Subscribe to Gizbot

ಮಾರುಕಟ್ಟೆಗೆ ಬರುತ್ತಿರುವ ಜಿಯೋನಿ ಫೋನಿನಲ್ಲಿದೇ ನಾಲ್ಕು ಕ್ಯಾಮೆರಾ...!!

Written By:

ಸ್ಮಾರ್ಟ್‌ಫೋನುಗಳು ಇಂದು ಕೇವಲ ಕರೆ ಮಾಡುವುದಕ್ಕೆ ಮಾತ್ರವೇ ಬಳಕೆಯಾಗುವ ಸಾಧ್ಯತೆ ಕಡಿಮೆ ಇದೆ. ಫೋಟೋ ತೆಗೆಯಲು, ಹಾಡು ಕೇಳಲು, ಸಿನಿಮಾ ನೋಡಲು, ಗೇಮ್ ಆಡಲು ಹೀಗೆ ಹಲವಾರು ರೀತಿಯಲ್ಲಿ ಬಳಕೆಯಾಗುತ್ತಿದೆ. ಅದರಲ್ಲೂ ಹೆಚ್ಚಾಗಿ ಬಳಕೆಯಾಗುತ್ತಿರುವುದು ಸೆಲ್ಫಿ ತೆಗೆಯಲು.

ಮಾರುಕಟ್ಟೆಗೆ ಬರುತ್ತಿರುವ ಜಿಯೋನಿ ಫೋನಿನಲ್ಲಿದೇ ನಾಲ್ಕು ಕ್ಯಾಮೆರಾ...!!

ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್ ತಯಾರಕರು ಮಾರುಕಟ್ಟೆಗೆ ಕ್ಯಾಮೆರಾ ಫೋನ್‌ಗಳನ್ನೇ ಹೆಚ್ಚಾಗಿ ಬಿಡುಗಡೆ ಮಾಡುತ್ತಿದ್ದಾರೆ. ಇದೇ ಹಾದಿಯಲ್ಲಿ ಸಾಗಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿ ಜಿಯೋನಿ ತನ್ನ ನೂತನ ಫೋನಿನಲ್ಲಿ ಒಟ್ಟು ನಾಲ್ಕು ಕ್ಯಾಮೆರಾವನ್ನು ಅಳವಡಿಸಿ ಗ್ರಾಹಕರನ್ನು ಸೆಳೆಯುವ ತಂತ್ರಕ್ಕೆ ಮೊರೆಹೋಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋನಿ S10 ಮತ್ತು S10 ಪ್ಲಸ್:

ಜಿಯೋನಿ S10 ಮತ್ತು S10 ಪ್ಲಸ್:

ಜಿಯೋನಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಉತ್ತಮ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಹೆಸರುಗಳಿಸಿದೆ. ಇದೇ ಇತ್ತೀಚಿನ ದಿನದಲ್ಲಿ ಆಷ್ಟಾಗಿ ಸುದ್ದಿಯಲ್ಲಿ ಇರಲಿಲ್ಲ. ಆದರೆ ಈಗ ಜಿಯೋನಿ S10 ಮತ್ತು S10 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ ನಡೆಸುವ ಮೂಲಕ ಸಖತ್ ಸುದ್ದಿ ಮಾಡುತ್ತಿದೆ.

ಹಿಂಭಾಗ ಮತ್ತು ಮುಂಭಾಗ ಡ್ಯುಯಲ್ ಕ್ಯಾಮೆರಾ:

ಹಿಂಭಾಗ ಮತ್ತು ಮುಂಭಾಗ ಡ್ಯುಯಲ್ ಕ್ಯಾಮೆರಾ:

