ಜುಲೈಗೆ ಆಗಮಿಸಿಲಿರುವ ನೆಕ್ಸಸ್ ಟ್ಯಾಬ್ಲೆಟ್ ಹೇಗೆ ಆಕರ್ಷಣೀಯ?

By Shwetha
|

ಎಲ್‌ಜಿ ಭರ್ಜರಿಯಾಗಿಯೇ ಮಾರುಕಟ್ಟೆಯನ್ನು ಆಳುವ ಕಾರ್ಯಕ್ಕೆ ಕೈ ಹಾಕಿದೆ. ತನ್ನ ಅತ್ಯುನ್ನತ ಫೋನ್ ಶ್ರೇಣಿಗಳ ಮೂಲಕ ಗ್ರಾಹಕರ ಮನ ಮನೆ ಮಾತಾಗಿರುವ ಎಲ್‌ಜಿ ನೆಕ್ಸೆಸ್ ನವೀನ ಮಾದರಿಯ ಟ್ಯಾಬ್ ಅನ್ನು ಹೊತರುವ ತಯಾರಿಯಲ್ಲಿದೆ.

ಅಂತೂ ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಬಗ್ಗೆ ಭಾರೀ ನಿರೀಕ್ಷೆಗಳಿವೆ. 8 ಇಂಚಿನ ನೆಕ್ಸಸ್ 8 ಭರ್ಜರಿ ಪ್ರಚಾರವನ್ನೇ ಪಡೆದುಕೊಂಡು ಟ್ಯಾಬ್ಲೇಟ್ ಜಗತ್ತಿನಲ್ಲೇ ಹೊಸ ಹವಾ ಸೃಷ್ಟಿಸಲಿದೆ. ಹಾಗಿದ್ದರೆ ನೆಕ್ಸಸ್ 8 ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ ಮನಸೆಳೆಯುವ ವಿಷಯಗಳಿವೆ ಎಂಬುದನ್ನು ತಿಳಿಯುವ ಆತುರ ನಿಮಗಿದ್ದಲ್ಲಿ ಮುಂದಿನ ಅಂಶಗಳತ್ತ ಗಮನಿಸಿ.

ನಿಮಗಾಗಿ ಇಂದಿನ ಲೇಖನದಲ್ಲಿ ನಾವು ನೆಕ್ಸಸ್ 8 ಐದು ರೂಮರ್‌ಗಳೊಂದಿಗೆ ಬಂದಿದ್ದು ನಿಮ್ಮ ಮನದಲ್ಲಿರುವ ಸಂದೇಹವನ್ನು ಬಗೆಹರಿಸಲಿದ್ದೇವೆ.

#1

#1

ಭಾರೀ ನಿರೀಕ್ಷೆಯನ್ನೇ ಹುಟ್ಟು ಹಾಕಿರುವ ಗೂಗಲ್ ನೆಕ್ಸಸ್ 16:10 8 ಇಂಚಿನ ಸ್ಕ್ರೀನ್‌ನೊಂದಿಗೆ ಹೊರ ಬರುವ ನಿರೀಕ್ಷೆ ಇದೆ. ಕೆಲವು ಮಾಹಿತಿಗಳ ಪ್ರಕಾರ ಇದು ಹೆಚ್ಚು ರೆಸಲ್ಯೂಶನ್‌ನ 8.9 ಇಂಚಿನ ಸ್ಕ್ರೀನ್ ಅನ್ನು ಒದಗಿಸಲಿದ್ದು 2560x1600 ಪಿಕ್ಸೆಲ್‌ಗಳಲ್ಲಿ ನಿಮ್ಮ ಕೈ ಸೇರಲಿದೆ.

#2

#2

ಇದರ ಪ್ರೊಸೆಸರ್ ಕೂಡ ಗಮನಸೆಳೆಯುವಂತಿದ್ದು ಬೇರೆಲ್ಲಾ ಟ್ಯಾಬ್ಲೇಟ್‌ಗಿಂತ ವಿಶೇಷವಾಗಿದೆ. ನೆಕ್ಸಸ್ 4 ನಂತೆ, ಸ್ನ್ಯಾಪ್‌ಡ್ರಾಗನ್ 800 ಅಥವಾ 600 ಆಯ್ಕೆ ಇದರಲ್ಲಿದೆ. ಇಂಟೆಲ್ ಆಟಮ್ ಪ್ರೊಸೆಸರ್‌ನೊಂದಿಗೆ ಈ ಟ್ಯಾಬ್ಲೇಟ್ ಬರಲಿದೆ.

#3

#3

ಇದು ಆಂಡ್ರಾಯ್ಡ್‌ನ ಹೊಸ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರಲಿದ್ದು ನೂತನ ಇತಿಹಾಸವನ್ನೇ ಬರೆಯಲಿದೆ. 4.5 ಅಥವಾ 5 ಆವೃತ್ತಿಯ ಆಂಡ್ರಾಯ್ಡ್ ಅನ್ನು ನೆಕ್ಸಸ್ ತನ್ನ ಟ್ಯಾಬ್‌ಗಳಲ್ಲಿ ಅಳವಡಿಸುವ ಚಿಂತನೆ ಇದೆ.

#4

#4

5 ಎಂಪಿ ಕ್ಯಾಮೆರಾವನ್ನು ಹಿಂಬದಿಯಲ್ಲಿ ಹೊಂದಿರುವ ಗೂಗಲ್ ನೆಕ್ಸಸ್ 8 ಮುಂಭಾಗ ಕ್ಯಾಮೆರಾವನ್ನು 1.3 ಎಂಪಿಯಲ್ಲಿ ಪಡೆಯಲಿದೆ. ಆದರೆ ಇದು ಇನ್ನೂ ನಿರ್ಧರಿತವಾಗಿಲ್ಲ.

#5

#5

ಹೆಚ್ಚಿನ ವರದಿಗಳ ಪ್ರಕಾರ ಗೂಗಲ್ ನೆಕ್ಸಸ್ 8 ಈ ಜುಲೈನಲ್ಲಿ ಬರಲಿದೆ. ಏಕೆಂದರೆ ಗೂಗಲ್ ನೆಕ್ಸಸ್ ತನ್ನ 7 ಇಂಚಿನ ಟ್ಯಾಬ್ಲೆಟ್ ಅನ್ನು ಜುಲೈನಲ್ಲೇ ಹೊರತಂದಿತ್ತು. ಆದ್ದರಿಂದಲೇ ಗೂಗಲ್ ನೆಕ್ಸಸ್ 8 ಕೂಡ ಜುಲೈ 2014 ರಲ್ಲೇ ಮಾರುಕಟ್ಟೆಗೆ ಬರಲಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X