Home
ಮೊಬೈಲ್

ಭಾರತದಲ್ಲಿ ಈಗ Pixel 10a ಹಾಟ್ ಟಾಪಿಕ್: Pixel 10 ಮತ್ತು Pro ಜೊತೆ ಹೋಲಿಕೆ!

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿರುವುದು Google ಪರಿಚಯಿಸಿರುವ ಇತ್ತೀಚಿನ ಹೊಸ Pixel 10 10a ಸ್ಮಾರ್ಟ್‌ಫೋನ್. ನೆನ್ನೆಯಷ್ಟೇ ದೇಶದ ಮಾರುಕಟ್ಟೆಗೆ ಕಡಿಮೆ ದರದಲ್ಲಿ ಬಿಡುಗಡೆಯಾಗಿರುವ ಈ Google Pixel 10a ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಇದೇ ಸರಣಿಯಲ್ಲಿ Google Pixel 10 ಮತ್ತು Google Pixel 10 Pro ಕೂಡ ಲಭ್ಯವಿದ್ದು, ವಿಭಿನ್ನ ಬೆಲೆ ಮತ್ತು ವೈಶಿಷ್ಟ್ಯಗಳ ಮೂಲಕ ಬೇರೆ ಬೇರೆ ಬಳಕೆದಾರರನ್ನು ಗುರಿಯಾಗಿಸಿಕೊಂಡಿವೆ. ಹಾಗಾದರೆ, ನಿಮ್ಮ ಹಣಕ್ಕೆ ಸೂಕ್ತವಾದ Pixel ಫೋನ್ ಯಾವುದು? ಇಲ್ಲಿ ಸಂಪೂರ್ಣ ವಿವರವನ್ನು ನೋಡೋಣ ಬನ್ನಿ.

ವಿನ್ಯಾಸ ಮತ್ತು ಡಿಸ್ಪ್ಲೇ: ಪ್ರೀಮಿಯಂ ಲುಕ್ ಯಾರಿಗೆ?
Pixel 10 ಮತ್ತು Pixel 10 Pro ಎರಡೂ ಗ್ಲಾಸ್ ಬಾಡಿ, ಅಲ್ಯೂಮಿನಿಯಂ ಫ್ರೇಮ್ ಮತ್ತು IP68 ರೇಟಿಂಗ್ ಹೊಂದಿವೆ. ಅಂದರೆ ನೀರು ಮತ್ತು ಧೂಳಿನಿಂದ ಉತ್ತಮ ರಕ್ಷಣೆ ಸಿಗುತ್ತದೆ. ಪ್ರೀಮಿಯಂ ಹ್ಯಾಂಡ್‌ಫೀಲ್ ಬೇಕಾದವರಿಗೆ ಈ ಎರಡೂ ಉತ್ತಮ ಆಯ್ಕೆ.
Pixel 10a ಸ್ವಲ್ಪ ಸರಳ ವಿನ್ಯಾಸ ಹೊಂದಿದೆ. ಹಿಂಭಾಗದಲ್ಲಿ ಪ್ಲಾಸ್ಟಿಕ್ ಪ್ಯಾನೆಲ್ ಬಳಕೆ ಮಾಡಲಾಗಿದೆ. ಆದರೆ, ದೈನಂದಿನ ಬಳಕೆಗೆ ಇದು ಸಾಕಷ್ಟು ಬಲಿಷ್ಠವಾಗಿದೆ.
ಮೂರು ಫೋನ್‌ಗಳಲ್ಲೂ 120Hz OLED ಡಿಸ್ಪ್ಲೇ ಇದೆ. ಆದರೆ Pixel 10 Pro ನಲ್ಲಿ LTPO ತಂತ್ರಜ್ಞಾನ ಇರುವುದರಿಂದ 1Hz ರಿಂದ 120Hz ವರೆಗೆ ಅಡಾಪ್ಟಿವ್ ರಿಫ್ರೆಶ್ ರೇಟ್ ಸಿಗುತ್ತದೆ. ಇದು ಬ್ಯಾಟರಿ ಉಳಿಸಲು ಸಹಕಾರಿ. ಜೊತೆಗೆ, ಇದರ ಬ್ರೈಟ್‌ನೆಸ್ ಮತ್ತು ರೆಸಲ್ಯೂಶನ್ ಹೆಚ್ಚು. Pixel 10a ನಲ್ಲಿ ಸ್ವಲ್ಪ ದಪ್ಪ ಬೀಗಲ್‌ಗಳು ಕಂಡುಬರುತ್ತವೆ.

