Home
ಮೊಬೈಲ್

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಬಂತು ಗೂಗಲ್ ವಾಯ್ಸ್‌..!

ಇನ್ನು ಮುಂದೆ ಮೊಬೈಲ್ ಮನೆಯ ಯಾವ ಮೂಲೆಯಲ್ಲಿ ಇದ್ದರೂ ಪರವಾಗಿಲ್ಲ, ಅದನ್ನು ತೆಗೆದುಕೊಳ್ಳೋಕೆ ನಿಮಗೆ ಅಸಾಧ್ಯವಾಗಿದ್ದರೂ ಪರವಾಗಿಲ್ಲ. ಕೈಯಲ್ಲಿ ಮೊಬೈಲ್ ಇಲ್ಲದೆಯೂ ಕೂಡ ಮೊಬೈಲ್ ಆಪರೇಟ್ ಮಾಡಬಹುದು. ಯಾರಿಗೆ ತಾತ್ಕಾಲಿಕವಾಗಿ ಅಥವಾ ಕೆಲವು ಗಂಭೀರ ಕಾರಣಗಳಿಂದ ಟಚ್ ಸ್ಕ್ರೀನ್ ನ್ನು ಬಳಸಲು ಸಾಧ್ಯವಾಗುವುದಿಲ್ಲವೋ ಅವರಿಗಾಗಿ ಗೂಗಲ್ ಹ್ಯಾಂಡ್ಸ್ ಫ್ರೀ ಆಕ್ಸಿಸ್ ಅಥವಾ ವಾಯ್ಸ್ ಕಮಾಂಡ್ ಗಳ ಮೂಲಕ ಸ್ಮಾರ್ಟ್ ಫೋನ್ ನ್ನು ಆಕ್ಸಿಸ್ ಮಾಡುವ ಸೌಲಭ್ಯವನ್ನು ಒದಗಿಸಿಕೊಡಲಿದೆ ಎಂದು ಪ್ರಕಟಿಸಿದೆ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಬಂತು ಗೂಗಲ್ ವಾಯ್ಸ್‌..!

ಈ ಆಪ್ ನ್ನು ವಾಯ್ಸ್ ಆಕ್ಸಿಸ್ ಎಂದು ಕರೆಯಲಾಗಿದ್ದು ಎಲ್ಲಾ ಆಂಡ್ರಾಯ್ಡ್ ಗಳಲ್ಲಿ ಲಭ್ಯವಿದೆ. ಈ ವಾಯ್ಸ್ ಆಕ್ಸಿಸ್ ಆಪ್ ನ್ನು ಬಳಸಿ ಬಳಕೆದಾರರು ಅನೇಕ ಕೆಲಸಗಳನ್ನು ಮಾಡಬಹುದು ಉದಾಹರಣೆಗೆ ಆಪ್ ಮೂಲಕ ನೇವಿಗೇಷನ್ ಮಾಡುವುದು, ಕಂಪೋಸಿಂಗ್ ಮತ್ತು ಟೆಕ್ಸ್ಟ್ ಎಡಿಟಿಂಗ್, ಗೂಗಲ್ ಅಸಿಸ್ಟೆಂಟ್ ಜೊತೆಗೆ ಮಾತುಕತೆ, ಕೆಲವು ವಾಯ್ಸ್ ಕಮಾಂಡ್ ಗಳನ್ನು ಬಳಸಿ ಗೆಯ್ಚರ್ ನ್ನು ರಿಕ್ರಿಯೇಟ್ ಮಾಡುವುಜು ಇತ್ಯಾದಿ.

ಈ ಗೂಗಲ್ ವಾಯ್ಸ್ ಆಕ್ಸಿಸ್ ಎಪ್ರಿಲ್ 2016 ರಿಂದ ಬೆಟಾ ವರ್ಷನ್ ನಲ್ಲೇ ಇತ್ತು ಮತ್ತು ಲಿಮಿಟೆಡ್ ಮೊಬೈಲಿಟಿ ಇರುವ ಜನರನ್ನೇ ಗುರಿಯಾಗಿಸಿಕೊಳ್ಳಲಾಗಿತ್ತು. ಈ ಪ್ರೊಡಕ್ಟ್ ಜೊತೆ ಕೆಲಸ ಮಾಡಿದ 10 ಸೆಕೆಂಡ್ ಗೆ ನಾನಿದಕ್ಕೆ ಫಿದಾ ಆಗಿಬಿಟ್ಟೆ. ನಾನು ಇದನ್ನು ಈಗ ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಆಪ್ ನ ಪ್ರಾರಂಭಿಕ ಪ್ರೊಟೋಟೈಪ್ ನಲ್ಲಿ ಕಾರ್ಯನಿರ್ವಹಿಸಿದ ಗೂಗಲ್ ಆಕ್ಸಿಸೇಬ್ಲಿಟಿ ಸದಸ್ಯರಲ್ಲಿ ಒಬ್ಬರಾಗಿರುವ ಸ್ಟೀಫನ್..

