Google: ನಾಳೆ ಈ ದೈತ್ಯ ಫೋನ್ ಸೇಲ್: 11 ಸಾವಿರ ಅಗ್ಗ.. ಬೆಲೆ ಎಷ್ಟು?
ಟೆಕ್ ದೈತ್ಯ ಗೂಗಲ್ (Google) ಇತ್ತೀಚೆಗೆ ಗೂಗಲ್ ಪಿಕ್ಸೆಲ್ 9 ಸರಣಿಯನ್ನು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಗೂಗಲ್ ಪಿಕ್ಸಲ್ 9, ಗೂಗಲ್ ಪಿಕ್ಸಲ್ 9 ಪ್ರೊ, ಗೂಗಲ್ ಪಿಕ್ಸಲ್ 9 XL ಸ್ಮಾರ್ಟ್‌ಫೋನ್‌ಗಳ ಜೊತೆಗೆ ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ (Google Pixel 9 Pro Fold) ಫೋನನ್ನು ಬಿಡುಗಡೆ ಮಾಡಿದೆ. ಇದು ಗೂಗಲ್‌ನ ಮೊದಲ ಫೋಲ್ಡ್ ಮಾದರಿಯ ಫೋನ್ ಆಗಿದೆ. ಅಂದಹಾಗೆ, ಈ ದುಬಾರಿ ಮೊಬೈಲ್ ನಾಳೆ (ಸೆಪ್ಟೆಂಬರ್ 4) ಭಾರತದಲ್ಲಿ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.
ಗೂಗಲ್ ಕಂಪನಿಯು ಪಿಕ್ಸಲ್ 9 ಪ್ರೊ ಫೋಲ್ಡ್ ಫೋನನ್ನು ಕೇವಲ 16GB ಮತ್ತು 256GB RAM ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ 48 ಮೆಗಾಪಿಕ್ಸಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಗೂಗಲ್ Tensor G4 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಒಳಗೊಂಡಿದೆ. ಇದು 4,650mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಪಡೆದುಕೊಂಡಿದೆ. ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಫೋನಿನ ಬೆಲೆ ಮತ್ತು ಆಫರ್
ಗೂಗಲ್ ಪಿಕ್ಸೆಲ್ 9 ಪ್ರೊ ಫೋಲ್ಡ್ ಭಾರತದಲ್ಲಿ ನಾಳೆ (ಸೆಪ್ಟೆಂಬರ್ 4) ಮಧ್ಯಾಹ್ನ 12 ಗಂಟೆಗೆ ಮಾರಾಟವಾಗಲಿದೆ. ಇದರ 16GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 1,72,999 ರೂ. ಇದೆ. ನೀವು ಫ್ಲಿಪ್‌ಕಾರ್ಟ್, ಕ್ರೋಮಾ ಮತ್ತು ರಿಲಯನ್ಸ್ ಡಿಜಿಟಲ್ ಮೂಲಕ ಈ ಫೋನನ್ನು ಖರೀದಿಸಬಹುದು.
ಇದು ಎರಡು ಬಣ್ಣಗಳಲ್ಲಿ ಬರುತ್ತದೆ. ನೀವು ಅಬ್ಸಿಡಿಯನ್ (ಬೂದು) ಮತ್ತು ಪಿಂಗಾಣಿ (ಆಫ್-ವೈಟ್) ಕಲರ್‌ನಲ್ಲಿ ಕೊಳ್ಳಬಹುದು. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಂಐ ಮತ್ತು ಪೂರ್ಣ ಸ್ವೈಪ್ ಮತ್ತು ಡೆಬಿಟ್ ಕಾರ್ಡ್ (ಇಎಂಐ) ಪಾವತಿ ಮೇಲೆ 11,000 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ: ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಫೋನ್ ಎರಡು ಡಿಸ್ಲ್ಪೇಯನ್ನು ಹೊಂದಿದೆ. ಇದರ ಮುಖ್ಯ ಡಿಸ್ಲ್ಪೇ 8 ಇಂಚು ಇದೆ. ಇದು 2152 x 2076 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಇದು OLED ಸೂಪರ್ ಆಕ್ಚುವಲ್ ಫ್ಲೆಕ್ಸ್ ಜೊತೆಗೆ 120Hz ರಿಫ್ರೆಶ್ ರೇಟ್ ಪಡೆದಿದೆ. ಇನ್ನು ಕವರ್ ಸ್ಕ್ರೀನ್ 6.3 ಇಂಚಿನ OLED ಡಿಸ್ಲ್ಪೇಯನ್ನು ಹೊಂದಿದೆ. ಇದು 1080 x 2424 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್ ಪಡೆದಿದೆ.
ಪ್ರೊಸೆಸರ್: ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಫೋನ್ ಗೂಗಲ್ Tensor G4 ಚಿಪ್‌ಸೆಟ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಇದೆ. ಇನ್ನು ಈ ಫೋನ್ 16GB ಮತ್ತು 256GB RAM ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಕ್ಯಾಮೆರಾ: ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸಲ್ ಮುಖ್ಯ ಕ್ಯಾಮೆರಾ, 10.8 ಮೆಗಾಪಿಕ್ಸಲ್ ಸೆಕೆಂಡರಿ ಕ್ಯಾಮೆರಾ ಮತ್ತು 10.5 ಮೆಗಾಪಿಕ್ಸಲ್ ತೃತೀಯ ಕ್ಯಾಮೆರಾ ಪಡೆದಿದೆ.ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 10 ಮೆಗಾಪಿಕ್ಸಲ್ ಸಾಮರ್ಥ್ಯದ ಎರಡು ಕ್ಯಾಮೆರಾ ಇದೆ.
ಬ್ಯಾಟರಿ: ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್ ಫೋನ್ 4,650mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W ವೈರ್ಡ್ ಚಾರ್ಜಿಂಗ್ ಮತ್ತು Qi ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದು IPX8 ರೇಟಿಂಗ್‌ನೊಂದಿಗೆ ವಾಟರ್ ರೆಸಿಸ್ಟೆನ್ಸ್ ಸೌಲಭ್ಯ ಪಡೆದಿದೆ.


Click it and Unblock the Notifications








