ಗೂಗಲ್ 'Pixel 10 Pro Fold' ಟೀಸರ್ ಔಟ್: ಫಸ್ಟ್ ಲುಕ್ ನೋಡಿ!
ಟೆಕ್ ದೈತ್ಯ ಗೂಗಲ್ ತನ್ನ ಬಹುನಿರೀಕ್ಷಿತ ಪಿಕ್ಸೆಲ್ 10 ಸರಣಿಯ ಬಿಡುಗಡೆಗಾ ಇದೇಗಿ ಆಗಸ್ಟ್ 20 ರಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ತಂತ್ರಜ್ಞಾನ ಪ್ರಿಯರಲ್ಲಿ ಭಾರೀ ಕುತೂಹಲ ಹೆಚ್ಚಿಸಿದೆ. ಈ ಬಿಡುಗಡೆ ಕಾರ್ಯಕ್ರಮಕ್ಕೆ ಕೇವಲ ಒಂದು ವಾರ ಬಾಕಿ ಇರುವಾಗಲೇ, ಗೂಗಲ್ ತನ್ನ ಅಭಿಮಾನಿಗಳಿಗಾಗಿ ಸರಣಿಯ ಪ್ರಮುಖ ಸಾಧನವಾದ Pixel 10 Pro Fold ಫೋನಿನ ಕಿರು ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ 30-ಸೆಕೆಂಡ್ ವೀಡಿಯೊ, ಮುಂಬರುವ ಫೋನ್‌ಗೆ ಒಂದು ವಿಶಿಷ್ಟ ಮತ್ತು ಆರಂಭಿಕ ನೋಟವನ್ನು ಒದಗಿಸಿದೆ.
ಟೀಸರ್ ವೀಡಿಯೊದಲ್ಲಿ ಕಾಣುವಂತೆ, Pixel 10 Pro Fold ಅದರ ಹಿಂದಿನ ಮಾದರಿಯಾದ ಪಿಕ್ಸೆಲ್ 9 ಪ್ರೊ ಫೋಲ್ಡ್‌ಗೆ ವಿನ್ಯಾಸದಲ್ಲಿ ಸಾಮ್ಯತೆಗಳನ್ನು ಹೊಂದಿದೆ ಎನ್ನಬಹುದು. ಫೋನ್ ಸುತ್ತಲಿನ ಬೆಜೆಲ್‌ಗಳು ಬಹುತೇಕ ಒಂದೇ ಆಗಿವೆ. ವಿಡಿಯೋದಲ್ಲಿ ಸಾಧನದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾದ ಬೂದು ಬಣ್ಣವನ್ನು ಹೈಲೈಟ್ ಮಾಡಲಾಗಿದೆ, ಇದು ಗೂಗಲ್ ಪಿಕ್ಸೆಲ್ 10 ಸರಣಿಗಾಗಿ ಈಗಾಗಲೇ ಬಹಿರಂಗಪಡಿಸಿದ್ದ ಬಣ್ಣವಾಗಿದೆ. ಜೊತೆಗೆ, ಮಡಚುವ ಡಿಸ್‌ಪ್ಲೇಯ ಮೇಲಿನ ಬಲ ಮೂಲೆಯಲ್ಲಿರುವ ಸೆಲ್ಫಿ ಕ್ಯಾಮೆರಾ ಕೂಡ ಟೀಸರ್‌ನಲ್ಲಿ ಗಮನಸೆಳೆದಿದೆ.
ಈ ಟೀಸರ್ ವೀಡಿಯೊ Pixel 10 Pro Fold ಕುರಿತ ಒಂದು ನೋಟವನ್ನು ನೀಡಿದೆಯಾದರೂ, ಯಾವುದೇ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಈಗಾಗಲೇ ಸೋರಿಕೆಯಾದ ಮಾಹಿತಿಗಳು ಈ ಫೋನ್‌ನ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿವೆ. ಮುಂಬರುವ Pixel 10 Pro Fold ಫೋನ್ ಈ ಕೆಳಗಿನ ಫೀಚರ್ಸ್ ಹೊಂದಿರುವ ಸಾಧ್ಯತೆ ಇದೆ.
Pixel 10 Pro Fold: ನಿರೀಕ್ಷಿತ ವೈಶಿಷ್ಟ್ಯಗಳು
ಸೋರಿಕೆಯಾದ ವರದಿಗಳ ಪ್ರಕಾರ, Pixel 10 Pro Fold ಫೋನ್ ಪ್ರಬಲವಾದ ತಾಂತ್ರಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಇದು 3,000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ 6.4-ಇಂಚಿನ ಹೊರಗಿನ ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಕ್ಯಾಮೆರಾ ವಿಭಾಗದಲ್ಲಿ, ಇದು 48MP ಮುಖ್ಯ ಸೆನ್ಸರ್, 10.5MP ಅಲ್ಟ್ರಾವೈಡ್ ಲೆನ್ಸ್ ಮತ್ತು 5x ಆಪ್ಟಿಕಲ್ ಜೂಮ್ ಹೊಂದಿರುವ 10.8MP ಟೆಲಿಫೋಟೋ ಕ್ಯಾಮೆರಾ ಒಳಗೊಂಡಿರುವ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ನಿರೀಕ್ಷಿಸಲಾಗಿದೆ. ಸೆಲ್ಫಿಗಾಗಿ, ಹೊರಗಿನ ಮತ್ತು ಮಡಚುವ ಡಿಸ್‌ಪ್ಲೇಗಳಲ್ಲಿ ತಲಾ ಒಂದರಂತೆ ಎರಡು 10MP ಕ್ಯಾಮೆರಾಗಳಿವೆ ಎಂದು ಹೇಳಲಾಗಿದೆ.

Pixel 10 Pro Fold ಫೋನ್‌ನ ಕಾರ್ಯಕ್ಷಮತೆಗೆ ಶಕ್ತಿ ನೀಡಲು, ಇದು ಗೂಗಲ್‌ನ ಇತ್ತೀಚಿನ ಟೆನ್ಸರ್ G5 ಚಿಪ್ ಅನ್ನು 16GB RAM ಜೊತೆಗೆ ಒಳಗೊಂಡಿದೆ. ಶೇಖರಣಾ ಸಾಮರ್ಥ್ಯದಲ್ಲಿ ಇದು 256GB, 512GB ಮತ್ತು 1TB ಯ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಬ್ಯಾಟರಿ ಸಾಮರ್ಥ್ಯದಲ್ಲಿ, ಇದು 5,015mAh ಬ್ಯಾಟರಿಯನ್ನು ಹೊಂದಿದ್ದು, ದೀರ್ಘಕಾಲದ ಬಳಕೆಗೆ ಸೂಕ್ತವಾಗಿದೆ ಎನ್ನಲಾಗಿದೆ. ಹಾಗೆಯೇ, ಈ ಸಾಧನವು ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಸಹ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.
ಒಟ್ಟಾರೆಯಾಗಿ, ಗೂಗಲ್‌ನ Pixel 10 Pro Fold ಆಕರ್ಷಕ ವಿನ್ಯಾಸ ಮತ್ತು ಶಕ್ತಿಯುತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವ ಸಾಧ್ಯತೆ ಇದೆ. ಆಗಸ್ಟ್ 20 ರಂದು ನಡೆಯಲಿರುವ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಎಲ್ಲಾ ಮಾಹಿತಿಗಳು ಅಧಿಕೃತವಾಗಿ ದೃಢೀಕೃತಗೊಳ್ಳುವ ನಿರೀಕ್ಷೆಯಿದೆ. ತಂತ್ರಜ್ಞಾನದ ಹೊಸ ಹಾದಿಗಳನ್ನು ಪರಿಚಯಿಸುವ ಗೂಗಲ್‌ನ ಈ ಪ್ರಯತ್ನವು, ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಬಹುದು. ಈ ಕುರಿತು ನಿಮ್ಮ ಅಭಿಪ್ರಾಯಗಳೇನು? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








