ಭಾರತದಲ್ಲಿ Google Pixel 10a ಲಾಂಚ್: ಮಧ್ಯಮ ಬೆಲೆಗೆ ಪ್ರೀಮಿಯಂ ಕ್ಲಾಸ್ ಫೋನ್!
ಟೆಕ್ ದೈತ್ಯ ಗೂಗಲ್ ತನ್ನ ಜನಪ್ರಿಯ Pixel ಸರಣಿಗೆ ಹೊಸ ಸೇರ್ಪಡೆಯಾಗಿ Google Pixel 10a ಸ್ಮಾರ್ಟ್‌ಫೋನ್ ಅನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಈ ಬಹುನಿರೀಕ್ಷಿತ ಹೊಸ ಫೋನ್ ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲ, ಶಕ್ತಿಶಾಲಿ ಕ್ಯಾಮೆರಾ ಮತ್ತು ಪ್ರೀಮಿಯಂ ವಿನ್ಯಾಸವನ್ನು ಒಳಗೊಂಡಿದ್ದು, ಯುವ ಸ್ಮಾರ್ಟ್‌ಫೋನ್ ಪ್ರಿಯರ ನಿರೀಕ್ಷೆಯಂತೆಯೇ ಮಧ್ಯಮ ಬೆಲೆ ವಿಭಾಗದಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿದೆ. ಹಾಗಾದರೆ, ಹೊಸ Google Pixel 10a ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು? ಮತ್ತು ಸಂಪೂರ್ಣ ಫೀಚರ್ಸ್? ಯಾವುವು ಎಂಬುದನ್ನು ನೋಡೋಣ ಬನ್ನಿ.
Google Pixel 10a: ಭಾರತದಲ್ಲಿ ಬೆಲೆ, ಕೊಡುಗೆಗಳು ಮತ್ತು ಲಭ್ಯತೆ
ದೇಶದಲ್ಲಿ Google Pixel 10a ಸ್ಮಾರ್ಟ್‌ಫೋನ್ ಏಕೈಕ 8GB RAM + 256GB ಸ್ಟೋರೇಜ್ ಮಾದರಿಯಲ್ಲಿ ಲಭ್ಯವಾಗಿದೆ ಮತ್ತು ಇದು 49,999 ರೂ. ಬೆಲೆಯನ್ನು ಹೊಂದಿದೆ. ಆದರೆ, ಗೂಗಲ್ ಆರಂಭಿಕ ಆಫರ್‌ನಡಿ HDFC ಬ್ಯಾಂಕ್ ಕಾರ್ಡ್ ಗ್ರಾಹಕರಿಗೆ 3,000 ರೂ. ತಕ್ಷಣದ ಕ್ಯಾಶ್‌ಬ್ಯಾಕ್ ಅನ್ನು ಒದಗಿಸಿದೆ. ಇದಲ್ಲದೆ ಈ ಫೋನ್ ಮೇಲೆ 24 ತಿಂಗಳವರೆಗೆ ಬಡ್ಡಿರಹಿತ EMI ಆಯ್ಕೆ ಮತ್ತು 3,000 ರೂ. ವರೆಗೆ ಎಕ್ಸ್ಚೇಂಜ್ ಬೋನಸ್ ಸೌಲಭ್ಯ ಲಭ್ಯವಿದೆ.

ಇನ್ನು ಲಭ್ಯತೆಯ ಕುರಿತು ನೋಡುವುದಾದರೆ, ದೇಶದಲ್ಲಿ Google Pixel 10a ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ಗೂಗಲ್ ಇಂಡಿಯಾ ಆನ್‌ಲೈನ್ ಸ್ಟೋರ್‌ಗಳ ಮೂಲಕ ಪ್ರಸ್ತುತ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದ್ದು, ಅಧಿಕೃತ ಮಾರಾಟವು ಇದೇ ಮಾರ್ಚ್ 6ರಿಂದ ಆರಂಭವಾಗಲಿದೆ. ಗ್ರಾಹಕರು Google Pixel 10a ಸ್ಮಾರ್ಟ್‌ಫೋನ್ ಅನ್ನು Berry, Fog, Lavender ಮತ್ತು Obsidian ಬಣ್ಣಗಳಲ್ಲಿ ಖರೀದಿಸಲು ಅವಕಾಶವಿರಲಿದೆ.
Google Pixel 10a: ಪ್ರಮುಖ ವೈಶಿಷ್ಟ್ಯಗಳು
Google Pixel 10a ಸ್ಮಾರ್ಟ್‌ಫೋನ್ 6.3 ಇಂಚಿನ ಫುಲ್ HD+ (1080x2424 ಪಿಕ್ಸೆಲ್) pOLED Actua ಡಿಸ್ಪ್ಲೇ ಹೊಂದಿದೆ. ಈ ಡಿಸ್‌ಪ್ಲೆಯು 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 3,000 ನಿಟ್ಸ್ ಬ್ರೈಟ್‌ನೆಸ್ ನೀಡಲಿದ್ದು, ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಅನುಭವ ಇನ್ನಷ್ಟು ಸ್ಮೂತ್ ಆಗಿರುವ ಮತ್ತು ತೀವ್ರ ಸೂರ್ಯಪ್ರಕಾಶಮಾನದಲ್ಲೂ ಸ್ಪಷ್ಟ ವೀಕ್ಷಣೆಯ ಭರವಸೆ ತಂದಿದೆ. ಇದಲ್ಲದೆ, ಡಿಸ್‌ಪ್ಲೆಗೆ Corning Gorilla Glass 7i ರಕ್ಷಣೆ ಇದೆ. ಸುರಕ್ಷತೆಗಾಗಿ ಅಲ್ಯೂಮಿನಿಯಂ ಫ್ರೇಮ್ ಮತ್ತು ಧೂಳು ಮತ್ತು ನೀರಿನ ವಿರುದ್ಧ ಉತ್ತಮ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಹೊಂದಿದೆ.

Android 16 ಮತ್ತು 7 ವರ್ಷಗಳ ಅಪ್‌ಡೇಟ್ ಭರವಸೆ
Google Pixel 10a ಸ್ಮಾರ್ಟ್‌ಫೋನ್ Android 16 ಆಧಾರಿತವಾಗಿದ್ದು, ಗೂಗಲ್ ಏಳು ವರ್ಷಗಳವರೆಗೆ OS ಅಪ್‌ಡೇಟ್ ಮತ್ತು ಭದ್ರತಾ ಅಪ್‌ಡೇಟ್ ನೀಡುವುದಾಗಿ ಘೋಷಿಸಿದೆ. ದೀರ್ಘಾವಧಿಗೆ ಫೋನ್ ಬಳಸಲು ಬಯಸುವವರಿಗೆ ಇದು ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್ ಕಂಪೆನಿಯ ಸ್ವಾಮ್ಯದ Tensor G4 ಪ್ರೊಸೆಸರ್ ಹಾಗೂ Titan M2 ಸೆಕ್ಯುರಿಟಿ ಚಿಪ್ ಒಳಗೊಂಡಿದೆ. (ಕಳೆದ ವರ್ಷದ ಮಾದರಿಯಲ್ಲಿಯೂ ಇತ್ತು). ಹಾಗೂ 8GB RAM ಮತ್ತು 256GB ಆನ್‌ಬೋರ್ಡ್ ಸ್ಟೋರೇಜ್ ನಿಂದ ಸಂಯೋಜಿತವಾಗಿದೆ.
ಕ್ಯಾಮೆರಾ ವಿಭಾಗದಲ್ಲಿ, Google Pixel 10a ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ, ಇದು 25mm ಫೋಕಲ್ ಲೆಂತ್, 1/2.0-ಇಂಚಿನ ಸೆನ್ಸರ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 48-ಮೆಗಾಪಿಕ್ಸೆಲ್ (f/1.7) ಪ್ರಾಥಮಿಕ ಶೂಟರ್ ಅನ್ನು ಒಳಗೊಂಡಿದೆ, ಹಾಗೂ 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿರುವ 13-ಮೆಗಾಪಿಕ್ಸೆಲ್ (f/2.2) ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 1/3.1-ಇಂಚಿನ ಸೆನ್ಸರ್ ಇವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 13-ಮೆಗಾಪಿಕ್ಸೆಲ್ (f/2.2) ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ವಿಭಾಗದಲ್ಲಿ, Google Pixel 10a ನಲ್ಲಿ 5,100mAh ಸಾಮರ್ಥ್ಯದ ಬ್ಯಾಟರಿ ಇದೆ ಮತ್ತು ಇದು 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ 10W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಸಂಪರ್ಕಕ್ಕಾಗಿ 5G, 4G LTE, Wi-Fi 6e, ಬ್ಲೂಟೂತ್ 6, NFC, USB ಟೈಪ್-ಸಿ ಪೋರ್ಟ್, GPS, GLONASS, ಗೆಲಿಲಿಯೋ, BeiDou ಮತ್ತು QZSS ಅನ್ನು ಸಹ ಬೆಂಬಲಿಸುತ್ತದೆ .ಸಂವೇದಕಗಳ ಪಟ್ಟಿಯಲ್ಲಿ ಗೈರೊಸ್ಕೋಪ್, ಇ-ದಿಕ್ಸೂಚಿ, ಬಾರೋಮೀಟರ್, ಭೂಕಾಂತೀಯ ಸಂವೇದಕ, ವೇಗವರ್ಧಕ, ಸಾಮೀಪ್ಯ ಸಂವೇದಕ ಮತ್ತು ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿವೆ. ಇನನ್ಉ ಫೋನ್ ತೂಕ ಸುಮಾರು 183 ಗ್ರಾಂ.
ಒಟ್ಟಾರೆಯಾಗಿ, ದೀರ್ಘಾವಧಿಯ ಅಪ್‌ಡೇಟ್, ಶುದ್ಧ Android ಅನುಭವ, ಉತ್ತಮ ಕ್ಯಾಮೆರಾ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಬೆಂಬಲ ಬೇಕಾದ ಬಳಕೆದಾರರಿಗೆ Google Pixel 10a ಉತ್ತಮ ಆಯ್ಕೆಯಾಗಬಹುದು. ವಿಶೇಷವಾಗಿ ಸ್ಯಾಮ್‌ಸಂಗ್ ಮತ್ತು ಒನ್‌ಪ್ಲಸ್ ಮಾದರಿಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಈ ಫೋನ್‌ಗೆ ಇದ್ದು, ಮಧ್ಯಮ ಬೆಲೆ ವಿಭಾಗದಲ್ಲಿ ಪ್ರೀಮಿಯಂ ಅನುಭವ ಪಡೆಯಲು ಪ್ರಯತ್ನಿಸಿರುವ ಸ್ಮಾರ್ಟ್‌ಫೋನ್ ಪ್ರಿಯರಿಗೆ, ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲ ಮತ್ತು ಶಕ್ತಿಶಾಲಿ ಬ್ಯಾಟರಿಯೊಂದಿಗೆ ಇದು 2026ರ ಗಮನಾರ್ಹ ಲಾಂಚ್‌ಗಳಲ್ಲಿ ಒಂದಾಗಿ ಹೊರಹೊಮ್ಮಬಹುದು.


Click it and Unblock the Notifications








