ಇಂದು Google Pixel 9 Pro Fold ಸೇಲ್: ದುಬಾರಿ ಬೆಲೆ.. 20,000ಕ್ಕಿಂತ ಹೆಚ್ಚು ಆಫರ್!
ಗೂಗಲ್ ಫೋನ್ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಇದೆ. ಗೂಗಲ್ ಕಂಪನಿಯ ಈ ಪವರ್‌ಫುಲ್ ಫೋನನ್ನು ಭಾರೀ ರಿಯಾಯಿತಿಯೊಂದಿಗೆ ಖರೀದಿಸುವ ಅವಕಾಶವಿದೆ. ನೀವು ಮೊದಲ ದಿನವೇ ಈ ಫೋನ್ ಖರೀದಿಸಿದರೆ, ಒಟ್ಟು 20 ಸಾವಿರಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ಹೌದು, ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ (Google Pixel 9 Pro Fold) ಫೋನ್ ಇಂದು (ಸೆಪ್ಟೆಂಬರ್ 4) ಮಧ್ಯಾಹ್ನ 12 ಗಂಟೆಗೆ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಕಂಪನಿಯು ಹಲವು ಆಫರ್‌ಗಳನ್ನು ಘೋಷಿಸಿದೆ.
ಟೆಕ್ ದೈತ್ಯ ಗೂಗಲ್ ಹೊಸದಾಗಿ ಗೂಗಲ್ ಪಿಕ್ಸೆಲ್ 9 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಕಂಪನಿಯ ಮೊದಲ ಫೋಲ್ಡ್ ಮಾದರಿಯ ಮೊಬೈಲ್ ಆಗಿದೆ. ಇದು ಗೂಗಲ್ Tensor G4 ಚಿಪ್‌ಸೆಟ್ ಪ್ರೊಸೆಸರ್, 48 ಮೆಗಾಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಮತ್ತು 4,650mAh ಬ್ಯಾಟರಿಯನ್ನು ಹೊಂದಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಫೋನಿನ ಬೆಲೆ
ಕಂಪನಿಯು ಹೊಸ ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಫೋನನ್ನು ಕೇವಲ 16GB ಮತ್ತು 256GB RAM ಸ್ಟೋರೇಜ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಎರಡು ಬಣ್ಣಗಳಲ್ಲಿ ಮಾರಾಟವಾಗಲಿದೆ. ನೀವು ಅಬ್ಸಿಡಿಯನ್ (ಬೂದು) ಮತ್ತು ಪಿಂಗಾಣಿ (ಆಫ್-ವೈಟ್) ಬಣ್ಣದಲ್ಲಿ ಖರೀದಿಸಬಹುದು. ಇದರ ಬೆಲೆ 1,72,999 ರೂ. ಆಗಿದೆ.
ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಂಐ, ಪೂರ್ಣ ಸ್ವೈಪ್ ಮತ್ತು ಡೆಬಿಟ್ ಕಾರ್ಡ್ (ಇಎಂಐ) ಪಾವತಿ ಮೇಲೆ 11,000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ 13,500 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ಇದೆ. ಈ ಸ್ಮಾರ್ಟ್‌ಫೋನ್ ಅನ್ನು ನೀವು ಫ್ಲಿಪ್‌ಕಾರ್ಟ್, ಕ್ರೋಮಾ ಮತ್ತು ರಿಲಯನ್ಸ್ ಡಿಜಿಟಲ್ ಮೂಲಕ ಮಾರಾಟವಾಗಲಿದೆ. ಇಂದು (ಸೆಪ್ಟೆಂಬರ್ 4) ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿದೆ.
ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಫೀಚರ್ಸ್
ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಮೊಬೈಲ್ 6.3 ಇಂಚಿನ ಕವರ್ (ಹೊರ) ಡಿಸ್ಪ್ಲೇ ಮತ್ತು 8 ಇಂಚಿನ OLED ಸೂಪರ್ ಆಕ್ಟುವಾ ಫ್ಲೆಕ್ಸ್ (ಮುಖ್ಯ) ಒಳಗಿನ ಡಿಸ್ಪ್ಲೇ ಹೊಂದಿದೆ. ಎರಡೂ ಡಿಸ್ಪ್ಲೇಗಳು 120Hz ರಿಫ್ರೆಶ್ ದರ ಮತ್ತು 2,700 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತವೆ. ಹೊರ ಡಿಸ್ಪ್ಲೇ ಮತ್ತು ಹಿಂಬದಿಯಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಇದೆ.

ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಸ್ಮಾರ್ಟ್‌ಫೋನ್ ಗೂಗಲ್ Tensor G4 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಬೆಂಬಲ ಇದೆ. ಈ ಫೋನ್ 16GB ಮತ್ತು 256GB RAM ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ. ಪಿಕ್ಸೆಲ್ 9 ಪ್ರೊ ಫೋಲ್ಡ್ ನೀರಿನ ಪ್ರತಿರೋಧಕ್ಕಾಗಿ IPX8 ರೇಟಿಂಗ್ ಸಹ ಹೊಂದಿದೆ.
50MP ಮುಖ್ಯ ಕ್ಯಾಮೆರಾ, 4,650mAh ಬ್ಯಾಟರಿ
ಈ ಹೊಸ ಪಿಕ್ಸಲ್ 9 ಪ್ರೊ ಫೋಲ್ಡ್ ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದು 50 ಮೆಗಾಪಿಕ್ಸಲ್ ಮುಖ್ಯ ಕ್ಯಾಮೆರಾ, 10.8 ಮೆಗಾಪಿಕ್ಸಲ್ ಸೆಕೆಂಡರಿ ಕ್ಯಾಮೆರಾ ಮತ್ತು 10.5 ಮೆಗಾಪಿಕ್ಸಲ್ ತೃತೀಯ ಕ್ಯಾಮೆರಾ ಪಡೆದಿದೆ.ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 10 ಮೆಗಾಪಿಕ್ಸಲ್ ಸಾಮರ್ಥ್ಯದ ಎರಡು ಕ್ಯಾಮೆರಾ ಇದೆ. ಈ ಫೋನ್ 4,650mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W ವೈರ್ಡ್ ಚಾರ್ಜಿಂಗ್ ಮತ್ತು Qi ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.


Click it and Unblock the Notifications