ಸದ್ಯ ಮಾರುಕಟ್ಟೆಯಲ್ಲಿ ಟ್ರಂಡ್ ಇರುವ ಡ್ಯುಯಲ್ ಕ್ಯಾಮೆರಾವನ್ನು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲ ಬಾರಿಗೆ ಅಳವಡಿಸಿರುವ ಜಿಯೋನಿ, ಹಿಂಭಾಗದಲ್ಲಿ ಮತ್ತು ಮುಂಭಾಗ ಎರಡು ಕಡೆಗಳಲ್ಲಿಯೂ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸುವ ಮೂಲಕ ಮೊದಲ ಬಾರಿಗೆ ನಾಲ್ಕು ಕ್ಯಾಮೆರಾ ಅಳವಡಿಸಿರುವ ಸ್ಮಾರ್ಟ್‌ಫೋನ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಹಿಂಭಾಗದ ಕ್ಯಾಮೆರಾ ವಿಶೇಷತೆ:

ಹಿಂಭಾಗದ ಕ್ಯಾಮೆರಾ ವಿಶೇಷತೆ:

ಜಿಯೋನಿ ತನ್ನ S10 ಮತ್ತು S10 ಪ್ಲಸ್ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 16 MP ಮತ್ತು 8 MP ಕ್ಯಾಮೆರಾವನ್ನು ಅವಳಡಿಸಿದ್ದು, ಇದರರಲ್ಲಿ ಒಂದು ವೈಡ್ ಆಂಗಲ್ ಲೈನ್ಸ್ ಆದರೆ ಇನ್ನೊಂದು ಜೂಮ್ ಲೈನ್ಸ್ ಆಗಿದೆ, ಎರಡು ಕ್ಯಾಮೆರಾಗಳು ಒಂದಾಗಿ ಸೇರಿ ನೀವು ಸೆರೆ ಹಿಡಿಯುವ ಚಿತ್ರವನ್ನು ಸುಂದರವಾಗಿ ಸ್ಪಷ್ಟವಾಗಿ ಕಾಣುವಂತೆ ಮಾಡುತ್ತವೆ.

ಸೆಲ್ಫಿ ಕ್ಯಾಮೆರಾ ಹೇಗಿದೆ..?

ಸೆಲ್ಫಿ ಕ್ಯಾಮೆರಾ ಹೇಗಿದೆ..?

ಜಿಯೋನಿ ತನ್ನ S10 ಮತ್ತು S10 ಪ್ಲಸ್ ಸ್ಮಾರ್ಟ್‌ಫೋನು ಸೆಲ್ಪಿಗೆ ಹೇಳಿ ಮಾಡಿಸಿದಂತಿದೆ. 12MP ಮತ್ತು 8MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು ಸೆಲ್ಪಿ ಪ್ರಿಯರಿಗೆ ತುಂಬ ಇಷ್ಟವಾಗಲಿದೆ. ಎರಡು ಕ್ಯಾಮೆರಾಗಳು ಉತ್ತಮ ಚಿತ್ರವನ್ನು ತೆಗೆಯಲು ಸೂಕ್ತವಾಗಿದೆ.

ಜಿಯೋನಿ S10 ಮತ್ತು S10 ಪ್ಲಸ್ ವಿಶೇಷತೆ:

ಜಿಯೋನಿ S10 ಮತ್ತು S10 ಪ್ಲಸ್ ವಿಶೇಷತೆ:

ಜಿಯೋನಿ S10 ಮತ್ತು S10 ಪ್ಲಸ್ ಸ್ಮಾರ್ಟ್‌ಪೋನಿನಲ್ಲಿ 2.5 GHz ವೇಗದ ಆಕ್ವಾ ಕೋರ್ ಪ್ರೋಸೆಸರ್ ಅಳವಡಿಸಲಾಗಿದ್ದು, ಇದರೊಂದಿಗೆ 6GB RAM ಇರಲಿದ್ದು, 64GB ಇಂಟರ್ನಲ್ ಮೆಮೊರಿ ಇರಲಿದೆ. ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 3450 mAh ಬ್ಯಾಟರಿ ಸಹ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Gionee S10 was spotted with dual cameras on its front and back. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot