ಗಿಜ್‌ಬಾಟ್ ಗಿವ್‌ಅವೇನಲ್ಲಿ ಮೋಟೋ ಎಕ್ಸ್ ಪ್ಲೇ ಉಚಿತ ವಿಜಯಿಗಳಾಗಿ

By Shwetha
|

ಗಿಜ್‌ಬಾಟ್ ಓದುಗರೇ! ನಾವು ನಿಮಗಾಗಿ ಈ ಬಾರಿ ಅತ್ಯಾಕರ್ಷಕ ಸುದ್ದಿಯೊಂದನ್ನು ಹೊರತಂದಿದ್ದೇವೆ. ಮೋಟೋರೋಲಾ ಇಂಡಿಯಾ ಪ್ರಸ್ತುತಪಡಿಸುತ್ತಿರುವ ನವೀನ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಈ ಬಾರಿಯ ಗಿವ್‌ಅವೇನಲ್ಲಿ ನಿಮಗೆ ಜಯಗಳಿಸಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್‌ಗಳ ಜಗತ್ತಿನಲ್ಲಿ ಚಾಂಪಿಯನ್ ಎಂದೆನಿಸಿರುವ ಮೋಟೋ ಎಕ್ಸ್ ಪ್ಲೇಯನ್ನು ಗಿವ್‌ಅವೇನಲ್ಲಿ ನಿಮಗೆ ಗಳಿಸಿಕೊಳ್ಳಬಹುದಾಗಿದೆ. ಗಿಜ್‌ಬಾಟ್ ಗಿವ್‌ಅವೇನಲ್ಲಿ ರಾಫ್ಲಿಕೋಪ್ಟರ್ ಮೂಲಕ ಭಾಗವಹಿಸಿ ಅಂತೆಯೇ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಜಿ ಪ್ಲಸ್‌ನಲ್ಲಿ ಸ್ಪರ್ಧೆಯನ್ನು ಪ್ರಚಾರಪಡಿಸಿ.

ಗಿಜ್‌ಬಾಟ್ ಗಿವ್‌ಅವೇನಲ್ಲಿ ಮೋಟೋ ಎಕ್ಸ್ ಪ್ಲೇ ಉಚಿತ ವಿಜಯಿಗಳಾಗಿ

ಮೋಟೋ ಎಕ್ಸ್ ಪ್ಲೇಯನ್ನು ನಿಮ್ಮದಾಗಿಸಿಕೊಳ್ಳಲು ಸ್ಪರ್ಧೆಯ ಕೆಲವೊಂದು ನಿಯಮಗಳನ್ನು ನೀವು ಅನುಸರಿಸುವುದು ಅತಿಮುಖ್ಯವಾಗಿದೆ. ಹಾಗಿದ್ದರೆ ತಡಮಾಡದೇ ಕೆಳಗೆ ನಾವು ನೀಡಿರುವ ಹಂತಗಳನ್ನು ಅನುಸರಿಸಿ ಮತ್ತು ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ!

<a class="rcptr" href="http://www.rafflecopter.com/rafl/display/b2f9afb810/" rel="nofollow" data-raflid="b2f9afb810" data-theme="classic" data-template="" id="rcwidget_ejjxpusk">a Rafflecopter giveaway</a> <script src="//widget-prime.rafflecopter.com/launch.js"></script>

ಆಡುವುದು ಹೇಗೆ?
ಹಂತ 1: ನಿಮ್ಮ ಫೇಸ್‌ಬುಕ್ ಅಥವಾ ಇಮೇಲ್ ಐಡಿಯೊಂದಿಗೆ ಲಾಗಿನ್ ಮಾಡಿ.
ಹಂತ: 2: ರಾಫ್ಲಿಕೋಪ್ಟರ್ ವಿಜೆಟ್‌ನಲ್ಲಿ ನೀಡಿರುವ ಪ್ರತೀ ಹಂತವನ್ನು ಅನುಸರಿಸಿ ಹಾಗೂ ಗರಿಷ್ಟ ಅಂಕಗಳನ್ನು ಸಂಪಾದಿಸಿ
ಹಂತ 3: ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಸೈಟ್‌ಗಳಲ್ಲಿ ಗಿಜ್‌ಬಾಟ್ ಮತ್ತು ಮೋಟೋರೋಲಾ ಇಂಡಿಯಾವನ್ನು ಅನುಸರಿಸಿ
ಹಂತ 4: ಈ ಗಿವ್‌ಅವೇ ಅನ್ನು ಟ್ವಿಟ್ಟರ್, ಫೇಸ್‌ಬುಕ್ ಹಾಗೂ ಇಮೇಲ್‌ನಲ್ಲಿ ಶೇರ್ ಮಾಡಿ, ಬೋನಸ್ ಎಂಟ್ರಿಗಳು ಮತ್ತು ಸ್ಕೋರ್ ಗಳಿಸಲು ಲಿಂಕ್ ಮಾಡಿ.

