ಗೂಗಲ್ ಆಪಲ್ ಯಾರು ಮೇಲೆ ಯಾರು ಕೆಳಗೆ?

Written By:

ಗೂಗಲ್ ಹಾಗೂ ಆಪಲ್ ನಡುವಿನ ಸಮರವು ಉತ್ಪನ್ನಗಳು, ಮಾರುಕಟ್ಟೆ ಪೈಪೋಟಿ, ಕಾನೂನು ಹೀಗೆ ನಡೆಯುತ್ತಲೇ ಇದೆ. ಗೂಗಲ್ ತನ್ನೆಲ್ಲಾ ಕಾದಾಟಗಳನ್ನು ಈಗ ಬದಿಗೊತ್ತಿದ್ದರೂ ಗೂಗಲ್ ಆಪಲ್ ಅನ್ನು ಬದಿಗೊತ್ತಿ ಇನ್ನು ನಂಬರ್ ಒನ್ ಸ್ಥಾನಕ್ಕೇರುವ ಅವಕಾಶವನ್ನು ಗಟ್ಟಿ ಮಾಡಿಕೊಳ್ಳುತ್ತಿದೆ.

ಈಗಾಗಲೇ ನಂಬರ್ ವನ್ ಸ್ಥಾನವನ್ನು ಗಟ್ಟಿ ಮಾಡಿಕೊಂಡಿರುವ ಆಪಲ್ ಅನ್ನು ಹಿಂದಿಕ್ಕಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಗೂಗಲ್ ತನ್ನೆಲ್ಲಾ ಉತ್ಪನ್ನಗಳನ್ನು ಪಣಕ್ಕೊಡ್ಡಿ ನಂಬರ್ ಒನ್ ಸ್ಥಾನಕ್ಕೆ ಏರುವ ಭದ್ರ ಬುನಾದಿಯನ್ನು ಗಟ್ಟಿ ಮಾಡಿಕೊಂಡಿದೆ. ಗೂಗಲ್‌ನ ಉತ್ಪನ್ನಕ್ಕಿರುವ $158.8 ಮೌಲ್ಯವು ನಲ್ವತ್ತು ಶೇಕಡದಷ್ಟು ಈಗ ಹೆಚ್ಚಾಗಿದೆ. ಆದರೆ ಆಪಲ್‌ನ $147.8 ಮೌಲ್ಯವು ಇಪ್ಪತ್ತು ಶೇಕಡದಷ್ಟು ಇಳಿಕೆಯಾಗಿದೆ.

ಗೂಗಲ್ ಆಪಲ್ ಯಾರು ಮೇಲೆ ಯಾರು ಕೆಳಗೆ?

ಆಪಲ್ ಹಾಗೂ ಗೂಗಲ್ ಉತ್ಪನ್ನಕ್ಕಿರುವ ಈ ವ್ಯತ್ಯಾಸವು ಗೂಗಲ್ ಉತ್ಪನ್ನಕ್ಕಿರುವ ಮಾರುಕಟ್ಟೆ ಮೌಲ್ಯವನ್ನು ಚೆನ್ನಾಗಿ ತೋರಿಸುತ್ತಿದೆ. ಆಪಲ್ ತನ್ನೆಲ್ಲಾ ಹಳೆಯ ಉತ್ಪನ್ನಗಳಲ್ಲೇ ಮಾರುಕಟ್ಟೆಯಲ್ಲಿ ಸರಿದೂಗಲು ಪ್ರಯತ್ನಿಸುತ್ತಿತ್ತು. ಆದರೆ ಗೂಗಲ್ ಹೊಸ ಹೊಸ ಅನ್ವೇಷಣೆಗಳನ್ನು ಮಾಡಿಕೊಂಡು ಮುಂದಕ್ಕೆ ಹೋಗುವ ಛಾತಿಯನ್ನು ಬೆಳೆಸಿಕೊಂಡಿತು.

ಗೂಗಲ್ ಗ್ಲಾಸ್, ಆಂಡ್ರಾಯ್ಡ್ ಆಪರೇಟಿಂಗ್ ಆಧಾರಿತ ಕಾರು ತಯಾರಿ ಹೀಗೆ ಒಂದಿಲ್ಲೊಂದು ಅನ್ವೇಷಣೆಗಳನ್ನು ಮಾಡುತ್ತಾ ಅದರಲ್ಲಿ ಯಶಸ್ಸನ್ನು ಪಡೆಯಿತು. ಇದೆಲ್ಲವೂ ಗ್ರಾಹಕರಿಗೆ ಗೂಗಲ್ ಮೇಲಿನ ಉದ್ಯಮ ಪ್ರೌಢತೆಯನ್ನು ಮೆಚ್ಚಿಕೊಳ್ಳುವಂತೆ ಮಾಡಿತು. ಆದರೆ ಆಪಲ್‌ನ ತಾನು ನಡೆದದ್ದೇ ದಾರಿ ಎಂಬ ಧೋರಣೆಯು ಮುಗ್ಗರಿಸುವಂತೆ ಮಾಡಿತು.

ಕೊನೆಗೂ ಈ ರೀತಿಯ ಮುಸುಕಿನ ಗುದ್ದಾಟ ಗೂಗಲ್ ಪ್ರೇಮಿಗಳಂತೂ ಹಬ್ಬದೂಟವಾಗಿ ಪರಿಣಮಿಸಿದೆ ಇದರಿಂದ ಗೂಗಲ್ ಉತ್ಪನ್ನಗಳಿಗೂ ಒಳ್ಳೆ ಬೇಡಿಕೆ ಬಂದಿದೆ. ಮೈಕ್ರೋಸಾಫ್ಟ್ ಹಾಗೂ ಮೆಕ್‌ಡೊನಾಲ್ಡ್ಸ್ ಟಾಪ್ ಐದು ಸ್ಥಾನದಲ್ಲಿವೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot