Google Pixel 10a: ನಿರೀಕ್ಷಿತ ಬಿಡುಗಡೆ ಸಮಯ, ಬೆಲೆ ಮತ್ತು ಫೀಚರ್ಸ್ ನೋಡಿ!
2025ರ ಮಾರ್ಚ್‌ನಲ್ಲಿ ಬಿಡುಗಡೆಯಾದ Google Pixel 9a ಉತ್ತಮ ಕ್ಯಾಮೆರಾ ಮತ್ತು ಕ್ಲೀನ್ ಆಂಡ್ರಾಯ್ಡ್ ಅನುಭವಕ್ಕಾಗಿ ಗಮನ ಸೆಳೆದಿತ್ತು. ಇದೀಗ ಅದರ ಮುಂದುವರಿದ ಆವೃತ್ತಿಯಾಗಿ Google Pixel 10a ಶೀಘ್ರದಲ್ಲೇ ಬಿಡುಗಡೆ ಆಗುವ ನಿರೀಕ್ಷೆಯಿದೆ. ಇತ್ತೀಚೆಗೆ ಲೀಕ್ ಆದ ರೆಂಡರ್‌ಗಳು ಮತ್ತು ವಿವರಗಳು, ಹೊಸ Google Pixel 10a ಸ್ಮಾರ್ಟ್‌ಫೋನ್ ಬಗ್ಗೆಕುತೂಹಲ ಹೆಚ್ಚಿಸಿದ್ದು, ಗೂಗಲ್ ತನ್ನ ಮಿಡ್-ರೇಂಜ್ ಪಿಕ್ಸೆಲ್ 'a' ಸರಣಿಯ ಮೂಲಕ ಭಾರತದಲ್ಲಿ ಪ್ರೀಮಿಯಂ ಅನುಭವವನ್ನು ತಲುಪಿಸುವ ಪ್ರಯತ್ನವನ್ನು ಮುಂದುವರೆಸುತ್ತಿರುವಂತೆ ಕಾಣುತ್ತಿದೆ.
Google Pixel 10a ಕುರಿತಂತೆ ಇತ್ತೀಚಿಗೆ ಹಲವಾರು ಮಾಹಿತಿಗಳು ಸೋರಿಕೆಯಾಗಿವೆ, ಮೊದಲುGoogle Pixel 10a ವಿನ್ಯಾಸದ ವಿಚಾರಕ್ಕೆ ಬಂದರೆ, ಕಂಪನಿ ಹೆಚ್ಚು ಪ್ರಯೋಗ ಮಾಡದೇ ಸರಳ ಮತ್ತು ಗುರುತಿಸಬಹುದಾದ ಪಿಕ್ಸೆಲ್ ಲುಕ್ ಅನ್ನೇ ಮುಂದುವರಿಸುವ ಸಾಧ್ಯತೆ ಇದೆ. ಲೀಕ್ ಆದ ಚಿತ್ರಗಳಲ್ಲಿ ಈ ಫೋನ್ ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಹಿಂಭಾಗದಲ್ಲಿ ಹಾರಿಜಾಂಟಲ್ ಪಿಲ್ ಆಕಾರದ ಕ್ಯಾಮೆರಾ ಐಲ್ಯಾಂಡ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಒಂದೇ ಎಲ್‌ಇಡಿ ಫ್ಲ್ಯಾಶ್ ಮತ್ತು ಹಿಂಭಾಗದ ಮಧ್ಯಭಾಗದಲ್ಲಿ ಗೂಗಲ್ ಲೋಗೋ ಇರಲಿದೆ ಎಂದು ಹೇಳಲಾಗುತ್ತಿದೆ.
Google Pixel 10a ಫೋನ್‌ನ ಫ್ರೇಮ್ ಫ್ಲಾಟ್ ಮೆಟಲ್ ವಿನ್ಯಾಸದಲ್ಲಿರಬಹುದು. ಬಲಭಾಗದಲ್ಲಿ ಪವರ್ ಬಟನ್ ಮತ್ತು ಅದರ ಕೆಳಗೆ ವಾಲ್ಯೂಮ್ ರಾಕರ್‌ಗಳನ್ನು ನೀಡುವ ನಿರೀಕ್ಷೆಯಿದೆ. ಮುಂಭಾಗದಲ್ಲಿ ಸ್ವಲ್ಪ ದಪ್ಪ ಬೇಜಲ್‌ಗಳು ಇದ್ದರೂ, ಹೋಲ್-ಪಂಚ್ ಡಿಸ್‌ಪ್ಲೇ ಮೂಲಕ ಸೆಲ್ಫಿ ಕ್ಯಾಮೆರಾವನ್ನು ಒದಗಿಸಬಹುದು. ಹಿಂದಿನ ಲೀಕ್‌ಗಳಲ್ಲಿ ನೀಲಿ ಬಣ್ಣದ ವೇರಿಯಂಟ್ ಮತ್ತು ಸ್ವಲ್ಪ ತೆಳ್ಳಗಿನ ಬೇಜಲ್‌ಗಳನ್ನೂ ತೋರಿಸಲಾಗಿದ್ದು, ಅಂತಿಮ ಆವೃತ್ತಿಯಲ್ಲಿ ಸಣ್ಣ ಬದಲಾವಣೆಗಳು ಇರಬಹುದು. ಇವೆಲ್ಲವೂ YTECHB ಪ್ರಕಟಿಸಿದ ವಿವಿಧ ಕೋನ ಹೊಸ ರೆಂಡರ್‌ಗಳ ಸೆಟ್ನಿಂದ ತಿಳಿದುಬಂದಿದೆ.

ಬಿಡುಗಡೆ ದಿನಾಂಕ ಮತ್ತು ಬೆಲೆ ವಿಷಯದಲ್ಲಿ, ಲಭ್ಯವಿರುವ ಮಾಹಿತಿಯ ಪ್ರಕಾರ Google Pixel 10a ಅನ್ನು ಮಾರ್ಚ್ 5ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಯುರೋಪ್ ಮಾರುಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ EUR 549 ಇರಬಹುದು, ಇದು ಭಾರತೀಯ ರೂಪಾಯಿಯಲ್ಲಿ ಸುಮಾರು ₹58,000 ಆಗುತ್ತದೆ. ಹೆಚ್ಚಿನ ಸ್ಟೋರೇಜ್ ಬೇಕಾದವರಿಗೆ 256GB ವೇರಿಯಂಟ್ EUR 649 (ಸುಮಾರು ₹69,000) ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. Berry, Fog, Lavender ಮತ್ತು Obsidian ಎಂಬ ಬಣ್ಣ ಆಯ್ಕೆಗಳು ಇರಬಹುದು ಎನ್ನಲಾಗಿದೆ.
ಇಷ್ಟೇ ಅಲ್ಲದೆ, ಸ್ಪೆಸಿಫಿಕೇಷನ್‌ಗಳ ವಿಚಾರಕ್ಕೆ ಬಂದರೆ, Google Pixel 10a ಸ್ಮಾರ್ಟ್‌ಫೀನ್ 6.3 ಇಂಚಿನ ಫುಲ್ ಎಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಹೊಂದಿರಬಹುದು. 120Hz ರಿಫ್ರೆಶ್ ರೇಟ್ ಮತ್ತು 2,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಈ ಫೋನ್‌ನ ಪ್ರಮುಖ ಹೈಲೈಟ್ ಆಗುವ ಸಾಧ್ಯತೆ ಇದೆ. ಕ್ಯಾಮೆರಾ ವಿಭಾಗದಲ್ಲಿ 48 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಜೊತೆಗೆ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ನೀಡಬಹುದು. ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ ಎನ್ನಲಾಗಿದೆ.
ಪರ್ಫಾರ್ಮೆನ್ಸ್ ದೃಷ್ಟಿಯಿಂದ, ಗೂಗಲ್‌ನ ಸ್ವಂತ ಟೆನ್ಸರ್ G4 ಚಿಪ್‌ಸೆಟ್ ಈ ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡಬಹುದು. ಇದರಿಂದ AI ಫೀಚರ್‌ಗಳು, ಕ್ಯಾಮೆರಾ ಪ್ರೊಸೆಸಿಂಗ್ ಮತ್ತು ದಿನನಿತ್ಯದ ಕಾರ್ಯಕ್ಷಮತೆ ಇನ್ನಷ್ಟು ಸುಧಾರಿಸಲಿದೆ ಎಂಬ ನಿರೀಕ್ಷೆಯಿದೆ. ಬ್ಯಾಟರಿ ವಿಭಾಗದಲ್ಲಿ 5,100mAh ಸಾಮರ್ಥ್ಯದ ಬ್ಯಾಟರಿ ನೀಡುವ ಮೂಲಕ, ಒಂದು ದಿನಕ್ಕಿಂತ ಹೆಚ್ಚು ಬಳಕೆಗೆ ಸಹಕಾರಿಯಾಗಬಹುದು. ಒಟ್ಟಾರೆಯಾಗಿ, Google Pixel 10a ಮಿತವಾದ ಬೆಲೆಯಲ್ಲಿ ಪ್ರೀಮಿಯಂ ಕ್ಯಾಮೆರಾ, ಶುದ್ಧ ಆಂಡ್ರಾಯ್ಡ್ ಅನುಭವ ಮತ್ತು ಗೂಗಲ್‌ನ ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲವನ್ನು ನೀಡುವ ಫೋನ್ ಆಗಿ ಹೊರಹೊಮ್ಮುವ ಲಕ್ಷಣಗಳಿವೆ.


Click it and Unblock the Notifications