ಭಾರತದಲ್ಲಿ ಈಗ Pixel 10a ಹಾಟ್ ಟಾಪಿಕ್: Pixel 10 ಮತ್ತು Pro ಜೊತೆ ಹೋಲಿಕೆ!

ಕಾರ್ಯಕ್ಷಮತೆ: ಯಾರು ವೇಗದಲ್ಲಿ ಮುಂಚೂಣಿ?
Pixel 10a ನಲ್ಲಿ Tensor G4 ಚಿಪ್ ಬಳಸಲಾಗಿದೆ. ಇದು ದೈನಂದಿನ ಬಳಕೆ, ಸೋಷಿಯಲ್ ಮೀಡಿಯಾ, ಫೋಟೋ ಎಡಿಟಿಂಗ್ ಹಾಗೂ ಸಾಮಾನ್ಯ ಗೇಮಿಂಗ್‌ಗೆ ಸಾಕಷ್ಟು ಶಕ್ತಿಯುತ.
Pixel 10 ಮತ್ತು Pixel 10 Pro ಹೊಸ ಪೀಳಿಗೆಯ ಚಿಪ್ ಹೊಂದಿರುವುದರಿಂದ ವೇಗ, AI ಕಾರ್ಯಕ್ಷಮತೆ ಮತ್ತು ಮಲ್ಟಿಟಾಸ್ಕಿಂಗ್‌ನಲ್ಲಿ ಹೆಚ್ಚು ಶಕ್ತಿಶಾಲಿ. ವಿಶೇಷವಾಗಿ Pixel 10 Pro ಹೆಚ್ಚು RAM ಹೊಂದಿರುವುದರಿಂದ ಹೆವಿ ಯೂಸರ್‌ಗಳಿಗೆ ಸೂಕ್ತ.

ಬ್ಯಾಟರಿ ಮತ್ತು ಚಾರ್ಜಿಂಗ್
Pixel 10a ಸ್ವಲ್ಪ ದೊಡ್ಡ ಬ್ಯಾಟರಿ ಹೊಂದಿದೆ. ಆದರೆ ವೈರ್‌ಲೆಸ್ ಚಾರ್ಜಿಂಗ್‌ನಲ್ಲಿ ಇದು 10W ವೇಗಕ್ಕೆ ಮಾತ್ರ ಸೀಮಿತ. Pixel 10 ಮತ್ತು 10 Pro ನಲ್ಲಿ 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಇದೆ.
ದೈನಂದಿನ ಬಳಕೆಯಲ್ಲಿ ಮೂರು ಫೋನ್‌ಗಳೂ ದಿನಪೂರ್ತಿ ಬ್ಯಾಟರಿ ಬ್ಯಾಕಪ್ ನೀಡುವ ಸಾಮರ್ಥ್ಯ ಹೊಂದಿವೆ.

ಕ್ಯಾಮೆರಾ: ಫೋಟೋಗ್ರಫಿ ಪ್ರಿಯರಿಗೆ ಯಾವುದು ಸೂಕ್ತ?
Pixel 10 Pro ಈ ಸರಣಿಯಲ್ಲೇ ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. 50MP ಮುಖ್ಯ ಕ್ಯಾಮೆರಾ, 48MP ಅಲ್ಟ್ರಾವೈಡ್ ಮತ್ತು 5x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಇದೆ. ಜೊತೆಗೆ 8K ವಿಡಿಯೋ ರೆಕಾರ್ಡಿಂಗ್ ಸೌಲಭ್ಯವೂ ಇದೆ. ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಮೊಬೈಲ್ ಫೋಟೋಗ್ರಫಿ ಆಸಕ್ತರಿಗೆ ಇದು ಅತ್ಯುತ್ತಮ ಆಯ್ಕೆ.
Pixel 10 ನಲ್ಲಿ 48MP ಮುಖ್ಯ ಕ್ಯಾಮೆರಾ, 13MP ಅಲ್ಟ್ರಾವೈಡ್ ಮತ್ತು 5x ಟೆಲಿಫೋಟೋ ಲೆನ್ಸ್ ಇದೆ. ಸಾಮಾನ್ಯ ಬಳಕೆದಾರರಿಗೆ ಇದು ಉತ್ತಮ ಸಮತೋಲನ ಆಯ್ಕೆ.
Pixel 10a ನಲ್ಲಿ 48MP ಮುಖ್ಯ ಕ್ಯಾಮೆರಾ ಮತ್ತು 13MP ಅಲ್ಟ್ರಾವೈಡ್ ಲೆನ್ಸ್ ಮಾತ್ರ ಇದೆ. ಟೆಲಿಫೋಟೋ ಲೆನ್ಸ್ ಇಲ್ಲ. ಆದರೆ 4K ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಇದೆ. ಸೆಲ್ಫಿ ಕ್ಯಾಮೆರಾದಲ್ಲಿ ಆಟೋಫೋಕಸ್ ಸೌಲಭ್ಯ ಇಲ್ಲ.

ಭಾರತದಲ್ಲಿ ಈಗ Pixel 10a ಹಾಟ್ ಟಾಪಿಕ್: Pixel 10 ಮತ್ತು Pro ಜೊತೆ ಹೋಲಿಕೆ!

ಬೆಲೆ ಮತ್ತು ಮೌಲ್ಯ: ನಿಮ್ಮ ಬಜೆಟ್‌ಗೆ ಯಾವುದು ಸೂಕ್ತ?
Pixel 10a - ₹49,999: ಕೈಗೆಟುಕುವ ದರದಲ್ಲಿ ಕ್ಲೀನ್ ಆಂಡ್ರಾಯ್ಡ್ ಅನುಭವ ಮತ್ತು ವಿಶ್ವಾಸಾರ್ಹ ಕ್ಯಾಮೆರಾ ಅನುಭವ ದೊರೆಯುತ್ತದೆ.
Pixel 10 - ₹74,999: ಪ್ರೀಮಿಯಂ ವಿನ್ಯಾಸ, ಉತ್ತಮ ಕಾರ್ಯಕ್ಷಮತೆ ಮತ್ತು ಬಹುಮುಖ ಕ್ಯಾಮೆರಾ ಇದೆ.
Pixel 10 Pro - ₹1,09,999: ಅತ್ಯುತ್ತಮ ಡಿಸ್ಪ್ಲೇ, ಪೆರಿಸ್ಕೋಪ್ ಜೂಮ್ ಮತ್ತು 8K ವಿಡಿಯೋ ಸಹಿತ ಫ್ಲ್ಯಾಗ್‌ಶಿಪ್ ಅನುಭವ.

ಅಂತಿಮ ನಿರ್ಧಾರ
ನೀವು ಸಾಮಾನ್ಯ ಬಳಕೆದಾರರಾಗಿದ್ದರೆ 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ದೊರೆಯುತ್ತಿರುವ Pixel 10a ಸಾಕಷ್ಟು ಉತ್ತಮವಾಗಿದೆ. ಉತ್ತಮ ಸಮತೋಲನ ಬೇಕಾದರೆ Pixel 10 ಸೂಕ್ತ. ಆದರೆ ಕ್ಯಾಮೆರಾ ಮತ್ತು ಪ್ರದರ್ಶನದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದರೆ Pixel 10 Pro ಅತ್ಯುತ್ತಮ ಆಯ್ಕೆ ಖರೀದಿ ಮಾಡುವ ಮೊದಲು ನಿಮ್ಮ ಬಳಕೆ ಶೈಲಿ, ಬಜೆಟ್ ಮತ್ತು ಆದ್ಯತೆಗಳನ್ನು ಸ್ಪಷ್ಟವಾಗಿ ನಿರ್ಧರಿಸಿಕೊಳ್ಳಿ. Google Pixel 10 ಸರಣಿಯಲ್ಲಿ ಎಲ್ಲರಿಗೂ ಒಂದೊಂದು ಸರಿಯಾದ ಆಯ್ಕೆ ಇದೆ ಎಂಬುದು ನಮ್ಮ ಅಭಿಪ್ರಾಯ.

Best Mobiles in India

English summary
Google’s latest Pixel 10 series — including the Pixel 10a, Pixel 10, and Pixel 10 Pro — has arrived in India, offering different features and pricing options for various users. Here’s a quick comparison to help you choose the best Pixel smartphone based on performance, camera capabilities, and overall value for money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+