Pixel 10 Pro Fold: ಬಿಡುಗಡೆಗೂ ಮುನ್ನವೇ ಫೀಚರ್ಸ್ ಮತ್ತು ಬೆಲೆ ಮಾಹಿತಿ ಸೋರಿಕೆ!
ಮುಂಬರುವ ಆಗಸ್ಟ್ 20, 2025ರಂದು ನಡೆಯಲಿರುವ "ಮೇಡ್ ಬೈ ಗೂಗಲ್" ಈವೆಂಟ್‌ನಲ್ಲಿ ಬಹುನಿರೀಕ್ಷಿತ Pixel 10 ಮತ್ತು Pixel 10 Pro ಫೋನ್‌ಗಳು ಅನಾವರಣಗೊಳ್ಳುವ ನಿರೀಕ್ಷೆ ಇದೆ. ಇದರ ಜೊತೆಗೆ Pixel 10 Pro Fold ಫೋನ್ ಕೂಡ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಹೌದು, ಈ ಕುರಿತು ಅಧಿಕೃತ ಘೋಷಣೆಗೆ ಮೊದಲೇ Pixel 10 Pro Fold ಕುರಿತ ಮುಖ್ಯ ಮಾಹಿತಿಗಳು ಆನ್‌ಲೈನಿನಲ್ಲಿ ಸೋರಿಕೆಯಾಗಿವೆ. ಈ ಬಾರಿ ಗೂಗಲ್ ತನ್ನ ಹಿಂದಿನ ಫೋಲ್ಡಬಲ್ ಮಾದರಿಗಳಲ್ಲಿ ಭಾರೀ ಸುಧಾರಣೆಗಳನ್ನು ತರುವ ಸಾಧ್ಯತೆ ಇದ್ದು, ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಡಿಸ್ಪ್ಲೇ ಮತ್ತು ವಿನ್ಯಾಸ ಸುಧಾರಣೆ
ಮುಂಬರುವ Pixel 10 Pro Fold ಫೋನ್ 8-ಇಂಚಿನ ಒಳಗಿನ ಫೋಲ್ಡಿಂಗ್ ಡಿಸ್ಪ್ಲೇ ಅನ್ನು ಮುಂದುವರಿಸುವ ಸಾಧ್ಯತೆ ಇದೆ. ಇದರಲ್ಲಿ QHD+ ರೆಸಲ್ಯೂಶನ್, 1-120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು LTPO OLED ತಂತ್ರಜ್ಞಾನವಿದೆ. ಆದರೆ, ಹೊರಗಿನ ಪರದೆಯಲ್ಲಿ ಚಿಕ್ಕದಾದರೂ ಗಮನಾರ್ಹವಾದ ಬದಲಾವಣೆ ಆಗಲಿದೆ. ಈಗ ಇದು 6.4 ಇಂಚು ಗಾತ್ರದಲ್ಲಿದ್ದು, 3000 ನಿಟ್‌ಗಳವರೆಗೆ ಗರಿಷ್ಠ ಹೊಳಪನ್ನು ನೀಡಬಹುದು. ಇದು ಹೊರಾಂಗಣದಲ್ಲಿ ಬಳಸಲು ಉತ್ತಮವಾಗಿದೆ. ಈ ಡಿಸ್ಪ್ಲೇ ಕೂಡ 120Hz ರಿಫ್ರೆಶ್ ದರವನ್ನು ಬೆಂಬಲಿಸುವ ನಿರೀಕ್ಷೆಯಿದೆ.
ಹೆಚ್ಚಿದ ದೃಢತೆಗಾಗಿ ಈ ಎರಡೂ ಡಿಸ್‌ಪ್ಲೆಗಳು ಗೋರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆಯಲಿದೆ. ಮತ್ತು ಗೂಗಲ್ ಈ ಬಾರಿ ಹಿಂಜ್ ವಿನ್ಯಾಸವನ್ನು ಹೆಚ್ಚು ಸುಗಮವಾಗಿಸುತ್ತಿದೆ ಎಂದು ಕೆಲವು ವರದಿಗಳು ಹೇಳಿವೆ. ಇದರಿಂದ Pixel 10 Pro Fold ಸಾಧನವು ಹೆಚ್ಚು ತೆಳ್ಳಗಾಗುವ ಸಾಧ್ಯತೆ ಇದೆ ಮತ್ತು ಹಿಡಿದಿಡಲು ಸಹ ಸುಲಭವಾಗಲಿದೆ ಎನ್ನಲಾಗದೆ. ಜೊತೆಗೆ, ಈ ಫೋನಿಗೆ IP68 ಜಲನಿರೋಧಕ ರೇಟಿಂಗ್ ಇರಲಿದೆ ಎಂಬ ನಿರೀಕ್ಷೆ ಇದೆ, ಇದು ಮಡಿಸಬಹುದಾದ ಗೂಗಲ್ ಫೋನಿಗೆ ಒಂದು ಹೊಸ ಮೈಲಿಗಲ್ಲಾಗಬಹುದು ಎಂದು ಹೇಳಲಾಗಿದೆ.

ಕಾರ್ಯಕ್ಷಮತೆಯಲ್ಲೂ ಸುಧಾರಣೆ!
Pixel 10 Pro Fold ಫೋನ್ ಗೂಗಲ್‌ನ ಮುಂದಿನ ಪೀಳಿಗೆಯ ಟೆನ್ಸರ್ G5 ಚಿಪ್‌ಸೆಟ್ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಇದನ್ನು ಟೈಟಾನ್ M2 ಭದ್ರತಾ ಚಿಪ್ ಜೊತೆಯಾಗಿ ಉಪಯೋಗಿಸಲಾಗುವುದು. ಇದರ ಜೊತೆಗೆ 16GB LPDDR5X RAM ಮತ್ತು ಗರಿಷ್ಠ 1TB ಆಂತರಿಕ ಸಂಗ್ರಹಣೆಯ ಆಯ್ಕೆ ಲಭ್ಯವಿರಲಿದೆ. ಫೋನ್ ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಬ್ಯಾಟರಿ ಸಾಮರ್ಥ್ಯವನ್ನು 5,015mAh ಗೆ ಹೆಚ್ಚಿಸಬಹುದು ಇದರ ಜೊತೆಗೆ 23W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವಿರುವ ಸಾಧ್ಯತೆ ಇದೆ.
ಕ್ಯಾಮೆರಾ ವ್ಯವಸ್ಥೆ ಮತ್ತು ಸಂಪರ್ಕ
ಮುಂಬರುವ Pixel 10 Pro Fold ಫೋನಿನ ಕ್ಯಾಮೆರಾ ಸಂವೇದಕಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ ಎನ್ನಲಾಗಿದೆ. ಮುಖ್ಯ ಕ್ಯಾಮೆರಾ 50MP ಸಾಮರ್ಥ್ಯದ ಸ್ಯಾಮ್‌ಸಂಗ್ GN8 ಸಂವೇದಕವನ್ನು ಹೊಂದಿರಲಿದೆ, ಇದು OIS ಮತ್ತು 10-ಬಿಟ್ HDR ರೆಕಾರ್ಡಿಂಗ್‌ಗಾಗಿ ಸಹಾಯ ಮಾಡುತ್ತದೆ. ಅಲ್ಟ್ರಾವೈಡ್ ಮತ್ತು ಟೆಲಿಫೋಟೋ ಕ್ಯಾಮೆರಾಗಳಿಗೆ ಸ್ಯಾಮ್‌ಸಂಗ್ 3J1 ಸಂವೇದಕಗಳನ್ನು ಬಳಸಲಾಗುತ್ತದೆ. ಟೆಲಿಫೋಟೋ ಲೆನ್ಸ್ 5x ಆಪ್ಟಿಕಲ್ ಮತ್ತು 20x ಡಿಜಿಟಲ್ ಜೂಮ್ ಬೆಂಬಲಿಸುತ್ತದೆ. ಇವು 4K 60fps ವೀಡಿಯೊ ಚಿತ್ರೀಕರಣಕ್ಕೆ ಬೆಂಬಲವನ್ನು ನೀಡಲಿವೆ.
ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 10.5MP ರೆಸಲ್ಯೂಶನ್ ಕ್ಯಾಮೆರಾ ಇರಲಿದೆ. ಇದು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನೂ ಹೊಂದಿದೆ. ಸಂಪರ್ಕ ವೈಶಿಷ್ಟ್ಯಗಳಲ್ಲಿ 5G SA/NSA, Wi-Fi 7, ಬ್ಲೂಟೂತ್ 5.4 ಮತ್ತು USB 3.2 Type-C ಪೋರ್ಟ್ ಸೇರಿವೆ ಎಂದು ಹೇಳಲಾಗಿದೆ.
ಬೆಲೆ ಮತ್ತು ಲಭ್ಯತೆ
Google, ಕಳೆದ ವರ್ಷ ಹೊಂದಿದ್ದ ಬೆಲೆ ಮಾದರಿಗಳನ್ನು ಮುಂದುವರಿಸುವ ನಿರೀಕ್ಷೆಯಿದೆ. ಆದರೆ, ಹೊಸದಾಗಿ ಪರಿಚಯವಾಗುವ 1TB ಆವೃತ್ತಿ ಗಮನಾರ್ಹವಾಗಿ ದುಬಾರಿಯಾಗಿದೆ. ಬೆಲೆಗಳು ಈ ಕೆಳಗಿನಂತಿವೆ:
256GB - €1,899 (ಅಂದಾಜು ₹1,90,675)
512GB - €2,029 (ಅಂದಾಜು ₹2,03,715)
1TB - €2,289 (ಅಂದಾಜು ₹2,29,820)
Pixel 10 Pro Fold ಫೋನಿನ ಮುಂಗಡ-ಆರ್ಡರ್‌ಗಳು ಆಗಸ್ಟ್ 20, 2025 ರಂದು ಪ್ರಾರಂಭವಾಗುವ ನಿರೀಕ್ಷೆಯಿದ್ದು, ಶಿಪ್ಪಿಂಗ್ ಆಗಸ್ಟ್ 28 ರಿಂದ ಆರಂಭವಾಗಬಹುದು.
Google ತನ್ನ ಮುಂಬರುವ Pixel 10 Pro Fold ಮೂಲಕ ತನ್ನ ಫೋಲ್ಡಬಲ್ ಮಾದರಿಗಳನ್ನು ಇನ್ನಷ್ಟು ಮುಂಚಿನ ಮಟ್ಟಕ್ಕೇರಿಸಲು ಗಂಭೀರ ಯತ್ನ ಮಾಡುತ್ತಿದೆ ಎಂಬುದು ಈ ಮೂಲಕ ಸ್ಪಷ್ಟವಾಗುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








