Home
ಮೊಬೈಲ್

ಹೊಸ Google ಫೋನ್ ಖರೀದಿಗೆ ಲಭ್ಯ; 3000 ಡಿಸ್ಕೌಂಟ್ ಘೋಷಣೆ.. ಸಾಟಿ ಇಲ್ಲದ ಫೀಚರ್ಸ್.. ಬೆಲೆ ಎಷ್ಟು?

ಗೂಗಲ್ ಸಂಸ್ಥೆಯು ಇತ್ತೀಚೆಗೆ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಈ ಮೊಬೈಲ್ ಗೂಗಲ್ ಪಿಕ್ಸೆಲ್ 9a (Google Pixel 9a) ಎಂಬ ಹೆಸರಿನೊಂದಿಗೆ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಗೂಗಲ್ ಪಿಕ್ಸೆಲ್ 9 ಸರಣಿಯ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿದೆ. ಅಂದಹಾಗೆ, ಈ ನೂತನ ಫೋನ್ ಇಂದು (ಏಪ್ರಿಲ್ 16) ರಂದು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಿದೆ. ಈ ಹೊಸ ಫೋನಿನ ಖರೀದಿ ಮೇಲೆ ಯಾವೆಲ್ಲಾ ಆಫರ್ ಲಭ್ಯವಿದೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಗೂಗಲ್ ಪಿಕ್ಸೆಲ್ 9a ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ಗೂಗಲ್ ಟೆನ್ಸರ್ G4 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 5,100mAh ಸಾಮರ್ಥ್ಯದ ಬ್ಯಾಟರಿ ಮತ್ತು 33W ವೈರ್ಡ್ ಚಾರ್ಜಿಂಗ್ ಒಳಗೊಂಡಿದೆ. ಇದು ಹಲವು ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಆಡ್ ಮಿ, ಫೇಸ್ ಅನ್‌ಬ್ಲರ್, ಮ್ಯಾಜಿಕ್ ಎಡಿಟರ್ ಮತ್ತು ಎರೇಸರ್ ಮತ್ತು ಬೆಸ್ಟ್ ಟೇಕ್ ಫೀಚರ್ ಲಭ್ಯವಿದೆ.

Google Pixel 9a ಸೇಲ್ ಶುರು; 3000 ರಿಯಾಯಿತಿ.. ಬೆಲೆ ಎಷ್ಟು? ಫೀಚರ್ಸ್‌ ಹೇಗಿವೆ

ಗೂಗಲ್ ಪಿಕ್ಸೆಲ್ 9a ಬೆಲೆ ಮತ್ತು ಆಫರ್

ಗೂಗಲ್ ಪಿಕ್ಸೆಲ್ 9a ಫೋನಿನ ಬೆಲೆ 49,999 ರೂ. ಆಗಿದೆ. ಇದು 8GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಮಾರಾಟವಾಗಲಿದೆ. ನೀವು ಈ ಫೋನನ್ನು ಮೂರು ಬಣ್ಣಗಳಲ್ಲಿ ಖರೀದಿಸಬಹುದು. ಇದು ಅಬ್ಸಿಡಿಯನ್, ಪಿಂಗಾಣಿ ಮತ್ತು ಐರಿಸ್‌ ಬಣ್ಣಗಳ ಆಯ್ಕೆಯೊಂದಿಗೆ ಬರುತ್ತದೆ. ಇಂದಿನಿಂದ (ಏಪ್ರಿಲ್ 16) ಫ್ಲಿಪ್‌ಕಾರ್ಟ್ ಮೂಲಕ ಅಧಿಕೃತವಾಗಿ ಮಾರಾಟ ಶುರು ಮಾಡಿದೆ. ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ 3,000 ರೂ.ಗಳ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ. ಜೊತೆಗೆ 24 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯ ಪ್ರಯೋಜನ ಪಡೆಯಬಹುದು.

ಗೂಗಲ್ ಪಿಕ್ಸೆಲ್ 9a ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಗೂಗಲ್ ಪಿಕ್ಸೆಲ್ 9a ಮೊಬೈಲ್ 6.3 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2,424 × 1,080 ಪಿಕ್ಸೆಲ್‌ ರೆಸಲ್ಯೂಶನ್‌ ಬೆಂಬಲ ಹೊಂದಿದೆ. ಈ ಸ್ಕ್ರೀನ್ ಎಚ್‌ಡಿಆರ್ ಬೆಂಬಲ, 1800 ನಿಟ್ಸ್‌ ಎಚ್‌ಡಿಆರ್, 2700 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರ ಬೆಂಬಲ ಹೊಂದಿದೆ. ಈ ಫೋನಿನ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರುತ್ತದೆ.

ಪ್ರೊಸೆಸರ್ ಯವುದು?

ಗೂಗಲ್ ಪಿಕ್ಸೆಲ್ 9a ಸ್ಮಾರ್ಟ್‌ಫೋನ್ ಗೂಗಲ್ ಟೆನ್ಸರ್ G4 ಪ್ರೊಸೆಸರ್ ಹೊಂದಿದೆ. ಇದನ್ನು ಟೈಟಾನ್ M2 ಭದ್ರತಾ ಪ್ರೊಸೆಸರ್ ಜೊತೆಗೆ ಚಿಪ್‌ನೊಂದಿಗೆ ಜೋಡಿಸಲಾಗಿದೆ. ಇದು ಆಂಡ್ರಾಯ್ಡ್‌ 15 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಈ ಮೊಬೈಲ್ ಏಳು ವರ್ಷಗಳ ಓಎಸ್ ಮತ್ತು ಪಿಕ್ಸೆಲ್ ಡ್ರಾಪ್ ನವೀಕರಣಗಳೊಂದಿಗೆ ಬರುತ್ತದೆ. ಈ ಫೊನ್ 8GB RAM + 128GB ಸ್ಟೋರೇಜ್ ಹೊಂದಿದೆ.

Google Pixel 9a ಸೇಲ್ ಶುರು; 3000 ರಿಯಾಯಿತಿ.. ಬೆಲೆ ಎಷ್ಟು? ಫೀಚರ್ಸ್‌ ಹೇಗಿವೆ

ಅದ್ಭುತ ಕ್ಯಾಮೆರಾ ರಚನೆ

ಗೂಗಲ್ ಪಿಕ್ಸೆಲ್ 9a ಫೋನ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು OIS ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಮೊಬೈಲ್ 8x ವರೆಗೆ ಸೂಪರ್ ರೆಸಲ್ಯೂಷನ್ ಜೂಮ್, 0.5 ನಲ್ಲಿ ಆಪ್ಟಿಕಲ್ ಗುಣಮಟ್ಟ, 4K ವಿಡಿಯೋ ರೆಕಾರ್ಡಿಂಗ್‌ ಬೆಂಬಲ ಪಡೆದಿದೆ.

ಬೊಂಬಾಟ್ ಬ್ಯಾಟರಿ

ಗೂಗಲ್ ಪಿಕ್ಸೆಲ್ 9a ಮೊಬೈಲ್ 5,100mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 33W ವೈರ್ಡ್ ಮತ್ತು 7.5W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಫೋನ್ ಸ್ಟೀರಿಯೊ ಸ್ಪೀಕರ್‌ಗಳು, ಕಾರು ಅಪಘಾತ ಪತ್ತೆ ವೈಶಿಷ್ಟ್ಯಗ ಒಳಗೊಂಡಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6E, ಎನ್‌ಎಫ್‌ಸಿ ಮತ್ತು eSIM ಬೆಂಬಲ ಹೊಂದಿದೆ.

Best Mobiles in India

English summary
Google Pixel 9a Now Available for Purchase in India via Flipkart: Check Out Price, Offers, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+