Home
ಮೊಬೈಲ್

ಖುಷಿ ಸುದ್ದಿ.. ಹಳೆ ಫೋನಿಗೆ 'ಬ್ರೇಕ್ ಅಪ್' ಲೆಟರ್! ಬರ್ತಿದೆ ಹೊಸ ಫೋಲ್ಡೇಬಲ್ ಫೋನ್‌

ಸ್ಮಾರ್ಟ್‌ಫೋನ್ ಪ್ರಿಯರಿಗೆ ಗುಡ್‌ನ್ಯೂಸ್‌! ಗೂಗಲ್​ ಕಂಪನಿಯಿಂದಲೂ ಬರುತ್ತಿದೆ ಫೋಲ್ಡೇಬಲ್ ಮೊಬೈಲ್! ಹೌದು, ಗೂಗಲ್‌ (Google) ತನ್ನ ನೂತನ ಮೊಬೈಲ್‌ಗಳ ಬಗ್ಗೆ ಮಹತ್ವದ ಅಪ್ಡೇಟ್‌ ಘೋಷಿಸಿದೆ. ಗೂಗಲ್ ಪಿಕ್ಸೆಲ್ 9 ಸರಣಿಯ ಫೋನ್‌ಗಳನ್ನು ನಿರೀಕ್ಷೆಗಿಂತ ಮೊದಲೇ ಬಿಡುಗಡೆಯಾಗಲಿವೆ. ಅಂದರೆ, ಆಗಸ್ಟ್ 13 ರಂದು ನಡೆಯಲಿರುವ Pixel 9 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ನಿರೀಕ್ಷಿಸಿದ್ದಕ್ಕಿಂತ ಮುಂಚೆಯೇ ಅನಾವರಣಗೊಳಿಸಲು ಗೂಗಲ್ ಸಜ್ಜಾಗಿದೆ. ಇದರಲ್ಲಿ ಫೋಲ್ಡೇಬಲ್ ಮೊಬೈಲ್ ಕೂಡ ಇರಲಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ಗೂಗಲ್‌ ಸಿದ್ಧವಾಗಿದೆ.

ಹೌದು, ಗೂಗಲ್ ಪಿಕ್ಸೆಲ್ 9 ಸರಣಿಯ ಸ್ಮಾರ್ಟ್‌ಫೋನ್ ಮತ್ತು ಪಿಕ್ಸೆಲ್ ವಾಚ್ 3 ಖರೀದಿಗೆ ಸಾಕಷ್ಟು ಟೆಕ್ ಪ್ರಿಯರು ಕಾದು ಕುಳಿತಿದ್ದಾರೆ. ಈ ನೂತನ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ ಆಗಸ್ಟ್ 13ಕ್ಕಿಂತ ಮೊದಲೇ ಗ್ರಾಹಕರ ಕೈ ಸೇರಲಿದೆ. ಈ ಮಧ್ಯೆಯೇ, ಟೆಕ್ ದೈತ್ಯ ಗೂಗಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದು ಹೊಸ Pixel 9 Pro ಮತ್ತು Pixel 9 Pro ಫೋಲ್ಡ್‌ ಫೋನ್‌ಗಳ ವಿನ್ಯಾಸ ಮತ್ತು ವಿಶೇಷತೆಗಳ ಬಗ್ಗೆ ಸುಳಿವು ನೀಡಿದೆ.