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಬಂತು ಗೂಗಲ್ ವಾಯ್ಸ್‌..!

ಸದ್ಯಕ್ಕೆ ಇಂಗ್ಲೀಷ್ ನಲ್ಲಿ ಮಾತ್ರ!

ನೀವು ನಿಮ್ಮ ವಾಯ್ಸ್ ನ್ನು ಬಳಸಿ ಜಗತ್ತನ್ನು ಆಕ್ಸಿಸ್ ಮಾಡಬಹುದು.ಇದು ನನ್ನ ಜೀವನಕ್ಕೆ ಬಹಳ ಬೆಲೆ ನೀಡಿದೆ. ವಿಶ್ವದಾದ್ಯಂತ ಇಂಗ್ಲೀಷ್ ಭಾಷೆಯಲ್ಲಿ ಇದು ಲಭ್ಯವಿದೆ ಮತ್ತು ಭವಿಷ್ಯದಲ್ಲಿ ಇತರೆ ಭಾಷೆಗಳಲ್ಲಿ ಇದನ್ನು ತರಲಾಗುತ್ತದೆ ಎಂದು ಗೂಗಲ್ ತಿಳಿಸಿದೆ.

ಇನ್ಸ್ಟಾಲ್ ಮಾಡಿಕೊಳ್ಳುವ ವಿಧಾನ:

ಈಗಾಗಲೇ ಈ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಮತ್ತು ಅದರ ಸೈಜ್ 4.6ಎಂಬಿ. ಒಮ್ಮೆ ಇನ್ಸ್ಟಾಲ್ ಮಾಡಿಕೊಂಡ ನಂತರ, ಫೀಚರ್ ಗಳನ್ನು ಸೆಟ್ಟಿಂಗ್ಸ್ > ಆಕ್ಸಿಸೇಬ್ಲಿಟಿ ಗೆ ತೆರಳಿ ವಾಯ್ಸ್ ಆಕ್ಸಿಸ್ ಸ್ವಿಚ್ ನ್ನು ಆನ್ ಮಾಡಿಕೊಂಡರಾಯಿತು. ಈ ನಿಟ್ಟಿನಲ್ಲಿ ಸೆಟ್ ಅಪ್ ಟ್ಯೂಟೋರಿಯಲ್ ನ್ನು ಆಪ್ ಮೊದಲ ಪೇಜ್ ನಲ್ಲಿಯೇ ಗೂಗಲ್ ತಿಳಿಸುತ್ತದೆ. ಸ್ಮಾರ್ಟ್ ಫೋನ್ ನಲ್ಲಿ ಓಕೆ ಗೂಗಲ್ ಕಮಾಂಡ್ ನ್ನು ಎಲ್ಲಾ ಪ್ರದೇಶಗಳಲ್ಲೂ ಆಕ್ಟಿವೇಟ್ ಮಾಡಿರಬೇಕಾಗುತ್ತದೆ.

ಪಾರ್ಕಿನ್ಸನ್ ಸಮಸ್ಯೆ, ಆರ್ಥೈಟೀಸ್ , ಸ್ಪೈನಲ್ ಕಾರ್ಡ್ ಗಾಯಗಳು, ಮಲ್ಟಿಪಲ್ ಸ್ಕೆರೋಸಿಸ್ ನಂತಹ ಸಮಸ್ಯೆಯಿಂದ ಬಳಲುವವರಿಗೆ ಇದು ಹೆಚ್ಚು ಪ್ರಸ್ತುತವಾಗಿದೆ. ಅಷ್ಟೇ ಅಲ್ಲದೆ ಅಡುಗೆ ಮತ್ತು ಇತರೆ ಮನೆಬಳಕೆ ವಸ್ತುಗಳ ವಿಚಾರದಲ್ಲಿ ಬ್ಯುಸಿಯಾಗಿದ್ದಾಗ ಈ ವಾಯ್ಸ್ ಆಕ್ಸಿಸ್ ಬಳಕೆ ಹೆಚ್ಚು ಸಹಾಯ ಮಾಡಲಿದೆ ಎಂದು ತಿಳಿಸುತ್ತಾರೆ. ಕನ್ನಡಿಗರಿಗೆ ಇನ್ನು ಅಷ್ಟೇನು ಸಹಾಯ ಮಾಡದೇ ಇದ್ದರೂ ಇಂಗ್ಲೀಷಿಗರಿಗೆ ಇದು ಹೆಚ್ಚು ಪ್ರಸ್ತುತವಾಗಿದೆ.

Best Mobiles in India

English summary
Google Voice Access Gives You Hands-Free Access to Your Android Smartphone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+