೊ ಗೆಸ್ಚರ್ ರೆಕಗ್ನಿಷನ್, ಮೋಷನ್ ಸೆನ್ಸರ್ ಸಹ ಒಳಗೊಂಡಿದೆ. ಈ ಸಾಧನದೊಳಗೆ ಡಿಜಿಟಲ್ ಥೀಯೇಟರ್ ಸೌಲಭ್ಯ (ಡಿಟಿಎಸ್) ಹಾಗೂ ಅಮಿಗೊ ಎಂಬ ಉತ್ತಮ ಕ್ಯಾಮೆರಾ ಹಾಗೂ ಗುಣಮಟ್ಟದ ಸಂಗೀತ ವಾದಕ, ದಿ ಡುಯಲ್ ಸ್ಟ್ಯಾಂಡ್‌ಬೈ ಮಲ್ಟಿಮೀಡಿಯಾ ಸೌಲಭ್ಯವನ್ನು ನೀಡಲಾಗಿದೆ.ಜಿಯೋನಿ ಜಿಪ್ಯಾಡ್-ಜಿ4 ಸಾಧನವು ಗ್ರಾಫೈಟ್ ಕಪ್ಪು ಹಾಗೂ ಸಿಲ್ವರ್ ಮೆಟಾಲಿಕ್ ಬಣ್ಣದಲ್ಲಿ ಲಭ್ಯ. ಇದರ ಬೆಲೆ ರೂ. 18,999 ಹಾಗೂ ಜಿಯೋನೀ ಎಂ2 ಮೊಬೈಲ್ ಸಾಧನವು ಕಪ್ಪು ಹಾಗೂ ಬಿಳಿ ಬಣ್ಣದಲ್ಲಿ ಲಭ್ಯವಿದ್ದು ಈ ಮೊಬೈಲ್‌ನ ಬೆಲೆ ರೂ. 10,999

 ಜಿಯೋನೀಯಿಂದ ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ

ಜಿಯೋನೀ ಜಿ4
ವಿಶೇಷತೆ:
ಡ್ಯುಯಲ್‌ ಸಿಮ್‌
5.7 ಇಂಚಿನ ಐಪಿಎಸ್‌ ಎಲ್‌ಸಿಡಿ ಕೆಪಾಸಿಟಿವ್‌ ಸ್ಕ್ರೀನ್(720 x 1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5 GHz ಕಾರ್ಟೆ‌ಕ್ಸ್‌ ಎ7 ಪ್ರೊಸೆಸರ್‌
16 ಜಿಬಿ ಆಂತರಿಕ ಮೆಮೊರಿ
1ಜಿಬಿ ರ್‍ಯಾಮ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್‌ ಇಲ್ಲ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
3200 mAh ಬ್ಯಾಟರಿ

ಜಿಯೋನೀ ಎಂ2
ವಿಶೇಷತೆ:
ಡ್ಯುಯಲ್‌ ಸಿಮ್‌
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 854 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.3 GHz ಕಾರ್ಟೆ‌ಕ್ಸ್‌ ಎ7 ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
1ಜಿಬಿ ರ್‍ಯಾಮ್‌
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
4200 mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X