ಹಳೆ ಫೋನಿಗೆ 'ಬ್ರೇಕ್ ಅಪ್' ಲೆಟರ್! ಬರ್ತಿದೆ ಹೊಸ ಫೋಲ್ಡೇಬಲ್ ಫೋನ್

ಟೀಸರ್ ಜೆಮಿನಿ ಯುಗಕ್ಕೆ ತಯಾರಿಸಿದ ಫೋನ್ ಬಗ್ಗೆ ಸುಳಿವು ನೀಡುತ್ತದೆ. ಹಳೆಯ ಸ್ಮಾರ್ಟ್‌ಫೋನ್‌ಗೆ ಬ್ರೇಕಪ್ ಲೆಟರ್ ಬರೆಯುವಂತೆ ಗೂಗಲ್ ಜೆಮಿನಿಗೆ ಕೇಳಿದೆ. ಟೀಸರ್‌ನಲ್ಲಿ ಗೂಗಲ್‌ನ ಸುಧಾರಿತ AI ಫೀಚರ್‌ಗಳನ್ನು ಖಚಿತಪಡಿಸುತ್ತದೆ. Pixel 9 Pro ಫೋಲ್ಡ್ ಆಯತಾಕಾರದ ಮಾಡ್ಯೂಲ್‌ನಲ್ಲಿ ಅಳವಡಿಸಿರುವ ಡ್ಯುಯಲ್ ಪಿಲ್ ಆಕಾರದ ಕ್ಯಾಮೆರಾ ಸೆಟಪ್ ಹೊಂದಿರುವುದನ್ನು ವಿಡಿಯೋ ತೋರಿಸುತ್ತದೆ. ಇದರಲ್ಲಿ Pixel 9, 9 Pro, 9 Pro XL ಮತ್ತು Pixel 9 Pro ಫೋಲ್ಡ್ ಸೇರಿವೆ.

ಭಾರತದಲ್ಲಿ ಬಿಡುಗಡೆ ಯಾವಾಗ? ಎಲ್ಲಿ ವೀಕ್ಷಿಸಬಹುದು?

ಪಿಕ್ಸೆಲ್ 9 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಆಗಸ್ಟ್ 13ರಂದು ಬೆಳಗ್ಗೆ 10 ಗಂಟೆಗೆ 'ಮೇಡ್ ಬೈ ಗೂಗಲ್' ಲಾಂಚ್ ಈವೆಂಟ್‌ನಲ್ಲಿ ಅನಾವರಣಗೊಳಿಸಲಾಗುವುದು. ಈವೆಂಟ್ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿರುವ Googleನ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಧಿಕೃತ YouTube ಚಾನಲ್‌ನಲ್ಲಿ ಮತ್ತು Google Store ವೆಬ್‌ಸೈಟ್ ಮೂಲಕ ವೀಕ್ಷಿಸಬಹುದು.

ಪಿಕ್ಸೆಲ್ 9 ಸರಣಿಯ ವಿಶೇಷತೆಗಳು

ಮುಂಬರುವ Pixel 9 Pro Fold ಗೂಗಲ್‌ ಬ್ರ್ಯಾಂಡ್‌ನಿಂದ ಭಾರತದಲ್ಲಿ ಬಿಡುಗಡೆಯಾಗುತ್ತೊರುವ ಮೊದಲ ಮಡಿಸಬಹುದಾದ (ಫೋಲ್ಡೇಬಲ್) ಫೋನ್‌ ಆಗಿದೆ. 'ಮೇಡ್ ಬೈ ಗೂಗಲ್' ಬಿಡುಗಡೆ ಕಾರ್ಯಕ್ರಮದ ಬಳಿಕ, ಒಂದು ದಿನದ ನಂತರ (ಆಗಸ್ಟ್ 14) ಲಾಂಚ್ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಕ್ಲಿಪ್, ಸ್ಮಾರ್ಟ್‌ಫೋನ್ ಅನುಭವವನ್ನು ಮರು ವ್ಯಾಖ್ಯಾನಿಸಬಹುದಾದ ನೂತನ ಫೀಚರ್‌ಗಳ ಕುರಿತು ಮಾಹಿತಿ ಬಹಿರಂಗಪಡಿಸುತ್ತದೆ.

ಹಳೆ ಫೋನಿಗೆ 'ಬ್ರೇಕ್ ಅಪ್' ಲೆಟರ್! ಬರ್ತಿದೆ ಹೊಸ ಫೋಲ್ಡೇಬಲ್ ಫೋನ್
  • Google Pixel 9: ಇದು 6.03 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ.
  • Google Pixel 9 Pro: ಇದು ಸ್ವಲ್ಪ ದೊಡ್ಡದಾಗಿದೆ. Pixel 9 Pro 6.3 ಇಂಚಿನ ಡಿಸ್ಲ್ಪೇಯೊಂದಿಗೆ ಬರುತ್ತದೆ.
  • Google Pixel 9 Pro XL: ಈ ಮೊಬೈಲ್ ಸ್ಟ್ಯಾಂಡರ್ಡ್ ಫೋನ್‌ಗಳಲ್ಲಿ ದೊಡ್ಡದಾಗಿದೆ. Pixel 9 Pro XL 6.7 ಇಂಚಿನ ಡಿಸ್ಪ್ಲೇ ಮತ್ತು 16GB RAM ಅನ್ನು ಹೊಂದಿರುತ್ತದೆ.
  • Google Pixel 9 Fold: ಇದು 6.4 ಇಂಚಿನ ಹೊರಗಿನ ಡಿಸ್ಲ್ಪೇ ಮತ್ತು 7.9 ಇಂಚಿನ ಒಳಗಿನ ಮಡಿಸಬಹುದಾದ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಹಿಂದಿನ ಪಿಕ್ಸೆಲ್ ಫೋಲ್ಡ್‌ನ 7.6 ಇಂಚಿನ ಒಳಗಿನ ಡಿಸ್ಪ್ಲೇ ಮತ್ತು 5.8 ಇಂಚಿನ ಹೊರಗಿನ ಡಿಸ್ಪ್ಲೇಯಿಂದ ಅಪ್‌ಗ್ರೇಡ್ ಆಗಿದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್

ಕಂಪನಿಯು Google Pixel 9, Pixel 9 Pro Teaser ಜೊತೆಗೆ Google Pixel 9 Pro ಫೋಲ್ಡ್‌ನ ಟೀಸರ್ ಅನ್ನು ಸಹ ಹಂಚಿಕೊಂಡಿದೆ. ಅಧಿಕೃತ ಟೀಸರ್‌ನಲ್ಲಿ ನೋಡಿದಂತೆ, ಗೂಗಲ್ ಪಿಕ್ಸೆಲ್ 9 ಪ್ರೊ ಟ್ರಿಪಲ್ ರಿಯರ್ ಕ್ಯಾಮೆರಾಗಳು, ಫ್ಲ್ಯಾಷ್ ಮತ್ತು ಲೇಸರ್ ಆಟೋಫೋಕಸ್‌ನೊಂದಿಗೆ ಸಣ್ಣ ಕ್ಯಾಮೆರಾ ಡೆಕೊವನ್ನು ಹೊಂದಿದೆ. Pixel 9 Pro ಹಿಂದಿನ ಪ್ಯಾನೆಲ್‌ನಲ್ಲಿ 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಒಳಗೊಂಡಿರುವ ಸಾಧ್ಯತೆಯಿದೆ. ಇದು Pixel 9 Pro XLನಲ್ಲಿಯೂ ಲಭ್ಯವಾಗಲಿದೆ.

AI ಫೀಚರ್ಸ್‌ನೊಂದಿಗೆ ಫೋನ್ ಲಾಂಚ್

ಮೊದಲೇ ಹೇಳಿದಂತೆ, Pixel 9 Pro ಮತ್ತು Pixel 9 Pro ಫೋಲ್ಡ್‌ಗಳು AI ವೈಶಿಷ್ಟ್ಯಗಳೊಂದಿಗೆ ಬರುವುದನ್ನು ಖಚಿತಪಡಿಸಲಾಗಿದೆ. ಇದನ್ನು 'Google AI' ಎಂದು ಬ್ರಾಂಡ್ ಮಾಡಬಹುದು. ಭಾರತದಲ್ಲಿ ಪಿಕ್ಸೆಲ್ 9 ಪ್ರೊ ಫೋಲ್ಡ್ ಬಿಡುಗಡೆ ದಿನಾಂಕವನ್ನು ಅಧಿಕೃತಪಡಿಸಲು ಗೂಗಲ್ ಇಂಡಿಯಾ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ಅನ್ನು ಬಳಸಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಸ್ವಲ್ಪ ಸಮಯ ಕಾಯಬೇಕು.

Best Mobiles in India

English summary
Google has confirmed the launch of Pixel 9 series and Pixel Watch 3 on August 13th. which is two months ahead of the usual October launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+