Home
ಮೊಬೈಲ್

ಗೂಗಲ್‌ Pixel 10 Pro Fold ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಮತ್ತು ಪೂರ್ಣ ವಿವರ!

ಟೆಕ್ ದೈತ್ಯ ಗೂಗಲ್‌ನ ಬಹುನಿರೀಕ್ಷಿತ Google Pixel 10 Pro Fold ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಬುಧವಾರ ರಾತ್ರಿ ಆಯೋಜಿಸಲಾಗಿದ್ದ 'ಮೇಡ್ ಬೈ ಗೂಗಲ್' ಈವೆಂಟ್‌ನಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ಏಕಕಾಲದಲ್ಲಿ Pixel 10 Pro Fold ಫೋನ್ ಅನಾವರಣಗೊಂಡಿದ್ದು, . ಈ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ತನ್ನ ಆಕರ್ಷಕ ವಿನ್ಯಾಸ ಮತ್ತು ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಟೆಕ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ. ಇದು ಗೂಗಲ್‌ನ ಫೋಲ್ಡಬಲ್ ಫೋನ್‌ಗಳ ವಿಭಾಗದಲ್ಲಿನ ಹೊಸ ಹೆಜ್ಜೆಯಾಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡುವ ಗುರಿಯನ್ನು ಹೊಂದಿದೆ. ಹಾಗಾದರೆ, ಹೊಸ Pixel 10 Pro Fold ಫೋನ್ ಹೇಗಿದೆ?, ಏನೆಲ್ಲಾ ಫೀಚರ್ಸ್ ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

Pixel 10 Pro Fold : ಪ್ರಮುಖ ವೈಶಿಷ್ಟ್ಯಗಳು
ಪುಸ್ತಕ ಶೈಲಿಯ ಮಡಿಸಬಹುದಾದ ಹೊಸ Pixel 10 Pro Fold ಎರಡು ಪರದೆಗಳನ್ನು ಹೊಂದಿದೆ. ಫೋನ್ ಮುಚ್ಚಿದಾಗ, ಬಳಕೆದಾರರಿಗೆ 6.4-ಇಂಚಿನ OLED ಕವರ್ ಸ್ಕ್ರೀನ್ ಸಿಗುತ್ತದೆ. ಇದು 1,080 x 2,364 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು 3,000 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಫೋನ್ ತೆರೆದಾಗ, 8.0-ಇಂಚಿನ ಮುಖ್ಯ OLED ಡಿಸ್ಪ್ಲೇ ದೊಡ್ಡ ಪರದೆಯ ಅನುಭವವನ್ನು ನೀಡುತ್ತದೆ. ಇದು 2,076 x 2,152 ಪಿಕ್ಸೆಲ್ಸ್ ರೆಸಲ್ಯೂಶನ್, ಮತ್ತು ಇದು ಕೂಡ 120Hz ರಿಫ್ರೆಶ್ ರೇಟ್ ಹಾಗೂ 3,000 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಈ ಎರಡು ಡಿಸ್‌ಪ್ಲೇಗಳು ತಡೆರಹಿತ ಮಲ್ಟಿಟಾಸ್ಕಿಂಗ್ ಮತ್ತು ಮನರಂಜನೆಗೆ ಸೂಕ್ತವಾಗಿವೆ.

ಕಾರ್ಯಕ್ಷಮತೆಗಾಗಿ, ಈ Pixel 10 Pro Fold ಸ್ಮಾರ್ಟ್‌ಫೋನ್ ಗೂಗಲ್‌ನ ಅತ್ಯಾಧುನಿಕ 3nm Tensor G5 ಪ್ರೊಸೆಸರ್ ಮತ್ತು ಹೆಚ್ಚುವರಿ ಭದ್ರತೆಗಾಗಿ Titan M2 ಸೆಕ್ಯುರಿಟಿ ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ. 16GB LPDDR5X RAM ನೊಂದಿಗೆ ಜೋಡಿಯಾಗಿರುವ ಈ ಪ್ರೊಸೆಸರ್ ಅತ್ಯಂತ ವೇಗದ ಮತ್ತು ಸುಗಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ ಎಂದು ಗೂಗಲ್ ತಿಳಿಸಿದೆ. ಅಲ್ಲದೆ, ಈ ಫೋನ್ 256GB, 512GB, ಮತ್ತು 1TB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್ Android 16 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ ಮತ್ತು ಗೂಗಲ್ ಏಳು ವರ್ಷಗಳ ಪ್ರಮುಖ ಆಂಡ್ರಾಯ್ಡ್ ಅಪ್‌ಡೇಟ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಗೂಗಲ್‌ Pixel 10 Pro Fold ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಮತ್ತು ಪೂರ್ಣ ವಿವರ!

ಕ್ಯಾಮೆರಾ ವಿಭಾಗದಲ್ಲಿ, Pixel 10 Pro Fold ಪೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಇದು f/1.7 ಅಪರ್ಚರ್ನ 48-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 10.5-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 10.8-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ (10x ಆಪ್ಟಿಕಲ್ ಝೂಮ್‌ನೊಂದಿಗೆ) ಸೇರಿವೆ. ಸೆಲ್ಫಿಗಾಗಿ, ಕವರ್ ಮತ್ತು ಮುಖ್ಯ ಡಿಸ್‌ಪ್ಲೇ ಎರಡರಲ್ಲೂ 10-ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಫೋನ್ ಹಲವಾರು AI-ಚಾಲಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಉದಾಹರಣೆಗೆ Gemini Live, Circle to Search, Magic Eraser, Face Unblur, ಮತ್ತು Best Take ಇದು ಫೋಟೋ ಎಡಿಟಿಂಗ್ ಮತ್ತು ಬಳಕೆದಾರರ ಅನುಭವವನ್ನು ಸುಧಾರಿಸುತ್ತದೆ.

ಬ್ಯಾಟರಿ ವಿಭಾಗದಲ್ಲಿ, Pixel 10 Pro Fold ಪೋನ್ 5,015mAh ಬ್ಯಾಟರಿಯನ್ನು ಹೊಂದಿದ್ದು, 30W ವೈರ್ಡ್ ಚಾರ್ಜಿಂಗ್ ಮತ್ತು 15W Qi2 ವೈರ್‌ಲೆಸ್ ಚಾರ್ಜಿಂಗ್ ಎರಡನ್ನೂ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ, 5G, Wi-Fi 7, ಬ್ಲೂಟೂತ್ 6, NFC, GPS ಮತ್ತು USB ಟೈಪ್-C ಸೇರಿವೆ. ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ರೇಟಿಂಗ್‌ ಹೊಂದಿದೆ. ಇನ್ನು ಈ ಫೋನ್ 155.2 × 76.3 × 10.8 mm (ಮಡಿಸಿದ) ಮತ್ತು 155.2 × 150.4 × 5.2 mm (ಬಿಚ್ಚಿದ) ಅಳತೆಗಳನ್ನು ಹೊಂದಿದೆ ಮತ್ತು 258 ಗ್ರಾಂ ತೂಗುತ್ತದೆ.

Pixel 10 Pro Fold : ಬೆಲೆ ಎಷ್ಟು?
ಬೆಲೆ ವಿಷಯಕ್ಕೆ ಬಂದರೆ, ಅಮೆರಿಕಾದಲ್ಲಿ 256GB ಮಾದರಿಯ ಬೆಲೆ $1,799 (ಸುಮಾರು ₹1,56,600) ಆಗಿದೆ. ಆದರೆ, ಭಾರತದಲ್ಲಿ ಇದನ್ನು ಒಂದೇ 256GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆ ₹1,72,999 ರೂ.ಗಳಾಗಿದ್ದು, ಮೂನ್‌ಸ್ಟೋನ್ ಮತ್ತು ಜೇಡ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರಲಿದೆ. ಒಟ್ಟಾರೆಯಾಗಿ, Google Pixel 10 Pro Fold ಫೋನ್ ಪ್ರೀಮಿಯಂ ಫೋಲ್ಡಬಲ್ ವಿಭಾಗದಲ್ಲಿ ಒಂದು ಬಲಿಷ್ಠ ಸ್ಪರ್ಧಿಯಾಗಿದೆ ಎಂಟ್ರಿ ನೀಡಿದೆ. ಇದರ ಶಕ್ತಿಶಾಲಿ ಹಾರ್ಡ್‌ವೇರ್ ಮತ್ತು ಅತ್ಯಾಧುನಿಕ ಸಾಫ್ಟ್‌ವೇರ್ ವೈಶಿಷ್ಟ್ಯಗಳು ಇದನ್ನು ನಿಜವಾಗಿಯೂ ಗಮನಾರ್ಹ ಸಾಧನವನ್ನಾಗಿ ಮಾಡಿವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Google has launched the Pixel 10 Pro Fold with an 8-inch Super Actua Flex display, premium design, and flagship specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+