ಗೂಗಲ್ ಧ್ವನಿ ಸೇವೆಯಲ್ಲಿ ಇನ್ನು ಭಾರತೀಯ ಉಪಭಾಷೆ

Posted By:

ಭಾರತೀಯ ಆಡುಭಾಷೆಯನ್ನು ಗೂಗಲ್ ಧ್ವನಿ ಸೇವೆಗೆ ಸೇರಿಸುವುದರ ಮೂಲಕ ಗೂಗಲ್ ಇದೀಗ ಗೂಗಲ್ ಧ್ವನಿ ಸೇವೆಗೆ ಬೆಂಬಲವನ್ನೊದಗಿಸುತ್ತಿದೆ. ಇದಕ್ಕೂ ಮುನ್ನ ಗೂಗಲ್ ಧ್ವನಿ ಸೇವೆ ಅಮೇರಿಕನ್ ಉಪಭಾಷೆಯನ್ನು ಮಾತ್ರವೇ ಅರ್ಥಮಾಡಿಕೊಳ್ಳುತ್ತಿತ್ತು, ಭಾರತೀಯ ಉಪಭಾಷೆ ಅಥವಾ ಆಡುಭಾಷೆಯನ್ನು ಅರ್ಥಮಾಡಿಕೊಳ್ಳುವುದು ಗೂಗಲ್ ಧ್ವನಿ ಸೇವೆಗೆ ಕಷ್ಟವಾಗಿತ್ತು.

ಆದರೆ ಭಾರತೀಯ ಉಪಭಾಷೆಯ ಬೆಂಬಲದಿಂದ ಇನ್ನು ಗೂಗಲ್ ಧ್ವನಿ ಸೇವೆಯಲ್ಲಿ ನಾವು ಅಸಾಮಾನ್ಯ ಪ್ರಗತಿಗಳನ್ನು ಕಾಣಬಹುದಾಗಿದೆ. ಭಾರತೀಯ ಬಳಕೆದಾರರಿಗೆ ಹುಡುಕಾಟ ಅನುಭವವನ್ನು ಪ್ರದರ್ಶಿಸುವ ಕಾರ್ಯಕ್ರಮವಾದ ಗೂಗಲ್ ಕೆಫೆಯನ್ನು ನವದೆಹಲಿಯಲ್ಲಿ ಗೂಗಲ್ ಇಂಡಿಯಾ ಆಯೋಜಿಸಿತ್ತು.

ಗೂಗಲ್ ಧ್ವನಿಗೆ ಭಾರತದ ಉಪಭಾಷೆಯ ಹೆಮ್ಮೆಯ ಗರಿ

ಗೂಗಲ್‌ನ ಹುಡುಕಾಟ ಅನುಭವವನ್ನು ಸುಧಾರಿಸುವ ನಮ್ಮ ಪ್ರಯತ್ನ ಒಂದು ಮೈಲಿಗಲ್ಲಾಗಿದ್ದು ಭಾರತೀಯ ಬಳಕೆದಾರರು ಅಂತರ್ಜಾಲವನ್ನು ಹೆಚ್ಚು ತ್ವರಿತವಾಗಿ ಸರ್ಚ್ ಮಾಡಬಹುದಾಗಿದ್ದು ಇದು ಹಿಂದೆಂದಿಗಿಂತಲೂ ಅತ್ಯುತ್ತಮ ಸೇವೆಯನ್ನು ಒದಗಿಸಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಕಂಪೆನಿ ತಿಳಿಸಿದೆ.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾದ ಭಾರತೀಯ ಫುಟ್ಬಾಲ್ ಕ್ರೀಡಾಪಟು ಬೈಚುಂಗ್ ಭುಟಿಯಾ, ಹಾಡುಗಾರ್ತಿ ಮತ್ತು ರೂಪದರ್ಶಿ ಶಿಬಾನಿ ದಂಡೇಕರ್, ಬಾಣಸಿಗ ಕುನಾಲ್ ಕಪೂರ್ ಆಗಮಿಸಿದ್ದರು. ನಿಮ್ಮ ಆರೋಗ್ಯದ ಬಗೆಗಿನ ಮಾಹಿತಿ, ನಿಮ್ಮ ಫೋನ್‌ನಲ್ಲಿ ಅಲರಾಮ್ ಹೊಂದಿಸುವುದು ಇವೇ ಮೊದಲಾದ ಸೇವೆಗಳನ್ನು ನಿಮ್ಮ ಧ್ವನಿಯ ಮೂಲಕ ಪ್ರವೇಶಿಸಬಹುದಾಗಿದೆ. ಗೂಗಲ್ ಇಂಡಿಯಾದ ಮಾರುಕಟ್ಟೆ ಮುಖ್ಯಸ್ಥರಾದ ಸಂದೀಪ್ ಮೆನೋನ್ ಮಾತನಾಡುತ್ತಾ, ಹೊಸ ಚಲನಚಿತ್ರ ಸೇವೆಗಳು, ಕ್ರಿಕೆಟ್ ಸ್ಕೋರ್‌ಗಳು ಹೀಗೆ ಪ್ರಚಲಿತ ಮಾಹಿತಿಗಳನ್ನು ನೀಡುವ ಸಾಮರ್ಥ್ಯ ಇದೀಗ ಗೂಗಲ್ ಮಾಡುತ್ತದೆ ಎಂದು ತಿಳಿಸಿದ್ದಾರೆ.

ನಿಮ್ಮ ಧ್ವನಿಯನ್ನು ಬಳಸಿ ಇದೀಗ ಇಮೇಲ್ ಮತ್ತು ಎಸ್‌ಎಮ್‌ಎಸ್‌ಗಳನ್ನು ನಿಮಗೆ ಟೈಪ್ ಮಾಡಬಹುದಾಗಿದೆ. ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ನಿಮ್ಮ ಫೋನ್ ಸೆಟ್ಟಿಂಗ್‌ನಲ್ಲಿ Settings > Language and Input > and choosing Google voice typing ಈ ಆಯ್ಕೆಯನ್ನು ಅನುಸರಿಬೇಕಾಗುತ್ತದೆ.

<center><iframe width="100%" height="360" src="//www.youtube.com/embed/kqXLhWND358" frameborder="0" allowfullscreen></iframe></center>

English summary
This article tells about Google Voice Now Offers Support for Indian Dialect.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot