Subscribe to Gizbot

ಗಿಜ್‌ಬಾಟ್‌ ಗಿವ್‌ವೇನಲ್ಲಿ ಭಾಗವಹಿಸಿ: LG L90 ಡ್ಯುಯೆಲ್ ಅನ್ನು ಜಯಿಸಿ

Posted By:

ಗಿಜ್‌ಬಾಟ್ ಗಿವ್‌ವೇಯ ಸಮಯವಾಗಿದೆ ಇದು! ನಾವು ನಮ್ಮ ಆಕರ್ಷಕ ಓದುಗರಿಗಾಗಿ LG L90 ಡ್ಯುಯೆಲ್ ಅನ್ನು ಜಯಗಳಿಸುವ ವಿಭಿನ್ನ ಅವಕಾಶವನ್ನು ಪ್ರಸ್ತುತಪಡಿಸುತ್ತಿದ್ದೇವೆ.

ನಾವೀಗ ಮಾತನಾಡುತ್ತಿರುವುದು ಅತ್ಯಧುನಿಕ ಮತ್ತು ಹೆಚ್ಚು ಪ್ರಸಿದ್ಧಿಯ ಎಲ್‌ಜಿ L90 ಡ್ಯುಯೆಲ್ ಅನ್ನು ಕುರಿತಾಗಿದೆ. 4.4 ಆಂಡ್ರಾಯ್ಡ್ ಕಿಟ್‌ಕ್ಯಾಟ್ ಅನ್ನು ಹೊಂದಿರು ಈ ಫೋನ್ ಎಲ್‌ಜಿ ಪೇಟೆಂಟ್ ನಾಕ್ ಕೋಡ್ ಅನ್ನು ಹೊಂದಿದೆ ಇದು ನಿಮ್ಮ ಫೋನ್ ಅನ್ನು ಒಮ್ಮೆಗೇ ಲಾಕ್ ಮತ್ತು ಅನ್‌ಲಾಕ್ ಮಾಡಿಕೊಡುತ್ತದೆ. ನಮ್ಮ ಗಿವ್‌ವೇ ಸ್ಪರ್ಧೆಯ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಗಿಜ್‌ಬಾಟ್ ಹಾಗೂ ಎಲ್‌ಜಿ ಒಟ್ಟಾಗಿ ಸೇರಿ LG L90 ಅನ್ನು ಅದೃಷ್ಟಶಾಲಿಗಳಿಗೆ ನೀಡ ಹೊರಟಿದೆ.

ಗಿಜ್‌ಬಾಟ್‌ ಗಿವ್‌ವೇನಲ್ಲಿ ಭಾಗವಹಿಸಿ: LG L90 ಡ್ಯುಯೆಲ್ ಅನ್ನು ಜಯಿಸಿ

ಮಾರುಕಟ್ಟೆಯಲ್ಲಿ ಈ ಫೋನ್‌ಗಿರುವ ಬೆಲೆ ರೂ 19,000 ಆಗಿದೆ ಹಾಗೂ ಇದೊಂದು ಅತ್ಯಾಧುನಿಕ ಶ್ರೇಣಿಯ ಆಂಡ್ರಾಯ್ಡ್ ಸೆಟ್ ಆಗಿದ್ದು ಪಡೆದ ಅದೃಷ್ಟಶಾಲಿ ನಿಜಕ್ಕೂ ಭಾಗ್ಯವಂತನೇ ಸರಿ. ಇದರಲ್ಲಿ ವಿಶೇಷವಾಗಿ ಅಳವಡಿಸಿರುವ ನಾಕ್ ಕೋಡ್ ವೈಶಿಷ್ಟ್ಯ ಬಳಕೆದಾರರಿಗೆ ಅವರ ಫೋನ್‌ನ ಸುಭದ್ರತೆಯನ್ನು ನೀಡುತ್ತದೆ. ಇತರ ಡಿವೈಸ್‌ಗಳಲ್ಲಿ ಇಲ್ಲದ ಒಂದು ಅತ್ಯಾಧುನಿಕ ಫೋನ್ ತಂತ್ರಜ್ಞಾನವನ್ನು ಬಳಸಿ ಈ ಲಾಕ್ ಅನ್ನು ತಯಾರಿಸಲಾಗಿದೆ.

a Rafflecopter giveaway

ಈ ನಾಕ್ ಕೋಡ್ ಅನ್ನು ಪರದೆಯ ಯಾವ ಭಾಗದಲ್ಲಾದರೂ ಯಾವುದೇ ಗಾತ್ರದಲ್ಲಾದರೂ ಅಳವಡಿಸಬಹುದು. ಇದರಿಂದ ಪಾಸ್‌ವರ್ಡ್‌ ಕದ್ದುಹೋಗುವ ಭಯ ಕೂಡಾ ಇಲ್ಲ.

ಎಲ್‌ಜಿ L90 Dual ನ ಪ್ರಮುಖ ವೈಶಿಷ್ಟ್ಯಗಳು ಇಲ್ಲಿದೆ
4.7 ಇಂಚಿನ qHD (960 x 540) ಪೂರ್ಣ ಟಚ್ IPS ಪರದೆ
1.2GHz ಕ್ವಾಡ್ ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ ಆಂಡ್ರೆನೋ 305 ಜಿಪಿಯುನೊಂದಿಗೆ 400 ಪ್ರೊಸೆಸರ್
ನೋಕ್ ಕೋಡ್ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
8 ಎಂಪಿ ಆಟೋ ಫೋಕಸ್ ಹಾಗೂ ಸಿಂಗಲ್ LED ಫ್ಲ್ಯಾಶ್‌ನೊಂದಿಗೆ ರಿಯರ್-ಫೇಸಿಂಗ್ ಕ್ಯಾಮೆರಾ
1080p ಪೂರ್ಣ ಎಚ್‌ಡಿ ವೀಡಿಯೋ ರೆಕಾರ್ಡಿಂಗ್ ಬೆಂಬಲ @30fps
1.3ಎಂಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ
1ಜಿಬಿ ರ್‌ಯಾಮ್
3G HSPA, ವೈ-ಫೈ 802.11 b/g/n, Bluetooth v4.0 with A2DP, USB 2.0, GPS/AGPS,
2,540mAh ಬ್ಯಾಟರಿ
ಡ್ಯುಯೆಲ್-ಸಿಮ್

ಗಿಜ್‌ಬಾಟ್ ಗಿವ್‌ವೇಯ ನಿಯಮಗಳು
ಜಯಶಾಲಿಯನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ. ಒಬ್ಬ ವಿಜಯಿಯು ಒಂದು ಎಲ್‌ಜಿ L90 Dual ಅನ್ನು ಗೆಲ್ಲಬಹುದು. ರೆಫ್ಲಕೋಪ್ಟರ್ ವಿಜೆಟ್ ಮೂಲಕ ವಿಜಯಿಯನ್ನು ಆರಿಸಲಾಗುತ್ತದೆ. ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಪ್ರಚಾರಕ್ಕಾಗಿ ನೀವು ಹೆಚ್ಚು ಪ್ರಯತ್ನವನ್ನು ಮಾಡಿರುವುದು ನಮಗೆ ಕಂಡುಬಂದಲ್ಲಿ ನಾವು ಆ ಅವಕಾಶಗಳಿಗೆ ಹೆಚ್ಚುವರಿ ಅಂಕಗಳನ್ನು ನೀಡುತ್ತೇವೆ. ಆದರೆ ಸುಳ್ಳು ಐಡಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಮ್ಮ ಇಮೇಲ್ ಐಡಿಯನ್ನು ನೀಡುವುದು ಕಡ್ಡಾಯವಾಗಿರುತ್ತದೆ ಮತ್ತು ನಿಮ್ಮ ಹೊರತಾಗಿ ಮೂರನೇ ವ್ಯಕ್ತಿಗಳಿಗೆ ಈ ಬಹುಮಾನವನ್ನು ನೀಡುವುದಿಲ್ಲ.

ಕಡ್ಡಾಯ ಆಯ್ಕೆಯಂತೆ, ನೀವು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಗಿಜ್‌ಬಾಟ್ ಹಾಗೂ ಎಲ್‌ಜಿ ಇಂಡಿಯಾವನ್ನು 'ಲೈಕ್' ಮತ್ತು "ಫಾಲೋ" ಮಾಡಬೇಕಾಗುತ್ತದೆ. ನೀವು ಆಟವಾಡುತ್ತಿರುವಾಗಲೇ ನಿಮಗೆ ಹೆಚ್ಚುವರಿ ಹತ್ತು ಅಂಕಗಳನ್ನು ಗಳಿಸಲು ಇದು ಸಹಕಾರಿಯಾಗಿರುತ್ತದೆ. ಹ್ಯಾಶ್‌ಟಾಗ್ #GizbotGiveaway ಎಂದಾಗಿದೆ.

ನಿಮ್ಮನ್ನು ಆರಿಸಿದಾಗ, ಇಮೇಲ್ ಮೂಲಕ ನಿಮಗೆ ತಿಳಿಸಲಾಗುತ್ತದೆ. ಸಂಪರ್ಕ ಹೊಂದಿದ ಏಳು ದಿನಗೊಳಗಾಗಿ ವಿಜಯಿಯು ಪ್ರತ್ಯುತ್ತರಿಸಬೇಕು. ಎಲ್ಲಿಯಾದರೂ ವಿಜಯಿಯು ಪ್ರತ್ಯುತ್ತರಿಸದಿದ್ದಲ್ಲಿ, ಇನ್ನೊಬ್ಬ ವಿಜಯಿಯನ್ನು ಆಯ್ಕೆ ಮಾಡಲಾಗುತ್ತದೆ. ನೀವು ಸ್ಪರ್ಧೆಗೆ ನಮೂದಿಸುವ ಹೆಸರು ಮತ್ತು ಸಂಪರ್ಕ ಇಮೇಲ್ ಅಥವಾ ಫೇಸ್‌ಬುಕ್ ಲಾಗಿನ್ ನಿಮ್ಮದೇ ಆಗಿದೆ ಎಂಬುದನ್ನು ಖಾತ್ರಿ ಪಡಿಸಿ.

ಈ ಯುನಿಟ್ ಪ್ರಚಾರ ಗಿವ್‌ವೇಗೆಮಾತ್ರವೇ. ಎಲ್‌ಜಿ ಅಥವಾ ಗಿಜ್‌ಬಾಟ್ ಗ್ರಾಹಕ ಸೇವೆಯನ್ನು ಪೂರೈಸಲು, ವಿನಿಮಯಗಳು ಅಥವಾ ಗ್ರಾಹಕ ಸೇವೆಗೆ ಬದ್ಧರಾಗಿರುವುದಿಲ್ಲ.


ಸ್ಪರ್ಧೆಯು ಮೇ 18 ರ ವರೆಗೆ ತೆರೆದಿರುತ್ತದೆ. ಬೆಸ್ಟ್ ಆಫ್ ಲಕ್!

<center><iframe width="100%" height="450" src="//www.youtube.com/embed/t1fS-A4vfLw" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot