Google Pixel 10 ಸರಣಿ: ಬಿಡುಗಡೆಗೆ ಮುನ್ನವೇ ನಿರೀಕ್ಷೆ ಹೆಚ್ಚಿಸಿದ ಟೀಸರ್!
ಇದೇ ಆಗಸ್ಟ್ 20 ರಂದು Google ತನ್ನ ಬಹುನಿರೀಕ್ಷಿತ Pixel 10 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದೆ. ಇದಕ್ಕೂ ಒಂದು ತಿಂಗಳ ಮೊದಲು Pixel 10 ಸರಣಿಯ ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಿದೆ.! ಹೌದು, ಮುಂಬರುವ ಈ ಹೊಸ Pixel 10 ಫೋನ್‌ಗಳ ಕುರಿತು ಗ್ರಾಹಕರಲ್ಲಿ ಕುತೂಹಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ Google '10' ಸಂಖ್ಯೆಯ ಸಿಲೂಯೆಟ್ ಅನ್ನು ಪ್ರದರ್ಶಿಸಿದೆ. ಜೊತೆಗೆ Google ತನ್ನ ನಿಷ್ಠಾವಂತ ಗ್ರಾಹಕರಿಗೆ ಈಗಲೇ ವಿಶೇಷ ಕೊಡುಗೆಯನ್ನು ಸಹ ಘೋಷಿಸಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Google ಬಿಡುಗಡೆ ಮಾಡಿರುವ ಟೀಸರ್ ವೀಡಿಯೊವು '10' ಸಂಖ್ಯೆಯ ಸಿಲೂಯೆಟ್ ಹೊಂದಿದ್ದು, ಬಾಹ್ಯರೇಖೆಗೆಯಿಂದ Pixel 10 Pro ಮೂರು ಹಿಂಬದಿಯ ಕ್ಯಾಮೆರಾಗಳೊಂದಿಗೆ ಪ್ರಮುಖ ಕ್ಯಾಮೆರಾ ಬಾರ್ ಅನ್ನು ಹೊಂದಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಮೊದಲು, ಈ ಮಾದರಿಯು ಜೇಡ್ ಅಥವಾ ಮೂನ್‌ಸ್ಟೋನ್ ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದು ಊಹಿಸಲಾಗಿತ್ತು. ಈಗ ಅಬ್ಸಿಡಿಯನ್ ಮತ್ತು ಪಿಂಗಾಣಿ ಬಣ್ಣ ಆಯ್ಕೆಗಳೂ ಇರಬಹುದು ಎಂಬ ಸುಳಿವು ಸಿಕ್ಕಿದೆ.

ಇತ್ತೀಚೆಗೆ, Pixel 10 ಅನ್ನು ಅಬ್ಸಿಡಿಯನ್, ಇಂಡಿಗೊ, ಫ್ರಾಸ್ಟ್ ಮತ್ತು ಲೆಮನ್‌ಗ್ರಾಸ್‌ನಂತಹ ವಿವಿಧ ಬಣ್ಣಗಳಲ್ಲಿ ಪ್ರದರ್ಶಿಸುವ ಪತ್ರಿಕೆಯ ರೆಂಡರ್‌ಗಳು ಹೊರಬಿದ್ದಿವೆ. ಈ ಚಿತ್ರಗಳು ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ದೊಡ್ಡ ಕ್ಯಾಮೆರಾ ಬಾರ್ ಅನ್ನು ಹೊಂದಿರುವ ವಿನ್ಯಾಸವನ್ನು ದೃಢಪಡಿಸುತ್ತವೆ. ಗಮನಾರ್ಹವಾಗಿ, ಮೂಲ Pixel 10 ಮಾದರಿಯು ಮೊದಲ ಬಾರಿಗೆ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ, ಇದು ಕ್ಯಾಮೆರಾದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.

ವಿಶೇಷ ಕೊಡುಗೆಗಳು
Google ತನ್ನ ನಿಷ್ಠಾವಂತ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಆಗಸ್ಟ್ 19 ರಂದು IST ಮಧ್ಯಾಹ್ನ 12:30 ರೊಳಗೆ ನೋಂದಾಯಿಸಿಕೊಳ್ಳುವ Google Store ಚಂದಾದಾರರು Pixel 10 ಸರಣಿಯ ಫೋನ್‌ಗಳಿಗೆ ಅನ್ವಯವಾಗುವ ವಿಶೇಷ ರಿಯಾಯಿತಿಯನ್ನು ಪಡೆಯಲಿದ್ದಾರೆ. ಈ ಮೂಲಕ Google ತನ್ನ ಹೊಸ ಫೋನ್‌ಗಳನ್ನು ಖರೀದಿಸುವ ಮೊದಲ ಗ್ರಾಹಕರಿಗೆ ವಿಶೇಷ ಪ್ರಯೋಜನಗಳನ್ನು ನೀಡಲು ಯೋಜಿಸಿದೆ.
ಸಾಮಾನ್ಯವಾಗಿ, Google ತನ್ನ Pixel ಫೋನ್‌ಗಳ ಬಿಡುಗಡೆಗೆ ಬಹಳ ಮೊದಲೇ ಹಲವು ವಿವರಗಳನ್ನು ಬಹಿರಂಗಪಡಿಸುತ್ತದೆ. ಆದರೆ Pixel 10 ಸರಣಿಗೆ ಸಂಬಂಧಿಸಿದಂತೆ, ಕಂಪನಿಯು ಬಿಡುಗಡೆಗೆ ಕೇವಲ ಒಂದು ತಿಂಗಳ ಮೊದಲು ಚಿತ್ರಗಳನ್ನು ಅನಾವರಣಗೊಳಿಸುವ ಮೂಲಕ ಈ ಬಾರಿ ಒಂದು ವಿಭಿನ್ನ ತಂತ್ರವನ್ನು ಅನುಸರಿಸಿದೆ. ಹಾಗಾದರೆ, ಮುಂಬರುವ Pixel 10 ಸರಣಿಯ ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬುದನನ್ನು ಸಹ ನೋಡೋಣ ಬನ್ನಿ.
Pixel 10: ಪ್ರಮುಖ ವೈಶಿಷ್ಟ್ಯಗಳು
- ಡಿಸ್ಪ್ಲೇ: 6.3-ಇಂಚಿನ FHD+ ಫ್ಲಾಟ್ OLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್.
- ಹಿಂಬದಿ ಕ್ಯಾಮೆರಾ: 50MP ಮುಖ್ಯ, 12MP ಅಲ್ಟ್ರಾವೈಡ್, ಮತ್ತು 5x ಆಪ್ಟಿಕಲ್ ಜೂಮ್‌ನೊಂದಿಗೆ 10.8MP ಟೆಲಿಫೋಟೋ.
- ಸೆಲ್ಫಿ ಕ್ಯಾಮೆರಾ: 10.5MP.
- ಬ್ಯಾಟರಿ: 4,970mAh ಬ್ಯಾಟರಿ, 29W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ.
Pixel 10 Pro ಮತ್ತು Pixel 10 Pro XL: ಪ್ರಮುಖ ವೈಶಿಷ್ಟ್ಯಗಳು
- ಡಿಸ್ಪ್ಲೇ: 6.3-ಇಂಚಿನ (Pro) ಮತ್ತು 6.8-ಇಂಚಿನ (Pro XL) LTPO OLED ಡಿಸ್ಪ್ಲೇಗಳು, ಎರಡೂ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್.
- ಹಿಂಬದಿ ಕ್ಯಾಮೆರಾ: 50MP ಮುಖ್ಯ ಸಂವೇದಕ, 48MP ಅಲ್ಟ್ರಾವೈಡ್, ಮತ್ತು 5x ಆಪ್ಟಿಕಲ್ ಜೂಮ್‌ನೊಂದಿಗೆ 48MP ಪೆರಿಸ್ಕೋಪ್ ಲೆನ್ಸ್.
- ಮುಂಭಾಗದ ಕ್ಯಾಮೆರಾ: 42MP ಸಂವೇದಕ, ಅಲ್ಟ್ರಾ-ವಿವರವಾದ ಸೆಲ್ಫಿಗಳಿಗೆ ಸೂಕ್ತವಾಗಿರಲಿದೆ.
- ಪ್ರೊಸೆಸರ್: ಎಲ್ಲಾ ಮೂರು ಮಾದರಿಗಳು ಹೊಸ Google Tensor G5 ಚಿಪ್‌ಸೆಟ್‌ನಿಂದ ಚಾಲಿತವಾಗಿವೆ.
- ಬ್ಯಾಟರಿ: Pixel 10 Pro 4,870mAh ಬ್ಯಾಟರಿ ಮತ್ತು 29W ಚಾರ್ಜಿಂಗ್. Pixel 10 Pro XL 5,200mAh ಬ್ಯಾಟರಿ ಮತ್ತು 39W ವೇಗದ ಚಾರ್ಜಿಂಗ್. ಎರಡೂ 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ.
ಈ ಅಪ್‌ಗ್ರೇಡ್‌ಗಳೊಂದಿಗೆ, Pixel 10 ಸರಣಿಯು 2025 ರ ಅತ್ಯುತ್ತಮ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ನಿರೀಕ್ಷಿಸಲಾಗಿದೆ. Google Pixel 10 ಸರಣಿಯು ತಂತ್ರಜ್ಞಾನ ಪ್ರೇಮಿಗಳ ನಿರೀಕ್ಷೆಗಳನ್ನು ಪೂರೈಸುವುದರ ಜೊತೆಗೆ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸುವುದನ್ನು ಕಾದು ನೋಡಬೇಕಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








