Home
ಮೊಬೈಲ್

ಫೆ.18 ಬಿಡುಗಡೆಗೂ ಮುನ್ನ Google Pixel 10a ಚಿತ್ರಗಳು ಲೀಕ್: ಫುಲ್ ಡೀಟೇಲ್ಸ್!

ಗೂಗಲ್ ತನ್ನ ಬಹುನಿರೀಕ್ಷಿತ ಮಿಡ್‌ರೇಂಜ್ ಸ್ಮಾರ್ಟ್‌ಫೋನ್ Google Pixel 10a ಅನ್ನು ಫೆಬ್ರವರಿ 18ರಂದು ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನವೇ ಲೀಕ್ ಆದ ಹೈ-ಕ್ವಾಲಿಟಿ ರೆಂಡರ್ ಚಿತ್ರಗ Google Pixel 10aಳು ಫೋನ್‌ನ ವಿನ್ಯಾಸ, ಬಣ್ಣಗಳು ಮತ್ತು ಒಟ್ಟಾರೆ ಲುಕ್ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿವೆ. Pixel 9aಗೆ ಉತ್ತರಾಧಿಕಾರಿಯಾಗಿ ಬರುತ್ತಿರುವ ಈ ಹೊಸ ಮಾದರಿ, ಪ್ರೀಮಿಯಂ ಡಿಸೈನ್ ಮತ್ತು ಬಲಿಷ್ಠ ವೈಶಿಷ್ಟ್ಯಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಗಮನ ಸೆಳೆಯುವ ಸಾಧ್ಯತೆ ಇದೆ.

ಆಂಡ್ರಾಯ್ಡ್ ಹೆಡ್‌ಲೈನ್ಸ್ ಸೋರಿಕೆ ಮಾಡಿರುವ ವರದಿಯ ಪ್ರಕಾರ, Pixel 10a ನಾಲ್ಕು ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅವುಗಳನ್ನು ಗೂಗಲ್ Obsidian, Berry, Fog ಮತ್ತು Lavender ಎಂದು ಮಾರುಕಟ್ಟೆ ಮಾಡಲಿದೆ ಎನ್ನಲಾಗಿದೆ. ಇತ್ತೀಚೆಗೆ ಗೂಗಲ್ ತನ್ನ ಲಾಂಚ್ ದಿನಾಂಕ ಘೋಷಿಸುವ ವೇಳೆ ಲಾವೆಂಡರ್ ಬಣ್ಣವನ್ನು ಟೀಜ್ ಮಾಡಿರುವುದು ಈ ಮಾಹಿತಿಗೆ ಹೆಚ್ಚು ಪುಷ್ಠಿ ನೀಡುತ್ತದೆ. ಹಿಂದಿನ Pixel 9a ಮಾದರಿಯಲ್ಲಿ ಕಂಡುಬಂದ ಬಣ್ಣಗಳಿಗೆ ಹೋಲಿಸಿದರೆ, ಈ ಬಾರಿ ಬಣ್ಣಗಳ ಆಯ್ಕೆ ಇನ್ನಷ್ಟು ಯೌವನ ಮತ್ತು ಟ್ರೆಂಡಿ ಲುಕ್ ನೀಡುತ್ತದೆ ಎನ್ನಬಹುದು.

ಡಿಸೈನ್ ವಿಷಯಕ್ಕೆ ಬಂದರೆ, Google Pixel 10a ಫ್ಲಾಟ್ AMOLED ಡಿಸ್ಪ್ಲೇ ಹೊಂದಿದ್ದು, ಮೇಲ್ಭಾಗದಲ್ಲಿ ಮಧ್ಯಭಾಗದಲ್ಲೇ ಹೋಲ್-ಪಂಚ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ನಾಲ್ಕು ಕಡೆಗೂ ಸಮಾನ ಬೆಸೆಲ್‌ಗಳು ಫೋನ್‌ಗೆ ಕ್ಲೀನ್ ಮತ್ತು ಬ್ಯಾಲೆನ್ಸ್‌ಡ್ ಲುಕ್ ನೀಡುತ್ತವೆ. ಹಿಂಭಾಗದಲ್ಲಿ ಪಿಲ್-ಆಕಾರದ ಕ್ಯಾಮೆರಾ ಮಾಡ್ಯೂಲ್ ಇದ್ದು, ಅದರಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದು. ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಭಾಗದಲ್ಲಿ ಅಳವಡಿಸಲ್ಪಟ್ಟಿದ್ದು, ಒಟ್ಟಾರೆ ವಿನ್ಯಾಸವು Pixel 9aಗೆ ಹೋಲಿಕೆಯಾದರೂ ಸಣ್ಣ ಮಟ್ಟದ ಅಪ್‌ಗ್ರೇಡ್‌ಗಳೊಂದಿಗೆ ಹೊಸತನ ತಂದಿದೆ.

Google Pixel 10a: ನಿರೀಕ್ಷಿತ ವೈಶಿಷ್ಟ್ಯಗಳು
ವೈಶಿಷ್ಟ್ಯಗಳ ದೃಷ್ಟಿಯಿಂದ, Google Pixel 10aನಲ್ಲಿ 6.3 ಇಂಚಿನ ಫುಲ್-HD+ AMOLED ಡಿಸ್ಪ್ಲೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಡಿಸ್ಪ್ಲೇ 2,000 ನಿಟ್ಸ್‌ವರೆಗೆ ಪೀಕ್ ಬ್ರೈಟ್ನೆಸ್ ನೀಡುವ ಸಾಮರ್ಥ್ಯ ಹೊಂದಿದ್ದು, 60Hz ರಿಂದ 120Hz ವರೆಗೆ ಅಡಾಪ್ಟಿವ್ ರಿಫ್ರೆಶ್ ರೇಟ್ ಬೆಂಬಲಿಸಬಹುದು. ಇದರಿಂದ ವಿಡಿಯೋ ವೀಕ್ಷಣೆ, ಗೇಮಿಂಗ್ ಮತ್ತು ಸ್ಕ್ರೋಲಿಂಗ್ ಅನುಭವ ಇನ್ನಷ್ಟು ಸ್ಮೂತ್ ಆಗಲಿದೆ ಎಂಬ ನಿರೀಕ್ಷೆ ಇದೆ.

ಫೆ.18 ಬಿಡುಗಡೆಗೂ ಮುನ್ನ Google Pixel 10a ಚಿತ್ರಗಳು ಲೀಕ್: ಫುಲ್ ಡೀಟೇಲ್ಸ್!

Photo crediti: androidheadlines

ಕಾರ್ಯಕ್ಷಮತೆಯ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ ಗೂಗಲ್ Tensor G4 ಚಿಪ್‌ಸೆಟ್ ಮೂಲಕ ಚಾಲಿತವಾಗುವ ಸಾಧ್ಯತೆ ಇದೆ. ಈ ಪ್ರೊಸೆಸರ್ AI ಆಧಾರಿತ ಫೀಚರ್‌ಗಳು, ಕ್ಯಾಮೆರಾ ಪ್ರೊಸೆಸಿಂಗ್ ಮತ್ತು ದಿನನಿತ್ಯದ ಬಳಕೆಯಲ್ಲಿ ಉತ್ತಮ ಕಾರ್ಯಕ್ಷಮತೆ ನೀಡಲಿದೆ ಎನ್ನಲಾಗಿದೆ. ಸ್ಟೋರೇಜ್ ಆಯ್ಕೆಗಳಲ್ಲಿ Pixel 10a 128GB ಮತ್ತು 256GB ವೇರಿಯಂಟ್‌ಗಳಲ್ಲಿ ಲಭ್ಯವಾಗಬಹುದು. ಎರಡೂ ಮಾದರಿಗಳಲ್ಲೂ 8GB RAM ಸ್ಟ್ಯಾಂಡರ್ಡ್ ಆಗಿರಲಿದೆ ಎಂಬ ಮಾಹಿತಿ ಲೀಕ್‌ಗಳಿಂದ ತಿಳಿದುಬಂದಿದೆ.

ಕ್ಯಾಮೆರಾ ವಿಭಾಗದಲ್ಲೂ Pixel 10a ಭರವಸೆ ಮೂಡಿಸುತ್ತಿದೆ. ಈ ಫೋನಿನ ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹಾಗೂ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಇರಲಿದೆ ಎನ್ನಲಾಗಿದೆ. ಸೆಲ್ಫಿ ಮತ್ತು ವೀಡಿಯೋ ಕಾಲ್‌ಗಳಿಗೆ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡುವ ಸಾಧ್ಯತೆ ಇದೆ. ಗೂಗಲ್‌ನ ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನದಿಂದ ಫೋಟೋ ಮತ್ತು ವಿಡಿಯೋ ಗುಣಮಟ್ಟ ಉತ್ತಮವಾಗಿರಲಿದೆ ಎಂಬ ನಿರೀಕ್ಷೆ ಇದೆ.

ಬ್ಯಾಟರಿ ಮತ್ತು ಸಾಫ್ಟ್‌ವೇರ್ ವಿಷಯಕ್ಕೆ ಬಂದರೆ, Pixel 10aನಲ್ಲಿ 5,100mAh ಸಾಮರ್ಥ್ಯದ ಬ್ಯಾಟರಿ ಇರಬಹುದು. ಇದು ಒಂದು ದಿನಕ್ಕಿಂತ ಹೆಚ್ಚು ಬ್ಯಾಟರಿ ಬ್ಯಾಕಪ್ ನೀಡುವ ಸಾಮರ್ಥ್ಯ ಹೊಂದಿರಬಹುದು. ವಿಶೇಷವಾಗಿ, ಗೂಗಲ್ ಈ ಫೋನ್‌ಗೆ ಏಳು ವರ್ಷಗಳವರೆಗೆ ಆಂಡ್ರಾಯ್ಡ್ ಅಪ್‌ಡೇಟ್ ಮತ್ತು ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನೀಡುವ ಸಾಧ್ಯತೆ ಇದೆ. ಇದು ದೀರ್ಘಕಾಲದ ಬಳಕೆಗೆ Pixel 10a ಅನ್ನು ವಿಶ್ವಾಸಾರ್ಹ ಆಯ್ಕೆಯಾಗಿ ಮಾಡುತ್ತದೆ.

ಬೆಲೆ ವಿಚಾರದಲ್ಲಿ, Pixel 10aನ 128GB ಸ್ಟೋರೇಜ್ ವೇರಿಯಂಟ್‌ಗೆ ಸುಮಾರು $499 (ಅಂದಾಜು ₹44,000) ಬೆಲೆ ಇರಬಹುದು ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಅಧಿಕೃತ ಬೆಲೆ ಮತ್ತು ಲಭ್ಯತೆ ಲಾಂಚ್ ದಿನವೇ ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ, Google Pixel 10a ಉತ್ತಮ ಡಿಸ್ಪ್ಲೇ, ಶಕ್ತಿಶಾಲಿ ಚಿಪ್‌ಸೆಟ್, ವಿಶ್ವಾಸಾರ್ಹ ಕ್ಯಾಮೆರಾ ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲದೊಂದಿಗೆ ಮಿಡ್‌ರೇಂಜ್ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲಿ ಗೂಗಲ್‌ಗೆ ಮತ್ತೊಂದು ಬಲಿಷ್ಠ ಆಯ್ಕೆಯಾಗಿ ಹೊರಸಹೊಮ್ಮುವ ಸಾಧ್ಯತೆ ಇದೆ.

Best Mobiles in India

English summary
Google Pixel 10a is launching on February 18 and has appeared in leaked renders revealing a refreshed design, flat AMOLED display, dual rear cameras, and four new trendy color options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+