Google Pixel 8a ಮೇಲೆ ಭಾರಿ ರಿಯಾಯಿತಿ, ಇಷ್ಟು ಕಡಿಮೆ ಬೆಲೆಗೆ ಇದೇ ಮೊದಲು!
ಅತ್ಯಾಧುನಿಕ AI ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ಫೀಚರ್ಸ್ ಹೊಂದಿರುವ Google Pixel 8a ಸ್ಮಾರ್ಟ್‌ಫೋನ್ ಖರೀದಿಸಬೇಕೆ?..ಹಾಗಾದರೆ, ಈ ಬೆಸ್ಟ್ ಟೈಮ್ ಅನ್ನು ಮಿಸ್ ಮಾಡಿಕೊಳ್ಳಲೇಬೇಡಿ. ಏಕೆಂದರೆ, ಭಾರತದಲ್ಲಿ Google Pixel 8a ಸ್ಮಾರ್ಟ್‌ಫೋನ್ 52,999 ರೂಪಾಯಿಗಳಿಗೆ ಬಿಡುಗಡೆಯಾಗಿತ್ತು, ಆದರೆ ಈಗ ನೀವು ಅದನ್ನು ಫ್ಲಿಪ್‌ಕಾರ್ಟ್‌ನಲ್ಲಿ 31,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಪಡೆಯಬಹುದು. ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಅದ್ಭುತ ರಿಯಾಯಿತಿಗಳನ್ನು ಬಳಸಿಕೊಂಡು ನೀವು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.! ಈ ಆಕರ್ಷಕ ಆಫರ್‌ಗಳು ಮತ್ತು ಫೋನ್‌ನ ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಕೊಡುಗೆಗಳು
Google Pixel 8a ಯ 128GB ಮಾದರಿಯು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ 37,999 ರೂಪಾಯಿಗಳಿಗೆ ಲಭ್ಯವಿದೆ. ಇದು ಈಗಾಗಲೇ 15,000 ರೂಪಾಯಿಗಳ ನೇರ ರಿಯಾಯಿತಿಯನ್ನು ಒಳಗೊಂಡಿದೆ. ಇದರ ಜೊತೆಗೆ, ನೀವು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ EMI ವಹಿವಾಟು ನಡೆಸಿದರೆ, ಹೆಚ್ಚುವರಿಯಾಗಿ 7,000 ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಈ ಎಲ್ಲಾ ಕೊಡುಗೆಗಳನ್ನು ಸೇರಿಸಿದರೆ, ಫೋನ್‌ನ ಅಂತಿಮ ಬೆಲೆ ಕೇವಲ 30,999 ರೂಪಾಯಿಗಳಾಗಲಿದೆ.
ಅಲ್ಲದೆ, ಫ್ಲಿಪ್‌ಕಾರ್ಟ್ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ 6 ತಿಂಗಳವರೆಗೆ ಉಚಿತ EMI ಆಯ್ಕೆಯನ್ನೂ ನೀಡುತ್ತಿದೆ.ನೀವು ನಿಮ್ಮ ಹಳೆಯ ಫೋನ್ ಅನ್ನು ಬದಲಾಯಿಸಲು ಬಯಸಿದರೆ, ವಿನಿಮಯ ಆಫರ್ ಮೂಲಕ 33,000 ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು. ಈ ವಿನಿಮಯದ ಮೌಲ್ಯವು ನಿಮ್ಮ ಹಳೆಯ ಫೋನ್‌ನ ಸ್ಥಿತಿ ಮತ್ತು ಮಾದರಿಯನ್ನು ಅವಲಂಬಿಸಿರುತ್ತದೆ. ಇಷ್ಟೆಲ್ಲಾ ರಿಯಾಯಿತಿಗಳನ್ನು ಪರಿಗಣಿಸಿದರೆ, Google Pixel 8a ಅನ್ನು ಕಡಿಮೆ ಬೆಲೆಗೆ ಖರೀದಿಸಲು ಇದು ಸೂಕ್ತ ಸಮಯ.
Google Pixel 8a: ಪ್ರಮುಖ ವೈಶಿಷ್ಟ್ಯಗಳು
ಉತ್ತಮ ಕ್ಯಾಮೆರಾ ಸಾಮರ್ಥ್ಯ, ಸುಗಮ ಬಳಕೆದಾರ ಅನುಭವ ಮತ್ತು ಅತ್ಯಾಧುನಿಕ AI ವೈಶಿಷ್ಟ್ಯಗಳನ್ನು ಬಯಸುವವರಿಗೆ Google Pixel 8a ಸ್ಮಾರ್ಟ್‌ಫೋನ್ ಒಂದು ಉತ್ತಮ ಆಯ್ಕೆಯಾಗಿದ್ದು, ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್‌ನಲ್ಲಿ ಪ್ಯಾಕ್ ಮಾಡಲಾದ ಶಕ್ತಿಶಾಲಿ ಫೋನ್ ಎಂದು ಹೇಳಬಹುದು. ಪ್ರಮುಖ ಫೀಚರ್ಸ್ ನೋಡುವುದಾದರೆ, Google Pixel 8a ಪೋನ್ 6.1-ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಮತ್ತು 2,000 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ, ಡಿಸ್‌ಪ್ಲೇ ಹೆಚ್ಚು ಬಾಳಿಕೆ ಬರುತ್ತದೆ.

ಕಾರ್ಯಕ್ಷಮತೆಗಾಗಿ, , ಈ ಸ್ಮಾರ್ಟ್‌ಫೋನ್ ಗೂಗಲ್‌ನ ಶಕ್ತಿಯುತ ಟೆನ್ಸರ್ G3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. 8GB LPDDR5x RAM ಮತ್ತು 128GB ಅಥವಾ 256GB UFS 3.1 ಸ್ಟೋರೇಜ್ ಆಯ್ಕೆಗಳೊಂದಿಗೆ ಇದು ಲಭ್ಯವಿದೆ. ಫೋಟೋಗ್ರಫಿ ಇಷ್ಟಪಡುವವರಿಗೆ ಈ ಫೋನ್ ನಿಜಕ್ಕೂ ಒಂದು ವರದಾನ. ಇದು 64MP ಪ್ರೈಮರಿ ಕ್ಯಾಮೆರಾ ಮತ್ತು 13MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫಿಗಾಗಿ, 13MP ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ವಿಬಾಗದಲ್ಲಿ, ಈ ಫೋನ್ 4,492mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 72 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ನೀಡುತ್ತದೆ ಎಂದು ಗೂಗಲ್ ಹೇಳಿದೆ. ಒಟ್ಟಾರೆಯಾಗಿ, ಹೊಸ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಈ ರಿಯಾಯಿತಿಗಳು Google Pixel 8a ಫೋನ್ ಅನ್ನು ಒಂದು ಆಕರ್ಷಕ ಆಯ್ಕೆಯನ್ನಾಗಿ ಮಾಡಿವೆ. ಈ ಕೊಡುಗೆಗಳನ್ನು ಬಳಸಿಕೊಂಡು ನಿಮ್ಮ ಹಳೆಯ ಫೋನ್ ಅನ್ನು ಅಪ್‌ಗ್ರೇಡ್ ಮಾಡಲು ಇದು ಸರಿಯಾದ ಸಮಯ ಎನ್ನಬಹುದು.


Click it and Unblock the Notifications








