ಏಳು ಬಣ್ಣಗಳಲ್ಲಿ ಬರಲಿದೆ ಗೂಗಲ್ 'ಪಿಕ್ಸೆಲ್ 4'!..ಭಯದಲ್ಲಿ ಒನ್‌ಪ್ಲಸ್!
ಇದೇ ಅಕ್ಟೋಬರ್ 15 ರಂದು ಗೂಗಲ್ ಪಿಕ್ಸೆಲ್ 4 ಬಿಡುಗಡೆಗೆಯಾಗುತ್ತಿರುವುದು ನಿಮಗೆಲ್ಲಾ ತಿಳಿದಿರಬಹುದು. ಆದರೆ, ಇದೀಗ ಪಿಕ್ಸೆಲ್ 4 ಬಿಡುಗಡೆಗೂ ಮುನ್ನವೇ ಅದರ ವಿಭಿನ್ನ ಬಣ್ಣ ಆಯ್ಕೆಗಳು ಬಹಿರಂಗಗೊಂಡಿವೆ. ಈ ಹಿಂದೆ ಗೂಗಲ್ ಪಿಕ್ಸೆಲ್ 4 ಅನೇಕ ಬಾರಿ ಸೋರಿಕೆಯಾಗಿದ್ದು, ಸ್ಮಾರ್ಟ್‌ಫೋನ್ ಹೇಗೆ ಕಾಣುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ. ಇದರ ಜೊತೆಗೆ ಹೊಸ ಮಾಹಿತಿಯು ಬಹಿರಂಗಪಡಿಸಿರುವಂತೆ ಗೂಗಲ್ ಪಿಕ್ಸೆಲ್ 4 ಸ್ಮಾರ್ಟ್‌ಫೋನ್ ಏಳಕ್ಕೂ ಹೆಚ್ಚು ಬಣ್ಣಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಹೇಳಲಾಗಿದೆ.

ಹೌದು, 'ಬಾಗಶಃ ಪಿಂಕ್', 'ಸ್ಕೈ ಬ್ಲೂ', 'ನಿಜವಾದ ಹಳದಿ', 'ಸ್ವಲ್ಪ ಹಸಿರು', 'ಸ್ಪಷ್ಟ ಬಿಳಿ', 'ಜಸ್ಟ್ ಬ್ಲ್ಯಾಕ್' ಮತ್ತು 'ಓ ಸೋ ಆರೆಂಜ್' ಎಂಬ ಏಳು ಬಣ್ಣಗಳಲ್ಲಿ ಗೂಗಲ್ ಪಿಕ್ಸೆಲ್ 4 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದೆ ಎಂದು ಹಲವು ವರದಿಗಳು ತಿಳಿಸಿದೆ. ಈ ಮೊದಲಿನ ಪಿಕ್ಸೆಲ್ ಸರಣಿ ಫೋನ್ ಪಿಕ್ಸೆಲ್ 3 ಕೇವಲ ಮೂರು ಬಣ್ಣ ಆಯ್ಕೆಗಳಲ್ಲಿ ಮಾತ್ರ ಬಂದಿತ್ತು. ಆದರೆ, ಇದೀಗ ಗೂಗಲ್ ತನ್ನ ಪಿಕ್ಸೆಲ್ 4 ಫೋನಿನಲ್ಲಿ ಹೆಚ್ಚಿನ ಬಣ್ಣ ಆಯ್ಕೆಗಳನ್ನು ನೀಡುತ್ತಿದೆ. ಈ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಗೂಗಲ್ ಮುಂದಾಗಿದೆ ಎಂದು ತಿಳಿದುಬಂದಿದೆ.

