Google Pixel 9, Pixel 9 Pro XL: ಇಂದಿನಿಂದ ಸೇಲ್ ಶುರು; 4,000 ಅಗ್ಗ.. 2,000 ಡಿಸ್ಕೌಂಟ್!
ಗೂಗಲ್ ಇತ್ತೀಚೆಗೆ ತನ್ನ ಬಹು ನಿರೀಕ್ಷಿತ ಗೂಗಲ್ ಪಿಕ್ಸೆಲ್ 9 (Google Pixel 9) ಸರಣಿಯನ್ನು ಬಿಡುಗಡೆ ಮಾಡಿದೆ. ಪಿಕ್ಸೆಲ್ 9 ಸರಣಿಯಲ್ಲಿ Pixel 9, Pixel 9 Pro, Pixel 9 Pro XL ಮತ್ತು Pixel 9 Pro ಫೋಲ್ಡ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅಂದಹಾಗೆ, ಇಂದಿನಿಂದ (ಆಗಸ್ಟ್ 22) Google Pixel 9 ಮತ್ತು Pixel 9 Pro XL ಫೋನ್‌ಗಳು ಅಧಿಕೃತವಾಗಿ ಮಾರಾಟ ಪ್ರಾರಂಭಿಸಲಿವೆ. ಈ ಫೋನಿನ ಬೆಲೆ, ಆಫರ್‌ಗಳನ್ನು ತಿಳಿಯೋಣ ಬನ್ನಿ.
ಗೂಗಲ್ ಪಿಕ್ಸೆಲ್ 9 ಸರಣಿಯ ನಾಲ್ಕು ಫೋನ್‌ಗಳನ್ನು ಆಕರ್ಷಕ ವಿನ್ಯಾಸ ಮತ್ತು ಎಐ (AI) ತಂತ್ರಜ್ಞಾನ ಆಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ. ಇಷ್ಟೇ ಅಲ್ಲ, ಉತ್ತಮ ಕ್ಯಾಮೆರಾ, ಕಾರ್ಯಕ್ಷಮತೆ, ದೀರ್ಘ ಬ್ಯಾಟರಿ ಮತ್ತು ಮೃದುವಾದ ಆಂಡ್ರಾಯ್ಡ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು ಗೂಗಲ್ ಕಂಪನಿಯ ಹೊಸ ಫೋನನ್ನು ಖರೀದಿಸಲು ಬಯಸಿದರೆ, ಇದು ಸೂಕ್ತವಾದ ಸಮಯವಾಗಿದೆ. ಈ ಫೋನ್‌ಗಳು ಇಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್, ಕ್ರೋಮಾ, ರಿಲಯನ್ಸ್ ಡಿಜಿಟಲ್ ತಾಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಗೂಗಲ್ ಪಿಕ್ಸಲ್ 9 ಮತ್ತು ಪಿಕ್ಸಲ್ 9 ಪ್ರೊ XL ಬೆಲೆ
ಗೂಗಲ್ ಪಿಕ್ಸಲ್ 9 ಆರಂಭಿಕ ಬೆಲೆ = 74,999 ರೂ.
ಗೂಗಲ್ ಪಿಕ್ಸಲ್ 9 ಪ್ರೊ XL ಆರಂಭಿಕ ಬೆಲೆ = 1,14,999 ರೂ.
ಗೂಗಲ್ ಪಿಕ್ಸೆಲ್ 9 ಫೋನ್ 12GB ಮತ್ತು 256GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ ಬೆಲೆ 79,999 ರೂ. ಆಗಿದೆ. ಫ್ಲಿಪ್‌ಕಾರ್ಟ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ನಾನ್-ಇಎಂಐ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಂದ ಇಎಂಐ ವಹಿವಾಟುಗಳ ಮೇಲೆ 4,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. 6,667 ರೂ.ಗಳ ಮಾಸಿಕ ನೋ ಕಾಸ್ಟ್ ಇಎಂಐ ಜೊತೆಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ 1,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು.
ಗೂಗಲ್ ಪಿಕ್ಸೆಲ್ ಪ್ರೊ XL ಫೋನಿನ ಬೆಲೆ 1,39,999 ರೂ. ಇದೆ. ಕಂಪನಿಯು ಹಲವು ಡಿಸ್ಕೌಂಟ್ ಮತ್ತು ಬ್ಯಾಂಕ್ ಆಫರ್‌ಗಳನ್ನು ನೀಡುತ್ತಿದೆ. ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಇಎಂಐ ಅಲ್ಲದ ಮತ್ತು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇಎಂಐ ವಹಿವಾಟುಗಳೊಂದಿಗೆ ಈ ಆಫರ್‌ಗಳನ್ನು ಪಡೆಯಬಹುದು. ಇದಲ್ಲದೇ, ಫ್ಲಿಪ್‌ಕಾರ್ಟ್ 11,667 ರೂ.ಗಳ ಮಾಸಿಕ ಇಎಂಐಯೊಂದಿಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ 2,000 ರೂ.ಗಳ ಡಿಸ್ಕೌಂಟ್ ನೀಡುತ್ತಿದೆ.
ಗೂಗಲ್ ಪಿಕ್ಸೆಲ್ 9 ಫೀಚರ್ಸ್
ಈ ಪೋನ್ 6.3 ಇಂಚಿನ ಸೂಪರ್ ಆಕ್ಟುವಾ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 1080x2424 ರೆಸಲ್ಯೂಶನ್, 2700 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದೆ. ಇದು ಟೆನ್ಸರ್ ಜಿ4 ಪ್ರೊಸೆಸರ್, 12GB RAM, 256GB ಸ್ಟೋರೇಜ್ ಒಳಗೊಂಡಿದೆ. ಇದರಲ್ಲಿ 50MP ಪ್ರಾಥಮಿಕ (OIS), 48MP ಅಲ್ಟ್ರಾ-ವೈಡ್ ಮತ್ತು 10.5MP ಫ್ರಂಟ್ ಕ್ಯಾಮೆರಾ ಇದೆ. 4700mAh ಬ್ಯಾಟರಿ ಮತ್ತು 45W ಚಾರ್ಜಿಂಗ್ ಸೌಲಭ್ಯವಿದೆ.
ಗೂಗಲ್ ಪಿಕ್ಸೆಲ್ ಪ್ರೊ XL ಫೀಚರ್ಸ್
ಇದು 6.8 ಇಂಚಿನ ಸೂಪರ್ ಆಕ್ಟುವಾ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, 1344x2992 ರೆಸಲ್ಯೂಶನ್, 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದೆ. ಇದು ಟೆನ್ಸರ್ ಜಿ4 ಪ್ರೊಸೆಸರ್,16GB RAM, 256GB ಮತ್ತು 512GB ಸ್ಟೋರೇಜ್ ಒಳಗೊಂಡಿದೆ. ಇದರಲ್ಲಿ 50MP ಪ್ರಾಥಮಿಕ (OIS), 48MP ಅಲ್ಟ್ರಾ-ವೈಡ್, 48MP ಟೆಲಿಫೋಟೋ(OIS) ಮತ್ತು 42MP ಫ್ರಂಟ್ ಕ್ಯಾಮೆರಾ ಇದೆ. 5060mAh ಬ್ಯಾಟರಿ ಮತ್ತು 45W ಚಾರ್ಜಿಂಗ್ ಸೌಲಭ್ಯವಿದೆ.


Click it and Unblock the Notifications








