Home
ಮೊಬೈಲ್

ಭಾರತದಲ್ಲಿ ಗೂಗಲ್ ಪಿಕ್ಸೆಲ್ 2 ಬುಕ್ಕಿಂಗ್ ಶುರು!!..ಬೆಲೆ ಎಷ್ಟು ಗೊತ್ತಾ?

ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಕಡಿಮೆ ಬೆಲೆಗೆ ಬೀಕರಿಯಾಗುತ್ತಿವೆ.!!

By Bhaskar N J

ಭವಿಷ್ಯದ ಸ್ಮಾರ್ಟ್‌ಫೋನ್‌ಗಳು ಎಂದು ಕರೆಸಿಕೊಳ್ಳುತ್ತಿರುವ ಗೂಗಲ್ ಕಂಪನಿಯ ನೂತನ ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳು ನವೆಂಬರ್ ಒಂದನೇ ತಾರೀಖಿನಿಂದ ಭಾರತದಲ್ಲಿ ಮಾರಾಟಕ್ಕಿದ್ದು, ಅದೇ ತಿಂಗಳ 15 ನೇ ತಾರೀಖಿನಿಂದ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಕೈ ಸೇರಲಿವೆ.!!

ಆನ್‌ಲೈನ್ ದೈತ್ಯ ಫ್ಲಿಪ್‌ಕಾರ್ಟ್‌ ಸೇರಿದಂತೆ ಭಾರತದಾಧ್ಯಂತ 1000 ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳು ಮಾರಾಟಕ್ಕಿರಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದ್ದು, ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಕಡಿಮೆ ಬೆಲೆಗೆ ಬೀಕರಿಯಾಗುತ್ತಿವೆ.!!

ಫ್ಲಿಪ್‌ಕಾರ್ಟ್‌ನಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಲಾಗಿದ್ದು, ಹಾಗಾದರೆ, ಭಾರತದಲ್ಲಿ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು? ಫ್ಲಿಪ್‌ಕಾರ್ಟ್ ನೀಡಿರುವ ಆಫರ್‌ಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!!

ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಬೆಲೆ!?

ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಬೆಲೆ!?

ಭಾರತದಲ್ಲಿ ಪಿಕ್ಸೆಲ್ 2 ಸ್ಮಾರ್ಟ್‌ಪೋನ್‌ಗಳ ಬೆಲೆ ಸ್ವಲ್ಪ ಕಡಿಮೆಯಾಗಿದ್ದು, 64GB ವೆರಿಯಂಟ್ ಪಿಕ್ಸೆಲ್ 2 ಸ್ಮಾರ್ಟ್‌ಫೋನ್ ಬೆಲೆ 61,000 ರೂಗಳಾದರೆ, ಇದೇ ವೆರಿಯಂಟ್ ಪಿಕ್ಸೆಲ್ ಎಕ್ಸ್‌ಎಲ್ ಬೆಲೆ 73,000 ರೂ.ಗಳಾಗಿವೆ.! ಇನ್ನು 128GB ವೆರಿಯಂಟ್ ಸ್ಮಾರ್ಟ್‌ಪೋನ್‌ಗಳ ಬೆಲೆ ಕ್ರಮವಾಗಿ 70,000 ಮತ್ತು Rs. 82,000 ರೂ.ಗಳಾಗಿವೆ

ಹೆಚ್‌ಡಿಎಫ್‌ಸಿ ಗ್ರಾಹಕರಿಗೆ ಬಂಪರ್!!

ಹೆಚ್‌ಡಿಎಫ್‌ಸಿ ಗ್ರಾಹಕರಿಗೆ ಬಂಪರ್!!

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್‌ಡಿಎಫ್‌ಸಿ ಗ್ರಾಹಕರಿಗೆ ಬಂಪರ್ ಆಫರ್ ಅನ್ನು ಫ್ಲಿಪ್‌ಕಾರ್ಟ್ ಘೋಷಿಸಿದೆ.!! ಸ್ಮಾರ್ಟ್‌ಫೋನ್‌fಮೇಲೆ 8000 ರೂ. ಡಿಸ್ಕೌಂಟ್ಸ್ ಮತ್ತು 12 ಸಾವಿರ ಬೆಲೆ ಬಾಳುವ ಸೆನೈಸರ್ ಹೆಡ್‌ಸೆಟ್‌ ಅನ್ನು ಉಚಿತವಾಗಿ ನೀಡಲಿದೆ.!!

ಜಿಯೋ ಆಫರ್ ಲಭ್ಯವಿದೆ.!!

ಜಿಯೋ ಆಫರ್ ಲಭ್ಯವಿದೆ.!!

ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ 14,999 ರೂಪಾಯಿಗಳ ಬೆನಿಫಿಟ್ ಅನ್ನು ಜಿಯೋ ಗ್ರಾಹಕರು ಪಡೆಯಬಹುದಾಗಿದೆ. ಜಿಯೋ ಸ್ಟೋರ್‌ಗಳಲ್ಲಿ 5000 ರೂ.ವರೆಗೆ ಎಕ್ಸ್‌ಚೇಂಜ್ ಮತ್ತು ಸ್ಮಾರ್ಟ್‌ಫೋನ್‌ಗಳ ಜೊತೆ ಒಂದು ವರ್ಷದ ಜಿಯೋ ಅನ್‌ಲಿಮಿಟೆಡ್ ಕಾಲ್ ಮತ್ತು ಡೇಟಾ (750GB) ಸೇವೆಯನ್ನು ನೀಡುವುದಾಗಿ ಗೂಗಲ್ ಹೇಳಿತ್ತು.!!

ಖರೀದಿಸಲು ಬೆಸ್ಟ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್!!

ಖರೀದಿಸಲು ಬೆಸ್ಟ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್!!

ಅಂತರ್ಜಾಲ ದಿಗ್ಗಜನಾಗಿರುವ ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ಫೀಚರ್ಸ್ಗಳನ್ನು ಒಳಗೊಂಡಿದ್ದು, ಗುಣಮಟ್ಟದಲ್ಲಿಯೂ ಅತ್ಯುತ್ತಮವಾಗಿವೆ ಎನ್ನಬಹುದು ಹಾಗಾಗಿ, ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ ಎಕ್ಸ್‌ಎಲ್ ಖರೀದಿಸಲು ಬೆಸ್ಟ್ ಸ್ಮಾರ್ಟ್‌ಫೋನ್‌ಗಳು.!!

Best Mobiles in India

English summary
Google Pixel 2 bookings have started in India, a week ahead before the new smartphone begins shipping. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+