ಜನಪ್ರಿಯ ಟಿಪ್‌ಸ್ಟರ್ ಇವಾನ್ ಬ್ಲಾಸ್ ಗೂಗಲ್ ಪಿಕ್ಸೆಲ್ 4 ಎಕ್ಸ್‌ಎಲ್‌ನ ರೆಂಡರ್‌ಗಳನ್ನು ಸ್ಪಷ್ಟವಾಗಿ ವೈಟ್ ಮತ್ತು ಓಹ್ ಸೋ ಆರೆಂಜ್ ನಲ್ಲಿ ಸೋರಿಕೆ ಮಾಡಿದ್ದರು. ಪಿಕ್ಸೆಲ್ 2 ಮತ್ತು ಪಿಕ್ಸೆಲ್ 3 ಸಾಧನಗಳು 'ಸ್ಪಷ್ಟವಾಗಿ ಬಿಳಿ' ಮತ್ತು 'ಜಸ್ಟ್ ಬ್ಲ್ಯಾಕ್' ಬಣ್ಣ ಆವೃತ್ತಿಗಳನ್ನು ಹೊಂದಿದ್ದು, ಇವುಗಳನ್ನು ನಾವು ಪಿಕ್ಸೆಲ್ 4 ಮತ್ತು ಪಿಕ್ಸೆಲ್ 4 ಎಕ್ಸ್‌ಎಲ್ ಎರಡರಲ್ಲೂ ನಿರೀಕ್ಷಿಸಬಹುದು. ಇನ್ನುಳಿದ ಬಣ್ಣಗಳ ಸೋರಿಕೆಯು ಆಲಿಕ್ಸಾರ್ ಮೂಲಕ ಆಗಿದೆ. ಯುಕೆ ಸ್ಟೋರ್ ಮೊಬೈಲ್ ಫನ್ ಮಾಹಿತಿಯ ಆಧಾರದ ಮೇಲೆ ಏಳು ವಿಭಿನ್ನ ಬಣ್ಣ ರೂಪಾಂತರಗಳನ್ನು ವರದಿ ಮಾಡಿದೆ.

ಈಗಾಗಲೇ ಹಲವು ವದಂತಿಗಳು ಬಹಿರಂಗಪಡಿಸಿರುವಂತೆ, ಪಿಕ್ಸೆಲ್ 4 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 SoC ಮತ್ತು 5.7 ಇಂಚಿನ HD ಒಎಲ್ಇಡಿ ಡಿಸ್ಪ್ಲೇ 90Hz ಪ್ರದರ್ಶನವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನು 6ಜಿಬಿ RAM ಸಾಮರ್ಥ್ಯ ಹೊಂದಿದ್ದು, 64GB ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಇರಲಿದೆ. ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್ ಸೆನ್ಸಾರ್ ಹೊಂಡಿರುವ ಡ್ಯುಯೆಲ್ ಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್ ಟೆಲಿಫೋಟೋ ಲೆನ್ಸ್ ಕ್ಯಾಮೆರಾ ಇರಲಿದೆ ಎಂದು ಹೇಳಲಾಗಿದೆ.

ಪಿಕ್ಸೆಲ್ 4 ಸ್ಮಾರ್ಟ್ಫೋನಿನ ಬಗೆಗೆ ಸೋರಿಕೆಯಾದ ಬೆಲೆಯ ಮಾಹಿತಿ ಪ್ರಕಾರ 64GB ವೇರಿಯಂಟ್ ಬೆಲೆಯ ಫೋನಿನ ಬೆಲೆ 56,000 ರೂ.ಗಳಿಂದ ಆರಂಭವಾಗಲಿದೆ ಎನ್ನಲಾಗಿದೆ. 128GB ವೇರಿಯಂಟ್ ಸ್ಮಾಟ್ಪೋನ್ ಬೆಲೆ 64,000 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ ಸ್ಮಾರ್ಟ್ಪೋನ್ನಲ್ಲಿ 2,800mAh ಬ್ಯಾಟರಿ ಶಕ್ತಿ , ಸ್ಟಿತಿಯೋ ಸ್ಪೀಕರ್ಸ್, ಮೋಷನ್ ಸೆನ್ಸ್, ಇತ್ತೀಚಿನ ಫೇಸ್ ಅನ್ಲಾಕ್ ಫೀಚರ್, ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿರುವುದನ್ನು ನಾವು ನೋಡಬಹುದು.


Click it and Unblock the Notifications