ಮೋಟೋರೋಲಾ ಎಕ್ಸ್ ಪ್ಲೇಯ ಪ್ರಮುಖ ವಿಶೇಷತೆಗಳು
ಮೋಟೋ ಎಕ್ಸ್ ಪ್ಲೇ ಮೋಟೋರೋಲಾದ ಹೊಸ ಜನರೇಶನ್ ಮಾಡೆಲ್ ಎಕ್ಸ್ ಸಿರೀಸ್‌ನಲ್ಲಿ ಹೊರತರುತ್ತಿದೆ. ಮೋಟೋ ಎಕ್ಸ್ ಸ್ಟೈಲ್‌ನೊಂದಿಗೆ ಮೋಟೋ ಎಕ್ಸ್ ಪ್ಲೇ ಹೊರಬಂದಿದೆ. ಮಧ್ಯಮ ಶ್ರೇಣಿಯ ಫ್ಯಾಬ್ಲೆಟ್‌ನಲ್ಲಿ ಈ ಡಿವೈಸ್ ಅನ್ನು ಪಟ್ಟಿ ಮಾಡಲಾಗಿದ್ದು ಮಾರುಕಟ್ಟೆಯಲ್ಲಿ ಭರ್ಜರಿ ಪೈಪೋಟಿಯನ್ನು ಈ ಡಿವೈಸ್ ನೀಡಿದೆ.

ಫೋನ್ 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1080x1920 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆಯನ್ನು ಡಿವೈಸ್ ಪಡೆದುಕೊಂಡಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ ಚಿಪ್‌ಸೆಟ್ ಅನ್ನು ಡಿವೈಸ್ ಪಡೆದುಕೊಂಡಿದ್ದು, Adreno 405 ಜಿಪಿಯು ಇದರಲ್ಲಿದೆ. 2ಜಿಬಿ RAM ಅನ್ನು ಫೋನ್ ಪಡೆದುಕೊಂಡಿದ್ದು ಆಂಡ್ರಾಯ್ಡ್ ಲಾಲಿಪಪ್ ಓಎಸ್ ಇದರಲ್ಲಿದೆ.

ಸ್ಮಾರ್ಟ್‌ಫೋನ್ ಪ್ರಾಥಮಿಕ ಕ್ಯಾಮೆರಾ 21 ಮೆಗಾಪಿಕ್ಸೆಲ್ ಆಗಿದ್ದು, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. ಫೋನ್ ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು ಫೋನ್ ಎರಡು ಪ್ರಕಾರದ ಸಂಗ್ರಹಣೆಗಳನ್ನು ಒಳಗೊಂಡಿದೆ. 16 ಜಿಬಿ ಹಾಗೂ 64ಜಿಬಿ. ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ 18,499 ಕ್ಕೆ ಲಭ್ಯವಿದೆ.

ಗಿಜ್‌ಬಾಟ್ ಗಿವ್‌ಅವೇ ನಿಯಮಗಳು:

ಜಯಶಾಲಿಗಳನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ ಈ ಸ್ಪರ್ಧೆಗಾಗಿ ಕೇವಲ (1) ವಿಜಯಿಯಾಗಿರುತ್ತಾನೆ. ಗಿವ್‌ಅವೇನಲ್ಲಿ ಮೋಟೋರೋಲಾ ಮೋಟೋ ಎಕ್ಸ್ ಪ್ಲೇ ಅನ್ನು ಬಹುಮಾನವಾಗಿ ಪಡೆದುಕೊಳ್ಳುತ್ತಾರೆ. ರಾಫಲ್ ಕೋಪ್ಟರ್ ವಿಜೆಟ್‌ನ ಮೂಲಕ ವಿಜಯಿಯನ್ನು ಆರಿಸಲಾಗುತ್ತದೆ. ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ನೀವು ಹೆಚ್ಚುವರಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಎಂಬುದು ನಮ್ಮ ಗಮನಕ್ಕೆ ಬಂದಲ್ಲಿ ಹೆಚ್ಚುವರಿ ಪಾಯಿಂಟ್‌ಗಳಿಗಾಗಿ ನಾವು ಅವಕಾಶಗಳನ್ನು ಒಗಿಸಬಹುದು. ನಕಲಿ ಐಡಿಗಳನ್ನು ಪರಿಗಣಿಸಲಾಗುವುದಿಲ್ಲ. ನೀವು ವಿಜಯಿಗಳಾದಲ್ಲಿ ನಿಮ್ಮ ಇಮೇಲ್ ವಿಳಾಸ ನಮಗೆ ಬೇಕಾಗುತ್ತದೆ, ಯಾವುದೇ ಮೂರನೇ ವ್ಯಕ್ತಿಗಳಿಗೆ ಇದನ್ನು ನೀಡಲಾಗುವುದಿಲ್ಲ.

ಕಡ್ಡಾಯ ಆಯ್ಕೆಯಂತೆ ನೀವು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಗಿಜ್‌ಬಾಟ್ ಹಾಗೂ ಮೋಟೋರೋಲಾ ಇಂಡಿಯಾ ಸೋಶಿಯಲ್ ಹ್ಯಾಂಡಲ್‌ಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇತರವುಗಳನ್ನು ಅನುಸರಿಸಬೇಕಾಗುತ್ತದೆ.ಇದು ನಿಮಗೆ ಹೆಚ್ಚುವರಿ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತದೆ. ಹ್ಯಾಶ್‌ಟ್ಯಾಗ್ #GizbotGiveaway ಆಗಿದೆ.

ನೀವು ಆಯ್ಕೆಗೊಂಡಲ್ಲಿ ನಿಮಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಸಂಪರ್ಕ ಮಾಡಿದ ಏಳು ದಿನಗಳೊಳಗಾಗಿ ಜಯಶಾಲಿಗಳು ಪ್ರತ್ಯುತ್ತರಿಸಬೇಕು. ಈ ಸಮಯದಲ್ಲಿ ನೀವು ಉತ್ತರಿಸದಿದ್ದಲ್ಲಿ, ಅಥವಾ ಸಂಪರ್ಕಕ್ಕೆ ಒಳಪಡದಿದ್ದಲ್ಲಿ ಮತ್ತೊಬ್ಬ ವಿಜಯಿಯನ್ನು ಆರಿಸಲಾಗುತ್ತದೆ. ನೀವು ಸ್ಪರ್ಧೆಯಲ್ಲಿ ನೀವು ಬಳಸುವ ಖಾತೆಯು ಒಳಗೊಂಡಿರುವ ಹೆಸರು ನಿಮ್ಮ ನಿಜವಾದ ಹೆಸರಾಗಿರಬೇಕು ಮತ್ತು ಇದೇ ನಿಯಮ ನಿಮ್ಮ ಫೇಸ್‌ಬುಕ್ ಲಾಗಿನ್ ಅಥವಾ ಇಮೇಲ್ ಸಂಪರ್ಕಕ್ಕೆ ಕೂಡ ಅನ್ವಯಿಸುತ್ತದೆ.

ಈ ಘಟಕ ಗಿವ್ಅವೇಯ ಪ್ರಚಾರಕ್ಕಾಗಿ ಮಾತ್ರವಾಗಿದೆ ಮೋಟೋರೋಲಾ ಇಂಡಿಯಾ ಅಥವಾ ಅಥವಾ ಗಿಜ್‌ಬಾಟ್ ವಿನಿಮಯ ಇಲ್ಲವೇ ಗ್ರಾಹಕ ಸೇವಾ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಜವಬ್ದಾರರಾಗಿಲ್ಲ. ಈ ಸ್ಪರ್ಧೆಯು ಡಿಸೆಂಬರ್ 3 2015 ರ ವರೆಗೆ ತೆರೆದಿರುತ್ತದೆ.

Best Mobiles in India

English summary
Hey, GizBot readers! Yet again we have for you, an exciting chance to win yet another sizzling smartphone in our latest giveaway sponsored by Motorola India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X